ಮಂಗಳವಾರ, ಏಪ್ರಿಲ್ 20, 2021
32 °C

ಸಹಕಾರ ಸಂಘದಲ್ಲಿ ಅವ್ಯವಹಾರ: ಲೋಕಾಯುಕ್ತರಿಗೆ ಸದಸ್ಯರ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ನಿವೇಶನ ಹಂಚಿಕೆಗೆ ಸಂಬಂಧಿಸಿ ದಂತೆ ಸಹಕಾರ ಸಂಘವೊಂದರ ಅಧ್ಯಕ್ಷ ಹಾಗೂ ಗೌರವ ಕಾರ್ಯದರ್ಶಿ ಕೋಟ್ಯಂತರ ರೂಪಾಯಿ ಹಣ ದುರುಪಯೋಗ ಮಾಡಿ ಕೊಂಡಿದ್ದಾರೆ ಎಂದು ಆರೋಪಿಸಿ ಸಂಘದ ಸದಸ್ಯರು ಈ ಸಂಬಂಧ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ರಾಜ್ಯ ಗೃಹ ಮಂಡಳಿ ಕಣ್ಣಿಗೆ ಮಣ್ಣೆರಚಿ ಈ ಕೃತ್ಯ ಎಸಗಲಾಗಿದೆ ಎಂದು ಸಂಘದ ಸದಸ್ಯರು ದೂರಿದ್ದಾರೆ.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಗೃಹ ನಿವೇಶನ ಸಹಕಾರ ಸಂಘವು ನೆಲಮಂಗಲದ ಬಳಿ ಬಡಾವಣೆ ನಿರ್ಮಿಸಲು 72 ಎಕರೆ ಭೂಮಿಯನ್ನು ರಾಜ್ಯ ಗೃಹ ಮಂಡಳಿ ಹಾಗೂ ಡೆವಲಪರ್‌ಗಳ ತ್ರಿಪಕ್ಷೀಯ ಒಪ್ಪಂದದಂತೆ ಖರೀದಿಸಿತ್ತು.ರಾಜ್ಯದ ವಿವಿಧೆಡೆಗಳಲ್ಲಿ ನೆಲೆಸಿರುವ ಸಂಘದ ಸದಸ್ಯರು ನಿವೇಶನ ಬಯಸಿ ಸುಮಾರು 10 ಕೋಟಿ ರೂಪಾಯಿಗಳಷ್ಟು ಹಣವನ್ನು ಸಂದಾಯ ಮಾಡಿದ್ದಾರೆ. ಆದರೆ ಸಂಘದ ಅಧ್ಯಕ್ಷರು ರಸ್ತೆ ಸಂಪರ್ಕ ಹಾಗೂ ಬಡಾವಣೆ ಅಭಿವೃದ್ಧಿಗೆ ಜಮೀನು ಖರೀದಿಸುವ ನೆಪದಲ್ಲಿ ರೂ 5.9 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿಕೊಂಡಿದ್ದು ಈವರೆಗೆ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂದು ದೂರಲಾಗಿದೆ.ಅಧಿಕಾರಕ್ಕೆ ಬಂದ ಕೆಲದಿನಗಳಲ್ಲಿಯೇ ಅಧ್ಯ ಕ್ಷರು ಈ ಹಿಂದೆ ಇದ್ದ ಡೆವಲಪರ್‌ನನ್ನು ಬದ ಲಿಸಿ ಆ ಸ್ಥಾನಕ್ಕೆ ತನ್ನ ಹಿರಿಯ ಸಹೋ ದರ ನನ್ನು ನೇಮಿಸಿರುವುದಾಗಿ ಸಂಘದ ಸದ ಸ್ಯರು ಆರೋಪಿಸಿದ್ದಾರೆ. ಆದರೆ ಸಂಘದ ಆಡಳಿತ ಮಂಡಳಿಗೆ ನೇಮಕಾತಿ ಕುರಿತು ಮಾಹಿತಿ ನೀಡಿಲ್ಲ. ಇದು ಸಹಕಾರ ನಿಯಮಗಳಿಗೆ ವಿರುದ್ಧ ವಾಗಿ ನಡೆದ ನೇಮಕಾತಿ ಎಂದು ಸಂಘದ ಆಡಳಿತ ಮಂಡಳಿ ನಿರ್ದೇಶಕರಲ್ಲಿ ಒಬ್ಬರಾದ ಎಸ್.ಎಸ್. ನಾಗರತ್ನಮ್ಮ ಅವರ ಪತಿ ರಾಯಪ್ಪಗೌಡ ಎಂಬುವವರು ಆರೋಪಿಸಿದ್ದು, ಫೆಬ್ರುವರಿ 10ರಂದು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ‘ಸಂಘದಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯವರ ಸಚಿವಾಲಯ, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರೂ ಈವರೆಗೆ ಯಾವುದೇ ಪ್ರಯೋಜನ ವಾಗಿಲ್ಲ ಆದ್ದರಿಂದ ಲೋಕಾಯುಕ್ತರ ಮೊರೆ ಹೋಗಿದ್ದೇವೆ’ ಎಂದು ರಾಯಪ್ಪಗೌಡ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.    

