`ಸಹಕಾರಿ ವಲಯಕ್ಕೆ ವಹಿಸಲು ಚಿಂತನೆ'

7
ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಖಾನೆ

`ಸಹಕಾರಿ ವಲಯಕ್ಕೆ ವಹಿಸಲು ಚಿಂತನೆ'

Published:
Updated:

ಸಾಲಿಗ್ರಾಮ: ಕೆ.ಆರ್.ನಗರ ತಾಲ್ಲೂಕಿನ ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ನೀಡಲು ಟೆಂಡರ್ ಆಹ್ವಾನಿಸಿದರೂ ಗುತ್ತಿಗೆ ಪಡೆದುಕೊಳ್ಳಲು ಯಾವುದೇ ಖಾಸಗಿ ಕಂಪನಿಗಳು ಮುಂದೆ ಬರುತ್ತಿಲ್ಲ.

ಇದೇ ಪರಿಸ್ಥಿತಿ ಮುಂದುವರಿದರೆ ಕಬ್ಬು ಬೆಳೆಗಾರರ ಸಲಹೆ ಪಡೆದು ಕಾರ್ಖಾನೆಯನನು ಮತ್ತೆ ಸಹಕಾರಿ ಕ್ಷೇತ್ರದ ಹಿಡಿತಕ್ಕೆ ತೆಗೆದುಕೊಳ್ಳಲು ಚಿಂತಿಸಲಾಗುವುದು ಎಂದು ಶಾಸಕ ಸಾ.ರಾ.ಮಹೇಶ್ ಅವರು ಗುರುವಾರ ಭರವಸೆ ನೀಡಿದರು.ಚುಂಚನಕಟ್ಟೆ ಹೋಬಳಿ ಸಾಲೇಕೊಪ್ಪಲು ಗ್ರಾಮದ ಮಾದಿಗ ಸಮುದಾಯದ ಕಾಲೋನಿಯಲ್ಲಿ ಎಸ್‌ಇಪಿ ಯೋಜನೆಯಡಿ 10ಲಕ್ಷ ರೂಪಾಯಿ ವೆಚ್ಚದ ಸಿಮೆಂಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಹಕಾರಿ ಕ್ಷೇತ್ರದಲ್ಲಿ ನಷ್ಟ ಅನುಭವಿಸುತ್ತಿದ್ದ ದಿನಗಳಲ್ಲಿ ಕಾರ್ಖಾನೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ, ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದುಕೊಂಡ ಖಾಸಗಿ ಕಂಪನಿ ಅರ್ಧದಲ್ಲೇ ಗುತ್ತಿಗೆಯನ್ನು ರದ್ದುಗೊಳಿಸಿದ್ದರಿಂದ ಮತ್ತೆ ಟೆಂಡರ್ ಕರೆಯಲಾಗಿದೆ ಆದರೆ ಯಾವುದೇ ಕಂಪನಿಗಳು ಗುತ್ತಿಗೆ ಪಡೆದುಕೊಳ್ಳಲು ಮುಂದೆ ಬರುತ್ತಿಲ್ಲ ಇದಕ್ಕೆ ಕಬ್ಬು ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.ಶೀಘ್ರದಲ್ಲೇ ರಾಜ್ಯ ಸಕ್ಕರೆ ಆಯುಕ್ತರನ್ನು ಭೇಟಿ ಮಾಡಿ ಶ್ರೀರಾಮ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ರೈತರು ಮತ್ತು ಕಬ್ಬು ಬೆಳೆಗಾರರು ಅನುಭವಿಸುತ್ತಿರುವ ಸಂಕಷ್ಟವನ್ನು ಮನವರಿಕೆ ಮಾಡಿ ಮತ್ತೆ ಟೆಂಡರ್ ಆಹ್ವಾನಿಸುವಂತೆ ಮನವಿ ಮಾಡುವುದಾಗಿ ತಿಳಿಸಿದರು. ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ದ್ವಾರಕೀಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾ, ಉಪಾಧ್ಯಕ್ಷೆ ಶಕುಂತಲಾ, ಸದಸ್ಯೆ ಶಶಿಕಲಾ, ವಕೀಲ ಶಿವಸ್ವಾಮಿ, ಭದ್ರೇಗೌಡ, ಹೊಸೂರು ಮಧು, ಹಳಿಯೂರು ಕಿಟ್ಟಿ, ಹೊಸೂರು ಕೀರ್ತಿ, ರಾಜೇಶ್, ರಾಘವೇಂದ್ರ, ರಮೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry