ಶುಕ್ರವಾರ, ಮೇ 7, 2021
20 °C

ಸಹಕಾರ ಸಂಘಗಳ ಚುನಾವಣೆಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: `ರಾಜ್ಯದಲ್ಲಿ ಚುನಾವಣೆ ಬಾಕಿ ಇರುವ ಸಹಕಾರ ಸಂಘಗಳ ಚುನಾವಣೆಯು ಮುಕ್ತ ಹಾಗೂ ಪಾರದರ್ಶಕವಾಗಿ ನಡೆಸಲು ರಾಜ್ಯ ಸಹಕಾರ ಚುನಾವಣಾ ಆಯೋಗ ಎಲ್ಲ ಸಿದ್ಧತೆ ಗಳನ್ನು ಮಾಡಿಕೊಳ್ಳುತ್ತಿದೆ' ಎಂದು ಆಯೋಗದ ಆಯುಕ್ತ ಎನ್.ಸಿ.ಮುನಿಯಪ್ಪ ಹೇಳಿದರು.ಸಹಕಾರ ಸಂಘಗಳ ಚುನಾವಣೆ ಕುರಿತು ಮಂಗಳವಾರ ಇಲ್ಲಿನ ಡಿಸಿಸಿ ಬ್ಯಾಂಕಿನ ಸಭಾ ಗೃಹದಲ್ಲಿ ಬೆಳಗಾವಿ, ವಿಜಾಪುರ, ಬಾಗಲಕೋಟೆ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಧಿಕಾರಿಗಳು, ಪದಾಧಿಕಾರಿಗಳ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಬರುವ ಸೆಪ್ಟೆಂಬರ್ ಅಂತ್ಯಕ್ಕೆ ಚುನಾ ವಣಾ ಬಾಕಿ ಇರುವ ಎಲ್ಲ ಪ್ರಾಥಮಿಕ ಸಹಕಾರ ಸಂಸ್ಥೆಗಳ ಚುನಾವಣೆಯನ್ನು ನಡೆಸಲಾಗುವುದು.  ಸೆಪ್ಟೆಂಬರ್ ಅಂತ್ಯಕ್ಕೆ ಪ್ರಾಥಮಿಕ ಸಹಕಾರಿ ಸಂಸೆ ್ಥಗಳು, ಅಕ್ಟೋಬರ್ ಅಂತ್ಯಕ್ಕೆ ಸೆಕೆಂಡರಿ ಸಹಕಾರ ಸಂಸ್ಥೆಗಳು, ನವೆಂಬರ್ ಅಂತ್ಯಕ್ಕೆ ಫೆಡ ರಲ್ ಸಂಸ್ಥೆಗಳ ಹಾಗೂ ಡಿಸೆಂಬರ್ ಅಂತ್ಯಕ್ಕೆ ರಾಜ್ಯಮಟ್ಟದ ಸಹಕಾರ ಸಂಸ್ಥೆಗಳ ಚುನಾ ವಣೆಯನ್ನು ಸಹಕಾರ ಚುನಾವಣಾ ಆಯೋಗವು ನಡೆಸಲಿದೆ. ಇದಕ್ಕಾಗಿ ಎಲ್ಲ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ- 1959ಕ್ಕೆ ತಿದ್ದುಪಡಿ ತರಲಾ ಗಿದ್ದು, ಅದರ ಕರಡು ಪ್ರತಿಯನ್ನು ಇಷ್ಟರಲ್ಲಿಯೇ ಪ್ರಕಟಿಸಲಾಗುತ್ತದೆ. ಹೊಸ ಕಾಯ್ದೆಯ ಪ್ರಕಾರ ಸಹಕಾರ ಸಂಸ್ಥೆಗಳು ತಮ್ಮ ನಿಯಮಾವಳಿ (ಬೈಲಾ)ದಲ್ಲಿ ಬದಲಾವಣೆ ಮಾಡಿ ಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಜುಲೈ 15 ರೊಳಗೆ ಸಂಸ್ಥೆಗಳು ಸಾಮಾನ್ಯ ಸಭೆ ನಡೆಸಬೇಕು ಎಂದು ತಿಳಿಸಿದರು.ಹೊಸ ಕಾಯ್ದೆ ಪ್ರಕಾರ ತಾಲ್ಲೂಕು ಮಟ್ಟಕ್ಕಿಂತ ಕೆಳಗಿರುವ ಸಹಕಾರ ಸಂಸ್ಥೆಗಳಿಗೆ 11 ನಿರ್ದೇಶಕರು, ತಾಲ್ಲೂಕು ಮಟ್ಟದ ಸಂಸ್ಥೆಗಳಲ್ಲಿ 13, ಜಿಲ್ಲಾ ಮಟ್ಟದಲ್ಲಿ 15 ಹಾಗೂ ರಾಜ್ಯ ಮಟ್ಟದ ಸಂಸ್ಥೆ ಗಳಲ್ಲಿ 21 ನಿರ್ದೇಶ ಕರನ್ನು ಆಯ್ಕೆ ಮಾಡಬೇಕು ಎಂದರು.