      

ಸಂಘದ ಬೈಲಾಗೆ ವಿರುದ್ಧವಾಗಿ ಕಳೆದ ಒಂದು ವರ್ಷದ ಅವಧಿಯಲ್ಲಿ ಅಧ್ಯಕ್ಷರು ಹಾಗೂ ಗೌರವ ಕಾರ್ಯದರ್ಶಿಗಳು ಬ್ಯಾಂಕ್‌ನಿಂದ 16 ಬಾರಿ 8,95,50,000 ರೂಪಾಯಿಗಳನ್ನು ಬಿಡುಗಡೆ ಮಾಡಿಕೊಂಡಿದ್ದಾರೆ. ಹಣದ ವ್ಯವಹಾರದ ಬಗ್ಗೆ ದಾಖಲೆ ಸಲ್ಲಿಸುವಂತೆ ಅನೇಕ ಬಾರಿ ಪತ್ರ ಬರೆದಿದ್ದರೂ ಅಧ್ಯಕ್ಷರಿಂದ ಸೂಕ್ತ ಪ್ರತಿಕ್ರಿಯೆ ದೊರೆತಿಲ್ಲ ಎಂದು ಅವರು ಹೇಳಿದ್ದಾರೆ.ಸಂಘಕ್ಕೆ ವೇತನ ಕಾರ್ಯದರ್ಶಿಗಳನ್ನು ನೇಮಿಸಬೇಕು ಎಂಬ ಬೇಡಿಕೆಯನ್ನು ತಿರಸ್ಕರಿಸಲಾಗಿದ್ದು ನಿರ್ದೇಶಕರನ್ನೇ ಗೌರವ ಕಾರ್ಯ ದರ್ಶಿ ಎಂದು ನೇಮಕ ಮಾಡಿಕೊಳ್ಳಲಾಗಿದೆ. ಇದು ಸಹಕಾರ ಸಂಘದ ಉಪನಿಯಮ 1959 ಕಲಂ 29ಜಿ ಹಾಗೂ ಬೈಲಾಗೆ ವಿರುದ್ಧವಾಗಿದ್ದು ಅವ್ಯವಹಾರ ಹೆಚ್ಚಲು ಇದೂ ಒಂದು ಕಾರಣ ಎನ್ನಲಾಗಿದೆ. ಮತ್ತೊಂದೆಡೆ ನಗರದ ಕುಂಬಳಗೋಡು ಬಳಿ ಸಂಘದ ವತಿಯಿಂದ ನಿರ್ಮಿಸಲಾಗುತ್ತಿರುವ ಗೊಲ್ಲಹಳ್ಳಿ ಬಡಾವಣೆಗೆ 2 ಲಕ್ಷ ರೂಪಾಯಿ ಖರ್ಚು ಮಾಡಿ ಪಂಚಾಯ್ತಿ ಪ್ಲಾನ್ ಮತ್ತು ಖಾತೆ ಮಾಡಿಸಲಾಗಿದೆ. ಆದರೆ ಈಗಿನ ಅಧ್ಯಕ್ಷರ ಅಧಿಕಾರದ ಅವಧಿಯಲ್ಲಿ ಈ ದಾಖಲಾತಿಗಳನ್ನು ನಾಶ ಪಡಿಸಿ ಅದೇ ಕಾರ್ಯಕ್ಕಾಗಿ 7.5 ಲಕ್ಷ ರೂಪಾಯಿಯನ್ನು ಬಿಡುಗಡೆ ಮಾಡಿಕೊಂಡಿರುವ ಆರೋಪಗಳಿವೆ. ಅಲ್ಲದೇ ಬಡಾವಣೆಯಲ್ಲಿ ನೀರಿನ ಟ್ಯಾಂಕ್, ವಿದ್ಯುತ್ ಪೂರೈಕೆ, ರಸ್ತೆ ನಿರ್ಮಾಣ ಮುಂತಾದ ಕಾಮಗಾರಿಗಳನ್ನು ಮಾಡದಿದ್ದರೂ ಕಾಮಗಾರಿ ಹೆಸರಿನಲ್ಲಿ ಸಂಘದಿಂದ ಹಣ ಬಿಡುಗಡೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.