ಶನಿವಾರ, ಜನವರಿ 18, 2020
18 °C

ಸಸಿ ತಯಾರಿಸಲು ಡಾಪೋಗ ವಿಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ಕಿಆಲೂರ: ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಇಲ್ಲಿಗೆ ಸಮೀಪವಿರುವ ಮಲಗುಂದ ಗ್ರಾಮದ ಪ್ರಗತಿಪರ ರೈತ ರೇಣುಕಸ್ವಾಮಿ ಹಿರೇಮಠ ಎಂಬುವರ ಕೃಷಿ ಭೂಮಿಯಲ್ಲಿ ಯಂತ್ರ ಚಾಲಿತ ಭತ್ತದ ನಾಟಿ ಪದ್ಧತಿಗೆ ಅವಶ್ಯವಿರುವ ಸಸಿಮಡಿಯನ್ನು ಡಾಪೋಗ ವಿಧಾನದಿಂದ ತಯಾರಿಸುವ ಪ್ರಾತ್ಯಕ್ಷಿಕೆ ಈಚೆಗೆ ನಡೆಯಿತು.ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡಿದ್ದ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ತಜ್ಞೆ ಡಾ.ಟಿ.ಎಂ. ಸೌಮ್ಯ ಮಾತನಾಡಿ, `ಪ್ರತಿವರ್ಷವೂ ರೈತನ ಕೃಷಿ ಖರ್ಚುವೆಚ್ಚದಲ್ಲಿ ಗಣನೀಯ ಹೆಚ್ಚಳವಾಗುತ್ತಿದ್ದು ಒಳ್ಳೆಯ ಲಾಭ ದೊರೆಯದೇ ತೀವ್ರ ಕಷ್ಟವನ್ನು ಎದುರಿಸುವಂತಾಗಿದೆ. ಒಂದೆಡೆ ಉತ್ತಮ ಇಳುವರಿಯೂ ದೊರೆಯದೇ ಮತ್ತೊಂದೆಡೆ ಒಳ್ಳೆಯ ಬೆಲೆಯೂ ದೊರಕದೇ ಸಮಸ್ಯೆ ಎದುರಿಸು ವಂತಾಗಿದೆ. ಅತ್ಯಂತ ಕಡಿಮೆ ನಿರ್ವ ಹಣಾ ವೆಚ್ಚದಲ್ಲಿ ಹೆಚ್ಚಿನ ಆದಾಯ ವನ್ನು ತಂದುಕೊಳ್ಳುವ ನಿಟ್ಟಿನಲ್ಲಿ ಗಂಭೀರ ಆಲೋಚನೆ ನಡೆಸುವ ಅಗತ್ಯವಿದೆ~ ಎಂದರು. ತವನಪ್ಪ ಹನುಮಕ್ಕನವರ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು, `ಯಂತ್ರ ಚಾಲಿತ ಭತ್ತದ ನಾಟಿ ಪದ್ಧತಿಯಿಂದ ಸುಲಭವಾಗಿ ಕೃಷಿ ಚಟುವಟಿಕೆಗಳನ್ನು ನಡೆಸಬಹುದಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಕೃಷಿ ಕಾರ್ಮಿಕರ ಅಲಭ್ಯತೆ ತೀವ್ರವಾಗಿ ಕಾಡುತ್ತಿದ್ದು ಜಮೀನುಗಳಲ್ಲಿ ಕಾಲಕಾಲಕ್ಕೆ ಅವಶ್ಯ ಕೃಷಿ ಕಾರ್ಯಗಳನ್ನು ನೆರವೇರಿಸಲು ಹೆಣಗಾಡುವಂತಾಗಿದೆ. ಸುಲಭ ಹಾಗೂ ಹೆಚ್ಚು ಲಾಭದಾಯಕ ಕೃಷಿ ಕಾರ್ಯಗಳಿಗೆ ಮುಂದಾಗಬಹುದು~ ಎಂದರು.ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಸರೋಜಾ ತಳವಾರ, ರೇಖಾ ಕೆ.ಎನ್ ಹಾಗೂ ಇತರ ತಜ್ಞರು, ಮಲಗುಂದ, ಯತ್ತಿನಹಳ್ಳಿ, ಶಾಡಗುಪ್ಪಿ, ಕಲ್ಲಾಪುರ ಮತ್ತು ಇನ್ನೂ ಹಲವಾರು ಗ್ರಾಮಗಳ ಅನೇಕ ರೈತರು ಈ ವೇಳೆಯಲ್ಲಿ ಭಾಗವಹಿಸಿ ಅಗತ್ಯ ಮಾರ್ಗದರ್ಶನವನ್ನು  ಈ ಸಂದರ್ಭದಲ್ಲಿ ಪಡೆದುಕೊಂಡರು.

ಪ್ರತಿಕ್ರಿಯಿಸಿ (+)