ಬುಧವಾರ, ಏಪ್ರಿಲ್ 14, 2021
24 °C

ಸಹಕಾರ ಬ್ಯಾಂಕ್ ಸದಸ್ಯರಿಗೆ ಲಾಭಾಂಶ ಹಂಚಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ನಷ್ಟದಲ್ಲಿ ನಡೆಯುತ್ತಿದ್ದ ನಗರದ ಪ್ರತಿಷ್ಠಿತ ಟೆಕ್ಸ್‌ಟೈಲ್ ಮ್ಯಾನುಫ್ಯಾಕ್ಚರರ್ಸ್‌ ಸಹಕಾರ ಬ್ಯಾಂಕ್ ಇಂದು 4 ಕೋಟಿ ರೂ ವಹಿವಾಟು ನಡೆಸುವತ್ತ ಮುನ್ನಡೆದಿದ್ದು, ಬ್ಯಾಂಕ್‌ನ ಸದಸ್ಯರಿಗೆ ಈ ಬಾರಿ ಲಾಭಾಂಶ (ಡಿವಿಡೆಂಡ್) ನೀಡಲು ಆಡಳಿತ ಮಂಡಳಿ ಸಭೆ ತೀರ್ಮಾನಿಸಿದೆ ಎಂದು ಟಿಎಂಸಿ ಬ್ಯಾಂಕ್ ಅಧ್ಯಕ್ಷ ಕೆ.ಪಿ.ವಾಸುದೇವ್ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1963ರಲ್ಲಿ ಕೆ.ಸಿ.ಪುಟ್ಟಯ್ಯ ಅವರಿಂದ ಸ್ಥಾಪಿತವಾದ ಟಿಎಂಸಿ ಬ್ಯಾಂಕ್ ಮುಖ್ಯವಾಗಿ ನೇಕಾರರ ಬದುಕಿಗೆ ನೆಲೆಯಾಗಿಸುವಲ್ಲಿ  ಪ್ರಮುಖ ಪಾತ್ರ ವಹಿಸಿದೆ. 10 ವರ್ಷಗಳಿಂದ ಆಡಳಿತ ಮಂಡಳಿ ದುರಾಡಳಿತದಿಂದ ನಷ್ಟ ಅನುಭವಿಸಿ ಸಾರ್ವಜನಿಕರ ವಿಶ್ವಾಸ ಕಳೆದು ಕೊಂಡಿತ್ತು. 2010ರಲ್ಲಿ ಚುನಾಯಿತರಾದ ಬ್ಯಾಂಕ್‌ನ ಆಡಳಿತ ಮಂಡಳಿ ಬ್ಯಾಂಕ್ ಪುನಃ ಏಳಿಗೆ ಸಾಧಿಸುವಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಬ್ಯಾಂಕನ್ನು ಅಭಿವೃದ್ದಿಗೊಳಿಸಿದೆ. 10 ವರ್ಷಗಳ ಹಿಂದೆ ನಿಂತಿದ್ದ ಲಾಭಾಂಶವನ್ನು ಈ ಬಾರಿ ನೀಡುತ್ತಿರುವುದಾಗಿ ತಿಳಿಸಿದರು. ಗ್ರಾಹಕರಿಂದ ಹಣ ತೊಡಗಿಸುವುದು, ಸಾಲ ವಸೂಲಾತಿ ಮೊದಲಾದ ಕಾರ್ಯಗಳು ಗಣನೀಯವಾಗಿ ಹೆಚ್ಚಾಗಿದೆ. 7.53 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಶೇ.977 ಹೆಚ್ಚಿದೆ. ಇದರೊಂದಿಗೆ, ಚಿನ್ನಾಭರಣಗಳ ಮೇಲೆ ಸಾಲ, 48 ಗಂಟೆಗಳಲ್ಲಿ ಚೆಕ್ ಕ್ಲಿಯರಿಂಗ್, ಆರ್‌ಟಿಜಿಎಸ್, ಎನ್‌ಯಿಎಪ್‌ಟಿ ವ್ಯವಸ್ಥೆ ನೀಡಲಾಗುತ್ತಿದ್ದು, ಬ್ಯಾಂಕ್ ಕಂಪ್ಯೂಟರಿಕರಣಗೊಂಡಿದೆ.

 

ಉಚಿತ ನೇತ್ರ ತಪಾಸಣೆ, ಆರೋಗ್ಯ ತಪಾಸಣಾ ಶಿಬಿರ, ವಾರ್ಷಿಕೋತ್ಸವಗಳನ್ನು ಆಚರಿಸುವ ಮೂಲಕ ಗ್ರಾಹಕರ ವಿಶ್ವಾಸ ಮತ್ತಷ್ಟು ಹೆಚ್ಚಿಸಿಕೊಂಡಿದೆ ಎಂದದರು. ಟಿ.ಎಂ.ಸಿ ಬ್ಯಾಂಕ್ ಉಪಾಧ್ಯಕ್ಷ ಎ.ಆರ್.ಶಿವಕುಮಾರ್ ಮಾತನಾಡಿ, ಬ್ಯಾಂಕ್‌ನಲ್ಲಿ ವೈಯಕ್ತಿಕ ಆಧಾರದ ಮೇಲೆ ಸಣ್ಣ ವ್ಯಾಪಾರಸ್ಥರಿಗೆ 25 ಸಾವಿರ ರೂಗಳವರೆಗೆ ಸಾಲ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.