ಬುಧವಾರ, ಮೇ 25, 2022
22 °C

ಸಹಕಾರದಿಂದ ಸಾಹಿತ್ಯ ಭವನ: ಗೊರುಚ ಶ್ಲಾಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು: ನಗರದಲ್ಲಿ ಒಬ್ಬ ಸಿಮೆಂಟ್ ವ್ಯಾಪಾರಿ, ಪ್ರೌಢ ಶಾಲೆ ಕಲಿತ ವ್ಯಕ್ತಿ ತಮ್ಮ ಇಳಿ ವಯಸ್ಸಿನಲ್ಲಿ ಸಾಹಿತ್ಯದ ಗೀಳನ್ನು  ಅಂಟಿಸಿಕೊಂಡು, ತಾಲ್ಲೂಕಿನ ಎಲ್ಲ ಸಾಹಿತಿಗಳು, ದಾನಿಗಳು ಸಹಕಾರದಿಂದ ಸಾಹಿತ್ಯ ಭವನ ನಿರ್ಮಾಣ ಮಾಡಿದ್ದು ಶ್ಲಾಘನೀಯ ಎಂದು ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಹೇಳಿದರು.ನಗರದ ಚೌಡೇಶ್ವರಿನಗರದಲ್ಲಿ ನೂತನವಾಗಿ ನಿರ್ಮಿಸಿದ ತಾಲ್ಲೂಕು ಸಾಹಿತ್ಯ ಭವನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಶಿಗಾಂವ ತಾಲ್ಲೂಕು ಗೋಟಗೋಡಿಯಲ್ಲಿ ಆರಂಭವಾಗಿರುವ ಜಾನಪದ ವಿಶ್ವವಿದ್ಯಾಲಯಕ್ಕೆ ಸಾಹಿತಿಗಳು, ಕಲಾವಿದರು ಭೇಟಿ ನೀಡಿ ಸಲಹೆ ಸೂಚನೆ ನೀಡಬೇಕು ಎಂದರು.ಡಾ.ಆರ್‌ಎಂ. ಕುಬೇರಪ್ಪ, ಡಾ.ಕೆ.ಎಚ್. ಮುಕ್ಕಣ್ಣನವರ, ಜಿ.ಎಂ. ದೇವಗಿರಿಮಠ, ಎಸ್.ಎಚ್. ಪಾಟೀಲ, ಚಂದ್ರಶೇಖರ ಮಡಿವಾಳರ, ಎನ್.ಎಲ್. ಶಿಗ್ಲಿ ಹಾಜರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.