ಗುರುವಾರ , ಏಪ್ರಿಲ್ 15, 2021
24 °C

ಸಹಕಾರ ಸಂಘಗಳ ಹಿನ್ನಡೆಗೆ ಸರ್ಕಾರ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಸಹಕಾರ ಸಂಘಗಳು ಇಂದು ನಿರೀಕ್ಷಿತ ಅಭಿವೃದ್ಧಿ ಸಾಧಿಸದೇ ಇರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಗಳು ಕಾರಣ ಎಂದು ಸಹಕಾರಿ ಧುರೀಣ, ಮಾಜಿ ಸಚಿವ ಎಚ್.ಕೆ.ಪಾಟೀಲ್ ಅಭಿ ಪ್ರಾಯಪಟ್ಟರು.ಸೋಮವಾರ ಮದ್ದೂರು ತಾಲ್ಲೂಕಿನ ಯಡಗನಹಳ್ಳಿಯಲ್ಲಿ ನಡೆದ ಉಚಿತ ಆರೋಗ್ಯ ಶಿಬಿರ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹ ಕಾರ ಸಂಘದ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರಗಳು ಮತ್ತು ರಾಜಕೀಯ ಲೋಪದಿಂದ ಎಷ್ಟೋ ಸಹಕಾರ ಸಂಘಗಳು ಮುಚ್ಚಿಹೋಗಿವೆ. ಇಂದು ಯುವಜನರು ಸಹಕಾರ ಕ್ಷೇತ್ರಕ್ಕೆ ಬರುತ್ತಿಲ್ಲ. ಸಹಕಾರಿ ಸಂಸ್ಥೆ ಸ್ಥಾಪಿಸುವುದು ಸುಲಭ. ಆದರೆ, ಮುನ್ನಡೆಸುವುದು ಕಷ್ಟ ಎಂಬಂತಾಗಿದೆ ಎಂದರು.ಮಾಜಿ ಶಾಸಕ ಎಚ್.ಡಿ.ಚೌಡಯ್ಯ ಅವರ, ಯಡಗನಹಳ್ಳಿಯ ಸಂಸ್ಥೆಯ ಪದಾಧಿಕಾರಿಗಳು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ  ಎಂದರು.ಡಾ.ಮೂರ್ತಿಗೆ ಸನ್ಮಾನ

ಸಮಾರೋಪ ಸಮಾರಂಭದಲ್ಲಿ ಆದರ್ಶ ಶಿಕ್ಷಣ ಸಂಸ್ಥೆಯ  ಡಾ. ಮೂರ್ತಿ ಅವರನ್ನು ಸನ್ಮಾನಿಸ ಲಾಯಿತು. ಸನ್ಮಾನಕ್ಕೆ ಉತ್ತರಿಸಿದ ಡಾ. ಮೂರ್ತಿ ಅವರು, ಹುಟ್ಟೂರಿ ನಲ್ಲಿಯೇ ದೊರೆತ ಈ ಸನ್ಮಾನದಿಂದ ತಮ್ಮಹೊಣೆಗಾರಿಕೆ ಹೆಚ್ಚಾಗಿದೆ ಎಂದರು.ಯಡಗನಹಳ್ಳಿಯಲ್ಲಿಯೇ ಜನಿಸಿದ ತಮಗೆ ಹಳ್ಳಿಗಳ ಸಮಸ್ಯೆಗಳು, ಇಲ್ಲಿನ ಆರೋಗ್ಯ ಪರಿಸ್ಥಿತಿ ಚೆನ್ನಾಗಿ ಅರಿವಾಗಿದೆ.  ಬರುವ ದಿನಗಳಲ್ಲಿ ಗ್ರಾಮೀಣ ಜನರ ಆರೋಗ್ಯ ಸೇವೆಗೆ ಇನ್ನಷ್ಟು ಕಾರ್ಯಕ್ರಮ ಹಮ್ಮಿಕೊಳ್ಳ ಲಿದ್ದೇನೆ ಎಂದು ಭರವಸೆ ನೀಡಿದರು.ಲೋಕಾಯುಕ್ತ ಸಂತೋಷ್ ಹೆಗ್ಡೆ, ಶಾಸಕ ಬಿ.ರಾಮಕೃಷ್ಣ, ಮಾಜಿ ಸಂಸದ ಅಂಬರೀಶ್, ಮಾಜಿ ಶಾಸಕ ಮಧು ಜಿ.ಎಂ ಹಾಗೂ ಸಹಕಾರ ಸಂಘಗಳ ಪದಾಧಿಕಾರಿಗಳು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.