ಭಾನುವಾರ, ನವೆಂಬರ್ 17, 2019
29 °C

ಸಹಜ ಸ್ಥಿತಿಗೆ ಮರಳಿದ ತಮಿಳುನಾಡು

Published:
Updated:

ಚೆನ್ನೈ (ಐಎಎನ್‌ಎಸ್): ಕಳೆದ ಶುಕ್ರವಾರ ನಡೆದ ಬಿಜೆಪಿ ಮುಖಂಡ ವಿ.ರಮೇಶ್ ಹತ್ಯೆಯನ್ನು ಖಂಡಿಸಿ ತಮಿಳುನಾಡಿನ ವಿವಿಧೆಡೆ  ಹಾಗೂ ಪುದುಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ನಡೆಸಿದ ಪ್ರತಿಭಟನೆಯಿಂದ ಸಹಜ ಜನಜೀವನಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ.ಪುದುಚೇರಿ ಹಾಗೂ ತಮಿಳುನಾಡಿನ ಕೆಲ ಜಿಲ್ಲೆಗಳಲ್ಲಿ ಅಂಗಡಿ ಮುಗ್ಗಟ್ಟು ಮುಚ್ಚಿದ್ದವು. ಅಲ್ಲಲ್ಲಿ ಅಹಿತಕರ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿವೆ. ಬಿಜೆಪಿ ಕಾರ್ಯಕರ್ತರು ಬಸ್‌ವೊಂದಕ್ಕೆ ಕಲ್ಲು ತೂರಾಟ ನಡೆಸಿದ್ದರಿಂದ ಎರಡು ವರ್ಷದ ಹೆಣ್ಣು ಮಗುವೊಂದು ಗಾಯಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಪ್ರತಿಕ್ರಿಯಿಸಿ (+)