ಗುರುವಾರ , ಏಪ್ರಿಲ್ 22, 2021
30 °C

ಸಸಿಯನ್ನು ಶಿಶುಗಳಂತೆ ಪೋಷಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹೆತ್ತ ಮಕ್ಕಳಂತೆ ನೆಟ್ಟ ಸಸಿಗಳನ್ನು ಜೋಪಾನ ಮಾಡಿ ಪೋಷಿಸಿ ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಸುರೇಶ ಬಡಿಗೇರ್ ಹೇಳಿದರು.

ಅವರು ಗುರುವಾರ ನಂದಿಕೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಮುಖ್ಯ ಅತಿಥಿ ವಕೀಲ ಪ್ರದೀಪ ತೇಲ್ಕರ ಮಾತನಾಡಿ, ಗಿಡಗಳು ಇಲ್ಲದಿದ್ದರೆ ಮಾನವನ ಬದುಕು ಅಸಾಧ್ಯ ಎಂದರು. ಖಣದಾಳ ಜಿ.ಪಂ. ಸದಸ್ಯೆ ಅನಿತಾ ಪವನಕುಮಾರ ವಳಕೇರಿ ಮಾತನಾಡಿದರು.

 

ಅರಣ್ಯ ಅಧಿಕಾರಿ ಸಿ.ಎಸ್. ಅರಿಕೇರಿ, ಮಲ್ಲಣಗೌಡ, ಚಂದ್ರಯ್ಯ ಗುತ್ತೇದಾರ, ಸಂಪತಕುಮಾರ ವಳಕೇರಿ, ಗಣೇಶ ಹಾಲು ಭಾಗವಹಿಸಿದ್ದರು. ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ನಂದಿಕೂರ ಗ್ರಾಮ ಪಂಚಾಯತ ವಲಯದಲ್ಲಿ ಸುಮಾರು 300ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.