ಸಹಕಾರಿ ಬ್ಯಾಂಕ್: ರೂ 2 ಕೋಟಿ ಲಾಭ

7

ಸಹಕಾರಿ ಬ್ಯಾಂಕ್: ರೂ 2 ಕೋಟಿ ಲಾಭ

Published:
Updated:

ಹೊಸಕೋಟೆ:  ಪಟ್ಟಣದ ಟೌನ್ ಕೊ ಆಪರೇಟಿವ್ ಬ್ಯಾಂಕ್ 2010-11ನೇ ಸಾಲಿನಲ್ಲಿ 2 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿ ದಾಖಲೆ ಮಾಡಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಸ್.ಶ್ರೀನಿವಾಸ್ ತಿಳಿಸಿದರು. ಬ್ಯಾಂಕಿನ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕಿನಲ್ಲಿ 14 ಸಾವಿರ ಸದಸ್ಯರಿದ್ದು, ತನ್ನ ಸ್ವಂತ ಬಂಡವಾಳವನ್ನು 742.78 ಲಕ್ಷ ರೂಪಾಯಿಗೆ ಹೆಚ್ಚಿಸಿಕೊಂಡಿದೆ. ಸದಸ್ಯರ ಹಿತ ಕಾಪಾಡಲು ಕ್ಷೇಮ ನಿಧಿ ಸ್ಥಾಪಿಸಿ ಈ ಸಾಲಿನಲ್ಲಿ ಮಾರಕ ಕಾಯಿಲೆಗೆ ತುತ್ತಾದ 18 ಸದಸ್ಯರಿಗೆ 1.42 ಲಕ್ಷ ರೂಪಾಯಿ ಉಚಿತ ಆರ್ಥಿಕ ನೆರವು ನೀಡಿದೆ ಎಂದು ಹೇಳಿದರು.ಸದಸ್ಯರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಈ ಸಾಲಿನಲ್ಲಿ 7.33 ಲಕ್ಷ ರೂಪಾಯಿ ವೆಚ್ಚದಲ್ಲಿ 200 ಸದಸ್ಯರ ಮಕ್ಕಳಿಗೆ ಉಚಿತ ಆರ್ಥಿಕ ನೆರವು, ವಿದ್ಯಾರ್ಥಿ ವೇತನ ನೀಡಿದೆ ಎಂದರು.ಸದಸ್ಯರಿಗೆ ಶೇ 18 ಡಿವಿಡೆಂಡ್ ನೀಡಲಾಗುವುದು ಎಂದ ಅವರು, ಗ್ರಾಹಕರಿಗೆ ಕೋರ್ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಎಂ.ರವಿ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry