ಶನಿವಾರ, ಏಪ್ರಿಲ್ 17, 2021
33 °C

ಸಹಕಾರ ಸಂಘ ಸ್ಥಳಾಂತರಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ನೆಲಮಂಗಲ: ತಾಲ್ಲೂಕಿನ ಗಾಂಧಿ ಗ್ರಾಮದಲ್ಲಿ ಮಾಜಿ ಸಚಿವ ಪ್ರಭಾಕರ್ ಅವರಿಂದ 1914ರಲ್ಲಿ ಸ್ಥಾಪನೆಯಾದ ವ್ಯವಸಾಯ ಸಹಕಾರ ಸಂಘವನ್ನು ಮಂಚೇನಹಳ್ಳಿಗೆ ಸ್ಥಳಾಂತರಿಸಲು ಆಡಳಿತ ಮಂಡಳಿ ನಿರ್ಧರಿಸಿದ್ದನ್ನು ವಿರೋಧಿಸಿ ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಸಲಾಯಿತು.ಜಿ.ಪಂ. ಮಾಜಿ ಸದಸ್ಯ ಎಚ್.ಪಿ.ಚೆಲುವರಾಜು ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುತ್ತಲ ಸಾವಿರಾರು ಗ್ರಾಮಸ್ಥರು, ಬಿಜೆಪಿ ಪ್ರಮುಖರು  ಭಾಗವಹಿಸಿದ್ದರು.ಗ್ರಾ.ಪಂ. ಸದಸ್ಯ, ಉದ್ಯಮಿ ಬೈರೇಗೌಡ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಗಾಂಧಿ ಗ್ರಾಮವನ್ನು ಕೇಂದ್ರವನ್ನಾಗಿಸಿಕೊಂಡು ಧರ್ಮನಾಯಕನಹಳ್ಳಿ ಮತ್ತು ಮಂಚೇನಹಳ್ಳಿಯಲ್ಲಿ ಶಾಖೆಗಳನ್ನು ಪ್ರಾರಂಭಿಸಲಿ. ಕೇಂದ್ರ ಸ್ಥಾನವನ್ನು ಬದಲಾಯಿಸಕೂಡದು ಎಂದರು.ದತ್ತಿ ಉಪನ್ಯಾಸ

ಧರ್ಮ ಮಾರ್ಗದ ದೀವಿಗೆಗಳಾದ ಶರಣರ ವಚನಗಳ ಗಾಯನವನ್ನು ಶಾಲಾ ಕಾಲೇಜುಗಳಲ್ಲಿ ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ನೀತಿ ಮಾರ್ಗದ ಜಾಗೃತಿಯನ್ನು ಉಂಟುಮಾಡಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಆರ್.ಉಮಾಶಂಕರ್ ತಿಳಿಸಿದರು.

ಸ್ಥಳೀಯ ಮಹಂತಿನ ಮಠದಲ್ಲಿ ಅಖಿಲ ಕರ್ನಾಟಕ ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕವು ಸ್ಥಳೀಯ ಕದಡಿ ಮಹಿಳಾ ವೇದಿಕೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಸುತ್ತೂರು ಜಗದ್ಗುರು ಚನ್ನಬಸವ ಶಿವಚಾರ್ಯರ ದತ್ತಿ ಉಪನ್ಯಾಸದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಶರಣರ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಜವಾಬ್ದಾರಿ ನಮ್ಮಲ್ಲರದಾಗಿದೆ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಸ್,ರಾಮಲಿಂಗೇಶ್ವರ ತಿಳಿಸಿ ಅಕ್ಕಮಹಾದೇವಿ ವಚನಗಳ ವ್ಯಾಖ್ಯಾನ ಮಾಡಿದರು.ಕದಡಿ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಜಯದೇವಯ್ಯ, ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಚ್.ಸಿ.ಪರಮಶಿವಯ್ಯ, ಸ್ಥಳೀಯ ಘಟಕದ ಅಧ್ಯಕ್ಷ ಕೆ.ಬಿ.ಶಿವಶಂಕರ್, ಕೆ.ಬಿ.ಸದಾನಂದಾರಾಧ್ಯ, ಜಗದಾಂಬಾ, ರಾಜಶೇಖರ್ ವೇದಿಕೆಯಲ್ಲಿದ್ದರು.ಶಿವರಾತ್ರಿ ಆಚರಣೆ

ಈಶ್ವರೀಯ ವಿಶ್ವವಿದ್ಯಾಲಯದ ಸ್ಥಳೀಯ ಘಟಕವು ಮಹಾ ಶಿವರಾತ್ರಿ ಪ್ರಯುಕ್ತ

ಶ್ರೀನಿವಾಸ ಸಮುದಾಯ ಭವನದಲ್ಲಿ ಶಿವನ ದಿವ್ಯ ಸಂದೇಶದ ಪ್ರದರ್ಶನವನ್ನು ಬುಧವಾರ ಏರ್ಪಡಿಸಿತ್ತು.

ಮಾಜಿ ಕೃಷಿ ಸಹಾಯಕ ನಿರ್ದೇಶಕ ಶ್ರೀಕಂಠಯ್ಯ ಶಾಂತಿ ಧ್ವಜಾರೋಹಣ ಮಾಡಿ ಮತನಾಡಿ ಮಹಾ ಶಿವರಾತ್ರಿಯು ಜಗತ್ತಿನ ಮಹಾನ್ ಹಬ್ಬವಾಗಿದೆ ಎಂದರು. ಪ್ರದರ್ಶನವನ್ನು ರೋಟರಿ ನಿರ್ದೇಶಕ ಇ.ಟಿ.ಕೆ.ರಾಜು ಉದ್ಘಾಟಿಸಿದರು.ಡಾ.ಬಿ.ಎಚ್. ರಾಜು, ಎಂ.ವೆಂಕಟೇಶ್ ಮುಂತಾದವರು ವೇದಿಕೆಯಲ್ಲಿದ್ದರು. ಜಾಗತಿಕ ಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.