ಭಾನುವಾರ, ಮೇ 16, 2021
22 °C

`ಸಹಪಂಕ್ತಿಗೆ ವಿರೋಧವಿಲ್ಲ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಸಹಪಂಕ್ತಿ ಭೋಜನವನ್ನು ನಾವು ಎಲ್ಲಿಯೂ ವಿರೋಧಿಸಿಲ್ಲ; ಅದಕ್ಕೆ ಬಹಿಷ್ಕಾರವನ್ನೂ ಹಾಕಿಲ್ಲ. ಕೃಷ್ಣ ಮಠದಲ್ಲಿ ನಿತ್ಯವೂ ಸಹಭೋಜನ ನಡೆಯುತ್ತಿದೆ' ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದರು.`ಪ್ರಜಾವಾಣಿ' ಜತೆ ಮಾತನಾಡಿದ ಅವರು, `ಪ್ರತಿಯೊಬ್ಬರಿಗೂ ಆಹಾರ ನಿಯಮ ಎಂಬುದು ಉಂಟು. ಅದನ್ನು ಎಲ್ಲರೂ ಗೌರವಿಸಬೇಕು. ಈ ಹಿನ್ನೆಲೆಯಲ್ಲಿ ಬಸವಣ್ಣನವರ ವಚನವನ್ನು ಉದ್ಧರಿಸಿದ್ದೇವೆಯೇ ಹೊರತು ಬೇರೆ ಯಾವುದೇ ಉದ್ದೇಶದಿಂದ ಅಲ್ಲ. ಆಹಾರ ಸಂಸ್ಕೃತಿ ವಿಚಾರ ಮುಂದಿಟ್ಟುಕೊಂಡು ಪ್ರತ್ಯೇಕವಾಗಿ ನೋಡುವ ಮೂಲಕ ಯಾರ ಮನಸ್ಸನ್ನೂ ನೋಯಿಸುವ ಅಗತ್ಯವಿಲ್ಲ' ಎಂದು ಹೇಳಿದರು.`ಆಹಾರ ನಿಯಮವನ್ನು ಪಾಲಿಸುವ ಶಾಕಾಹಾರಿಗಳಿಗೆ ಮಾತ್ರ ಮಠದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ ಯಾವುದೇ ದುರುದ್ದೇಶ ಇಲ್ಲ. ಈ ವಿಷಯವನ್ನು ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಿದ್ದೇವೆ. ಮಿಕ್ಕಂತೆ ಸಹಪಂಕ್ತಿಯಲ್ಲಿ ಬ್ರಾಹ್ಮಣರೂ ಸೇರಿದಂತೆ ಎಲ್ಲರೂ ಒಟ್ಟಾಗಿ ಊಟ ಮಾಡುತ್ತಾರೆ. ಅನಗತ್ಯವಾಗಿ ವಿವಾದವನ್ನು ಬೆಳೆಸುವ ಅಗತ್ಯ ಇಲ್ಲ' ಎಂದು ತಿಳಿಸಿದರು.ವಚನಗಳೂ ಸೇರಿದಂತೆ ಹಲವು ಕಡೆಗಳಲ್ಲಿ ಶಾಕಾಹಾರದ ಉಲ್ಲೇಖವಿದೆ. ಬ್ರಾಹ್ಮಣರನ್ನು ಮಾತ್ರ ಟೀಕಿಸುವುದು ಏಕೆ ಎಂದು ಅವರು ಪ್ರಶ್ನಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.