ಸಹಕಾರಿ ಬ್ಯಾಂಕಿಂಗ್ ಬಲವಾಗಲಿ

ಸೋಮವಾರ, ಜೂಲೈ 22, 2019
27 °C

ಸಹಕಾರಿ ಬ್ಯಾಂಕಿಂಗ್ ಬಲವಾಗಲಿ

Published:
Updated:

ಚಿಕ್ಕಮಗಳೂರು: ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆ ಬಲಗೊಂಡರೆ ದುರ್ಬಲರನ್ನು ಮೇಲೆತ್ತಲು ಸಾಧ್ಯ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ಜಿಲ್ಲಾ ಪದವೀಧರರ ಪತ್ತಿನ ಸಹಕಾರ ಸಂಘದ ದಶಮಾನೋತ್ಸವ ಸಂದರ್ಭದಲ್ಲಿ ಕೆ.ಎಂ.ರಸ್ತೆಯ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡ ಕಚೇರಿಯನ್ನು ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಹಿಂದುಳಿದೆ. ಇದು ಬಲಗೊಂಡರೆ ತಿಂಗಳ ಮೀಟರ್ ಬಡ್ಡಿಯಿಂದ ಸಾಮಾನ್ಯರನ್ನು ಹೊರ ತರಲು ಸಾಧ್ಯ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸುಲಭ, ಸರಳವಾಗಿ ಸಾಲ ವಿತರಿಸುವ ಸ್ಥಿತಿ ಇಲ್ಲ. ದಾಖಲೆಗಳನ್ನು ಸಲ್ಲಿಸಲು ಚಪ್ಪಲಿ ಸವೆಸಿ ದರೂ ಅನೇಕ ಸಂದರ್ಭಗಳಲ್ಲಿ ಅರ್ಹರಿಗೆ ಸಾಲ ಸಿಗು ತ್ತಿಲ್ಲವೆಂಬ ದೂರಿನ ಹಿನ್ನೆಲೆಯಲ್ಲಿ ಖಾಸಗಿ ವ್ಯಕ್ತಿ ಗಳನ್ನು ಅವಲಂಬಿಸುವ ಅನಿವಾರ್ಯತೆ ಇದೆ ಎಂದರು.

ಸಹಕಾರಿಗಳು ವ್ಯಾಪಕವಾಗಿ ಕಾರ್ಯ ನಿರ್ವಹಿಸಬೇಕು. ಕಾಫಿ ಬೆಲೆ ಏರಿಕೆಯಿಂದಾಗಿ ಈ ವರ್ಷ ಒಟ್ಟಾರೆ ಜಿಲ್ಲೆಯಲ್ಲೇ 700 ಕೋಟಿ ರೂ. ಅಧಿಕ ಹಣ ಬರುತ್ತಿದೆ. ಅನೇಕರಿಗೆ ಇದನ್ನು ವಿನಿಯೋಗಿಸುವ ಯೋಜನೆಗಳಿಲ್ಲ. ಸಹಜವಾಗಿಯೇ ಅಕ್ಕಪಕ್ಕದಕ್ಕೆ ಬೆಲೆ ಕಟ್ಟುವುದರಿಂದ ಇಲಿಯ್ಲ ಬೆಲೆ ಗಗನಕ್ಕೇರಿದೆ.ಹೆಚ್ಚುವರಿ ಹಣವನ್ನು ಬ್ಯಾಂಕಿಂಗ್‌ನಲ್ಲಿ ತೊಡಗಿಸುವ ಮೂಲಕ ಅಗತ್ಯವಿರುವವರಿಗೆ ಸುಲಭವಾಗಿ ಸಾಲ ಸಿಗುವಂತೆ ಮಾಡಲು ಜಿಲ್ಲೆಯ ಸಹಕಾರಿಗಳು ಹೆಚ್ಚು ಗಮನ ನೀಡಬೇಕೆಂದರು.