ಸಹಕಾರ ಚುನಾವಣಾ ಆಯೋಗ ಚುನಾವಣಾ ಬಾಕಿ ಇರುವ ಆಡಳಿತ ಮಂಡಳಿ ಹಾಗೂ ಪದಾಧಿ ಕಾರಿಗಳ ಆಯ್ಕೆಗೆ ಚುನಾವಣೆ ನಡೆಸಲಿದೆ. ಈ ಎಲ್ಲ ಚುನಾವಣೆಗಳಿಗೆ ಚುನಾವಣಾ ಆಯೋಗವೇ ದಿನಾಂಕವನ್ನು ನಿಗದಿಪ ಡಿಸುವುದರ ಜೊತೆಗೆ ಮತದಾರರ ಪಟ್ಟಿಯನ್ನು ಸಹ ಆಯೋಗ ಸಿದ್ಧಪಡಿಸಲಿದೆ. ಈ ಚುನಾವಣೆಯಲ್ಲಿ ಮತದಾನ ಮಾಡುವ ಎಲ್ಲ ಸದಸ್ಯರ ಬಳಿ ಈಗ ಫೋಟೋ ಹೊಂದಿದ ಗುರು ತಿನ ಚೀಟಿಗಳು ಇದ್ದು, ಮತದಾರರ ಯಾದಿಯಲ್ಲಿಯೂ ಸಹ ಫೋಟೋ ಅಳವಡಿಸುವ ಕುರಿತು ಚಿಂತನೆ ನಡೆಸ ಲಾಗುತ್ತಿದೆ ಎಂದು  ಹೇಳಿದರು.ರಾಜ್ಯದಲ್ಲಿ ಒಟ್ಟು 36,000 ಸಹಕಾರ ಸಂಘ ಗಳಿವೆ. ಕಳೆದ ಮಾರ್ಚ್ ಅಂತ್ಯಕ್ಕೆ ಚುನಾವಣೆ ಬಾಕಿ ಇರುವ 4500 ಸಂಘಗಳಿವೆ. ಬೆಳಗಾವಿ ಜಿಲ್ಲೆಯ 1077 ಸಂಘಗಳಿಗೆ ಸೆಪ್ಟಂಬರ್ ಅಂತ್ಯ ದೊಳಗೆ ಚುನಾವಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.ಈ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಪಡೆಯುವ ಸದಸ್ಯರು ಸುಸ್ಥಿದಾರರಾಗಿರಬಾರದು. ಚುನಾವಣೆ ನಡೆಯಲಿರುವ ಎಲ್ಲ ಸಂಘಗಳು ಈ ತಿಂಗಳ ಅಂತ್ಯದೊಳಗಾಗಿ ಅಡಿಟ್ ಮಾಡಿಸಿ ಕೊಳ್ಳುವುದು ಕಡ್ಡಾಯ ವಾಗಿರುತ್ತದೆ. ಅದರಂತೆ ಸಹಕಾರ ಸಂಘಗಳ ಪದಾಧಿಕಾರಿಗಳ ಸಂಖ್ಯೆ ಹಾಗೂ ಮೀಸಲಾತಿಗಳಲ್ಲಿಯೂ ಹೆಚ್ಚಳ ವಾಗಿದ್ದರಿಂದ ಪ್ರತಿಯೊಂದು ಸಂಸ್ಥೆ ತನ್ನ ಸಾಮಾನ್ಯ ಸಭೆಯನ್ನು ಕರೆದು ಇದಕ್ಕೆ ಸಂಬಂಧಿಸಿದ ಕರಡು ನಿಯಮಗಳಿಗೆ ಅನುಮೋದನೆ ಪಡೆದು ಕೊಳ್ಳಬೇಕು. ಈ ಎರಡೂ ನಿಯಮಗಳನ್ನು ಪಾಲಿ ಸಿದ ಸಂಘಗಳಿಗೆ ಮಾತ್ರ ಚುನಾವಣೆ ನಡೆಸ ಲಾಗುವುದು. ಇಲ್ಲವಾದಲ್ಲಿ ಇಂತಹ ಸಂಸ್ಥೆಗಳಿಗೆ ಅವಧಿ ಮೀರಿದ ನಂತರ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದರು.ಚುನಾವಣೆ ಮುಕ್ತ ಹಾಗೂ ಪಾ ದರ್ಶಕವಾಗಿ ನಡೆಯುವಂತೆ ಆಯೋಗ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಹಕಾರ ಇಲಾಖೆಯ ಅಧಿಕಾರಿ ಗಳ ಜೊತೆಗೆ ಕಂದಾಯ ಇಲಾಖೆ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳನ್ನು ಸಹ ಚುನಾವಣೆ ಸಂದರ್ಭದಲ್ಲಿ ಬಳಸಿಕೊಳ್ಳುವ ಕುರಿತು ಆಯೋಗ ಚಿಂತನೆ ನಡೆಸಿದೆ ಎಂದು ಹೇಳಿದರು.ಆಯೋಗದ ಕಾರ್ಯದರ್ಶಿ ಬಿ. ಎಚ್. ಮಂಜಪ್ಪ, ಸಹಕಾರ ಇಲಾಖೆಯ ಜಂಟಿ ನಿಬಂಧಕ ಮಠಪತಿ, ಸಹಕಾರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.