ಶನಿವಾರ, ಏಪ್ರಿಲ್ 17, 2021
23 °C

ಸಹಜ ಸ್ಥಿತಿಯತ್ತ ಚಾರ್ ಮಿನಾರ್ : ನಿಷೇಧಾಜ್ಞೆ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಐಎಎನ್ಎಸ್) : ವಿವಾದಿತ ಭಾಗ್ಯಲಕ್ಷ್ಮಿ ದೇವಸ್ಥಾನದ ವಿಷಯಕ್ಕೆ ಸಂಬಂಧಿಸಿದಂತೆ ಶುಕ್ರವಾರ ಐತಿಹಾಸಿಕ ಚಾರ್ ಮಿನಾರ್ ಪ್ರದೇಶದಲ್ಲಿ ಏರ್ಪಟ್ಟಿದ್ದ ಉದ್ವಿಗ್ನ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ನಿಷೇಧಾಜ್ಞೆ  ಹಿಂಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತ ಅನುರಾಗ್ ಶರ್ಮಾ ಶನಿವಾರ ಇಲ್ಲಿ ತಿಳಿಸಿದರು.

ಚಾರ್ ಮಿನಾರ್ ಪ್ರದೇಶದಲ್ಲಿ ಪರಿಸ್ಥಿತಿ ಶಾಂತ ಸ್ಥಿತಿಗೆ ಮರಳಿದ್ದು, ವಾಹನ ಸಂಚಾರ ಮತ್ತು ಜನಸಂಚಾರಕ್ಕೆ ಚಾರ್ ಮಿನಾರ್ ಸುತ್ತಲಿನ ರಸ್ತೆಗಳಿಗೆ ಹಾಕಿದ್ದ ತಡೆಗೋಡೆಗಳನ್ನು ತೆರೆವುಗೊಳಿಸಲಾಗಿದ್ದು, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇವರೆಗೆ 40 ಜನರನ್ನು ಬಂಧಿಸಲಾಗಿದೆ ಎಂದು ಶರ್ಮಾ ತಿಳಿಸಿದರು.ವಿವಾದಿತ ದೇವಸ್ಥಾನ ಕಟ್ಟಡದ ವಿಸ್ತರಣೆ ಸಂಬಂಧ ಕೇಳಿಬಂದಿದ್ದ ವದಂತಿಯಿಂದಾಗಿ ಶುಕ್ರವಾರ ಚಾರ್ ಮಿನಾರ್ ಬಳಿ ಹಿಂಸಾಚಾರ ನಡೆದು, ಕನಿಷ್ಠ 7 ಮಂದಿ ಗಾಯಗೊಂಡಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಚಾರ್ ಮಿನಾರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.