ದಶಮಾನೋತ್ಸವ ಉದ್ಘಾಟಿಸಿದ ಸಂಘದ ಸ್ಥಾಪಕ ಅಧ್ಯಕ್ಷ ಬಿ.ಸಿ.ಲೋಕಪ್ಪಗೌಡ, 101 ಸದಸ್ಯರಿಂದ 50 ಸಾವಿರ ರೂಪಾಯಿ ಷೇರು ಬಂಡವಾಳದೊಂದಿಗೆ ಆರಂಭಗೊಂಡ ಪದವೀಧರರ ಸಂಘ ಇಂದು ವ್ಯಾಪಕವಾಗಿ ಬೆಳೆದಿದೆ. ಸ್ವಂತ ಕಟ್ಟಡ ಹೊಂದಲು ಅಗತ್ಯವಿರುವ ನಿವೇಶನವನ್ನು ಸರ್ಕಾರದ ವತಿಯಿಂದ ಅಥವಾ ಶಾಸಕರು ಸ್ವಂತವಾಗಿ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.

ಭದ್ರತಾ ಕೊಠಡಿ ಉದ್ಘಾಟಿಸಿದ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಡಿ.ಶಿವಣ್ಣ ಪದವೀಧರರ ಸೊಸೈಟಿ ಅಭಿವೃದ್ಧಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು. ಸಹಕಾರ ಸಂಘಗಳ ಉಪನಿಬಂಧಕ ಐ.ಎಸ್.ಗಿರಡ್ಡಿ, ಗುಣಾತ್ಮಕ ಸಹಕಾರಿಗಳನ್ನು ಬೆಳೆಸಲು ಶ್ರಮಿಸಬೇಕು. ಗೆದ್ದಲು ಹುಳು ಹುತ್ತ ಕಟ್ಟಿದ ಮೇಲೆ ಹಾವು ವಾಸ ಮಾಡದಂತೆ ಎಚ್ಚರಿಕೆ ವಹಿಸ ಬೇಕೆಂದರು.

ಸಹಕಾರ ಸಂಘದ ಅಧ್ಯಕ್ಷ ಯು.ಟಿ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಬೈಲಾ ಸಿದ್ದಪಡಿಸಿದ್ದ ಎಸ್.ವಿ.ಬಸವರಾಜಪ್ಪ, ಮಾಜಿ ಅಧ್ಯಕ್ಷ ವಕೀಲ ಸೋಮೇಗೌಡ, ಎಪಿಎಂಸಿ ಉಪಾಧ್ಯಕ್ಷ ಶಂಕರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಂಘದ ನಿರ್ದೇಶಕರಾದ ಜಯಶ್ರೀ, ಡಾ.ಡಿ.ಎಲ್.ವಿಜಯ್‌ಕುಮಾರ್, ಮರುಳುಸಿದ್ದಪ್ಪ, ವ್ಯವಸ್ಥಾಪಕ ನಾರಾಯಣಸ್ವಾಮಿ, ಎಲ್.ಸಿ.ಶಿವಾನಂದಸ್ವಾಮಿ ಇದ್ದರು.

ವಿದ್ಯಾರ್ಥಿ-ವಿಜ್ಞಾನಿ ನೇರ ಸಂವಾದ

ಚಿಕ್ಕಮಗಳೂರು: ಬೆಂಗಳೂರಿನ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ಜೂನ್ 22 ಮತ್ತು 23ರಂದು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ದಯಾನಂದ್ ಸಾಗರ ವಿದ್ಯಾಸಂಸ್ಥೆಯ ಪ್ರೇಮಚಂದ್ ಸಾಗರ್ ಸಭಾಂಗಣದಲ್ಲಿ ರಾಜ್ಯಮಟ್ಟದ ಕರ್ನಾಟಕ ವಿಜ್ಞಾನ ಶಿಬಿರ, ವಿದ್ಯಾರ್ಥಿ-ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಉನ್ನತ ಶಿಕ್ಷಣ, ಯೋಜನೆ, ತಾಂತ್ರಿಕ ಹಾಗೂ ಐಟಿ, ಬಿಟಿ ಸಚಿವ ಡಾ.ವಿ.ಎಸ್.ಆಚಾರ್ಯ ಉದ್ಘಾಟಿ ಸಲಿದ್ದಾರೆ. ದಯಾನಂದ್ ಸಾಗರ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ಡಾ.ಹೇಮಚಂದ್ರ ಸಾಗರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಿ.ಎನ್.ಆರ್.ರಾವ್, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ರಶ್ಮಿ ವಿ.ಮಹೇಶ್ ಭಾಗವಹಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry