ಮಂಗಳವಾರ, ಮೇ 18, 2021
29 °C

ಸಹಕಾರಿ ಬ್ಯಾಂಕ್ ಗೃಹ ಸಾಲ 25 ಲಕ್ಷ: ಆರ್‌ಬಿಐ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಆದ್ಯತಾ ವಲಯದ ವ್ಯಾಪ್ತಿಯಡಿ ರೂ 25 ಲಕ್ಷದವರೆಗೂ ಗೃಹ ಸಾಲ ನೀಡಲು ನಗರ ಸಹಕಾರಿ ಬ್ಯಾಂಕ್(ಯುಸಿಬಿ)ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅನುಮತಿ ನೀಡಿದೆ.ತಮ್ಮಲ್ಲಿನ ಒಟ್ಟು ಸಂಪತ್ತಿನ ಶೇ 5ರಷ್ಟು ಹೆಚ್ಚುವರಿ ಮಿತಿ ಬಳಸಿಕೊಂಡು ನಗರ ಸಹಕಾರಿ ಬ್ಯಾಂಕುಗಳು ರೂ 25 ಲಕ್ಷದವರೆಗೂ ಗೃಹ ಸಾಲ ವಿತರಿಸಬಹುದು ಎಂದು `ಆರ್‌ಬಿಐ~ ಪ್ರಕಟಣೆ ತಿಳಿಸಿದೆ.`ಆರ್‌ಬಿಐ~ 2010ರ ನವೆಂಬರ್‌ನಲ್ಲಿ  2ನೇ ತ್ರೈಮಾಸಿಕ ಹಣಕಾಸು ಪರಾಮರ್ಶೆ ವೇಳೆ `ಯುಸಿಬಿ~ಗಳಿಗೆ  ಒಟ್ಟು ಸಂಪತ್ತಿನ ಶೇ 10ರಷ್ಟನ್ನು ಗೃಹ ಸಾಲವಾಗಿ ವಿತರಿಸಲು ಅವಕಾಶ ಕಲ್ಪಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.