ಸೋಮವಾರ, ಜೂನ್ 21, 2021
23 °C

ಸಹಕಾರ ಭಾವನೆಯಿಂದ ಸಂಘದ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ನಿರ್ದೇಶಕರ ಮಧ್ಯದಲ್ಲಿನ ಪರಸ್ಪರ ಸಹಕಾರ ಭಾವನೆಯಿಂದ ಸಂಘದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಗುರುಪಾದಪ್ಪ ನಾಗಮಾರಪಳ್ಳಿ ಅಭಿಪ್ರಾಯಪಟ್ಟರು. ತಾಲ್ಲೂಕಿನ ವಡ್ಡನಕೇರಾ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಉಗ್ರಾಣ ಕಟ್ಟಡ ಉದ್ಘಾಟನೆ ನೆರವೇರಿಸಿ, ಮಾತನಾಡಿದರು.ಸಹಕಾರ ಹೆಸರೇ ಸೂಚಿಸುವಂತೆ ಅದು ಆರ್ಥಿಕವಾಗಿ ದುರ್ಬಲರಾದ ವ್ಯಕ್ತಿಗಳಿಗೆ ನೆರವು ನೀಡುವುದು ಎಂದು ಅರ್ಥ. ಹೆಸರಿಗೆ ತಕ್ಕಂತೆ ಸಂಘಗಳು ಉದ್ದೇಶಿತ ಕರ್ತವ್ಯ ಪ್ರಾಮಾಣಿಕ ನಿಭಾಯಿಸಿದಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಸಣ್ಣ ರೈತರ ಸಮಸ್ಯೆ ಕೊಂಚ ಪ್ರಮಾಣದಲ್ಲಿ ಆದರೂ ಬಗೆಹರಿಸುವುದಕ್ಕೆ

ಸಾಧ್ಯವಾಗುತ್ತದೆ ಎಂದರು. ಬಡ ಮತ್ತು ನಿರ್ಗತಿಕರಿಗೆ ಸಹಕರಿಸುವ ಏಕೈಕ ಉದ್ದೇಶದಿಂದ ಹುಟ್ಟಿಕೊಳ್ಳುವ ಸಂಘಗಳಿಗೆ ಸಹಕಾರ ನೀಡಲು ಜಿಲ್ಲಾ ಸಹಕಾರ ಬ್ಯಾಂಕ್ ಸದಾ ಸಿದ್ಧವಿದೆ ಎಂದು ಭರವಸೆ ನೀಡಿದರು.ಸಹಕಾರ ಸಂಘ ಸ್ಥಾಪಿಸುವವರು ಪಕ್ಷ, ಜಾತಿ ಮತ್ತು ಸ್ವಾರ್ಥ ಭಾವನೆ ಬದಿಗಿಟ್ಟು ಒಳಗೆ ಪ್ರವೇಶ ಮಾಡಬೇಕು. ಅಂದಾಗ ಮಾತ್ರ ಸಹಕಾರ ಸಂಘ ಸರ್ವಾಂಗೀಣ ಅಭಿವೃದ್ಧಿ ಜೊತೆಗೆ ಬಡ, ನಿರ್ಗತಿಕರ ವಿಶ್ವಾಸಕ್ಕೆ ಪಾತ್ರವಾಗಲು ಸಾಧ್ಯ ಈ ನಿಟ್ಟಿನಲ್ಲಿ ಸಂಘದ ಪದಾಧಿಕಾರಿಗಳು ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಬೇಕು ಎಂದು ಬಿ.ಎಸ್.ಎಸ್.ಕೆ ಅಧ್ಯಕ್ಷ ಸುಭಾಷ ಕಲ್ಲೂರ ಮಾರ್ಗದರ್ಶನ ನೀಡಿದರು.ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ನಿಜಪ್ಪ ಪತ್ರಿ, ಉಪಪ್ರಧಾನ ವ್ಯವಸ್ಥಾಪಕ ಚನ್ನಬಸ್ಸಯ್ಯ ಸ್ವಾಮಿ ಮಾತನಾಡಿದರು. ಮದರಗಾಂವ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಗಪ್ಪ ಹೂಗೊಂಡ ಅಧ್ಯಕ್ಷತೆ ವಹಿಸಿದ್ದರು. ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶರಣಪ್ಪ ಗೋಟೂರ್, ಸಂಗ್ರಾಮಪ್ಪ ಸಿಂದಬಂದಗಿ, ಜಿಲ್ಲಾ ಪಂಚಾಯಿತಿ

ಮಾಜಿ ಉಪಾಧ್ಯಕ್ಷ ರಾಜಶೇಖರ ಪಾಟೀಲ ಮದರಗಾಂವ, ಗಣ್ಯರಾದ ವಿಜಯಕುಮಾರ ಕಣಜಿ, ಬಾಬುರಾವ ಪಾಟೀಲ ಮದರಗಾಂವ, ತಾಲ್ಲೂಕು ಪಂಚಾಯಿತಿ ಸದಸ್ಯ ಬಾಬು ಟೈಗರ್, ತಾಲ್ಲೂಕು

ಅಭಿವೃದ್ಧಿ ಅಧಿಕಾರಿ ಎಸ್.ಬಿ.ಹತೀಫ್ ವೇದಿಕೆಯಲ್ಲಿ ಇದ್ದರು. ಈಶ್ವರ ಚಿದ್ರಿ ಸ್ವಾಗತಿಸಿದರು. ವೀರಯ್ಯ ಮಠಪತಿ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಜಶೇಖರ ಮಠಪತಿ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.