ಬುಧವಾರ, ಮೇ 19, 2021
24 °C

ಸಹಕಾರದಿಂದ ಅಭಿವೃದ್ಧಿ: ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದ್ದೇಬಿಹಾಳ: ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದು ಗ್ರಾಮೀಣ ಪ್ರದೇಶದ ರೈತರು ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಯತ್ನಿಸುವ ಬದಲಿಗೆ ಸರ್ಕಾರದ ಸಹಕಾರಿ ಸಂಘಗಳ ಮೂಲಕ ಸಾಲ ಪಡೆದು ಸ್ವಾವಲಂಬಿ ಬದುಕು ಕಟ್ಟುವಂತೆ ಜಿಲ್ಲಾ ಕೇಂದ್ರೀಯ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಹೇಳಿದರು.ಅವರು ಸೋಮವಾರ ತಾಲ್ಲೂಕಿನ ಜಮ್ಮಲದಿನ್ನಿ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ  50ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಶತಮಾನದ ಹಿಂದೆ ದೇಶದಲ್ಲಿಯೇ ಪ್ರಥಮ ಬಾರಿಗೆ ಕಣಗಿನಹಾಳ ಗ್ರಾಮ ದಲ್ಲಿ ಸಹಕಾರ ತತ್ವದ ಬ್ಯಾಂಕ್ ಸ್ಥಾಪಿ ಸುವ ಮೂಲಕ ಗಾಂಧೀಜಿ ಕಂಡ ರಾಮ ರಾಜ್ಯದ ಕನಸನ್ನು ನನಸಾಗಿಸಲು ಯತ್ನಿ ಸಿದ ಸಹಕಾರಿ ಧುರೀಣರು ಈಚೆಗೆ ರಾಜ ಕೀಯ ಮಾಡುತ್ತ ಕಾಲ ಹರಣ ಮಾಡು ತ್ತಿರುವದು ಸರಿಯಲ್ಲ, ಇವತ್ತಿಗೂ ಗ್ರಾಮೀಣ ಪ್ರದೇಶದಲ್ಲಿ ಸಹಕಾರ ತತ್ವದ ಸಾಕಾರಕ್ಕೆ ಸಾಕಷ್ಟು ಅವಕಾಶ ಗಳಿದ್ದು ಅವುಗಳನ್ನು ಪಕ್ಷಬೇಧ ಮರೆತು ಅನುಷ್ಠಾನ ಮಾಡುವಂತೆ ಅಭಿವೃದ್ಧಿ ಸಾಧಿಸುವಂತೆ ಮನವಿ ಮಾಡಿದರು.ನಾಲತವಾಡದ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಮಹಾಂತಪ್ಪಗೌಡ ಪಾಟೀಲ ಮಾತನಾಡಿ, ಜಮ್ಮಲದಿನ್ನಿಯ ಬ್ಯಾಂಕ್ ಶೇ 100ರಷ್ಟು ಸಾಲ ವಸೂಲಾತಿಯಲ್ಲಿ ಸಾಧನೆ ತೋರಿರುವದು ರೈತರು ಅದರ ಮೇಲಿಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ ಎಂದು ಹೇಳಿದರು.ಸಭೆಯನ್ನುದ್ದೇಶಿಸಿ ಮುಧೋಳದ ತಹಸೀಲ್ದಾರ ಶಂಕರಗೌಡ ಸೋಮನಾಳ ಮಾತನಾಡಿದರು. ಬ್ಯಾಂಕ್‌ನ ಅಧ್ಯಕ್ಷ ಬಸವರಾಜ ಅಂಗಡಗೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಸಹಕಾರ  ಅಭಿವೃದ್ಧಿ ಅಧಿಕಾರಿ ಪಿ.ಬಿ.ಕಾಳಗಿ, ಬಿ.ಬಿ. ತಳೇವಾಡ, ಮಡಿವಾಳಪ್ಪ ಮಂಗಿಹಾಳ, ಸಂಗನಗೌಡ ಮಾಲಗತ್ತಿ, ಮಡಿವಾಳಪ್ಪ ಯಾಳವಾರ, ಪರುತಗೌಡ ಪೊಲೇಶಿ, ಬುಡ್ಡಪ್ಪ ಬೈರವಾಡಗಿ, ಎಂ.ಎಸ್. ಕಲಕೇರಿ, ಬಸವಂತರಾಯ ಮಂಗಿಹಾಳ, ಅಮರಣ್ಣ ಬಿರಾದಾರ, ಸಂಗಮ್ಮ ಮಂಗಿಹಾಳ, ಎಸ್.ಎಸ್. ಸೋಮನಾಳ ಉಪಸ್ಥಿತರಿದ್ದರು.ಸಾನ್ನಿಧ್ಯ ವಹಿಸಿದ್ದ ತಾಳಿಕೋಟಿಯ ಶ್ರೀ ಖಾಸ್ಗತೇಶ್ವರ ಸ್ವಾಮಿಗಳು ಹಾಗೂ ಕುಂಟೋಜಿಯ ಶ್ರೀ ಚನ್ನವೀರ ದೇವರು ಆಶೀರ್ವಚನ ನೀಡಿದರು.

ಬಿ.ಎಸ್. ಮೇಟಿ ಸ್ವಾಗತಿಸಿದರು. ಚಿನಿವಾರ ಶಿಕ್ಷಕರು ನಿರೂಪಿಸಿದರು. ಪ್ರಭು ಪರಸನಹಳ್ಳಿ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.