ಶನಿವಾರ, ಮೇ 15, 2021
25 °C

ಸಹಕಾರ ಸಂಘದಲ್ಲಿ ರಾಜಕೀಯ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಒಳ್ಳೆಯ ಉದ್ದೇಶ ಹೊಂದಿ ಆರಂಭಿಸಿರುವ ಸಹಕಾರ ಸಂಘಗಳು ರಾಜಕೀಯ ಒಳಸುಳಿಯಿಂದಾಗಿ ದಿಕ್ಕು ಬದಲಾಗಬಾರದು. ಈ ಬಗ್ಗೆ ಸಹಕಾರಿ ಧುರೀಣರು ಎಚ್ಚರ ವಹಿಸಬೇಕು ಎಂದು ಶಾಸಕ ಸಿ.ಟಿ.ರವಿ ಸಲಹೆ ನೀಡಿದರು.ತಾಲ್ಲೂಕಿನ ಕೈಮರದಲ್ಲಿ ನೂತನವಾಗಿ ಆರಂಭವಾದ ದಾಸರಹಳ್ಳಿ-ಅಲ್ಲಂಪುರ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಂಘದ ಒಳನುಸುಳಿ, ಬಾಗಿಲಿಗೆ ಬೀಗ ಹಾಕಿ, ಕಿಟಕಿಯಿಂದ ವ್ಯವಹರಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಸಂಘ ಸ್ವಂತ ಆಸ್ತಿಯಾಗದೇ ಸೇವೆಯೇ ಪ್ರಧಾನ ಆಗುವ ರೀತಿ ಮುಕ್ತವಾಗಿರಬೇಕು ಎಂದರು.ಮಲ್ಲೇನಹಳ್ಳಿ-ತೊಗರಿಹಂಕಲ್ ಸಂಘ ಆರಂಭವಾಗಿದ್ದು, ಬೀಕನಹಳ್ಳಿ-ಕೆಂಪನಹಳ್ಳಿ, ಮೂಗ್ತಿಹಳ್ಳಿ-ತೇಗೂರು ಸೊಸೈಟಿ ಆರಂಭವಾಗಬೇಕಿದೆ. ಹೆಚ್ಚಿನ ಸೊಸೈಟಿಯಾಗಿ ರೈತರಿಗೆ ಸೌಲಭ್ಯ ಸಿಗಬೇಕು. ಇದಕ್ಕೆ ಬೇಕಾದ ನೆರವನ್ನು ಡಿಸಿಸಿ ಬ್ಯಾಂಕ್ ಮೂಲಕ ನೀಡುವುದಾಗಿ ಭರವಸೆ ನೀಡಿದರು.ಸಂಘದ ಅಧ್ಯಕ್ಷ ಕೆ.ಕೆ.ಮನುಕುಮಾರ್ ಸಂಘದ ಉದ್ದೇಶಗಳನ್ನು ತಿಳಿಸಿದರು. ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್, ಜಾಹಿದಾ ಅಸ್ಲಂ, ಜಿ.ಪಂ. ಸದಸ್ಯ ಜೆ.ಡಿ.ಲೋಕೇಶ್, ನಿರ್ದೇಶಕರಾದ ಎಂ.ಕೃಷ್ಣಪ್ಪ, ಶಿವಕುಮಾರ್, ಈಶ್ವರ್, ಕಿರಣ್‌ಕುಮಾರ್, ಪುಷ್ಪ, ಚಂದ್ರಶೇಖರ್, ಜಯಕುಮಾರ್, ಬಿಜೆಪಿ ಮುಖಂಡರಾದ ಟಿ.ರಾಜಶೇಖರ್, ದಿನೇಶ್ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.