ಸಹಪಾಠಿಗಳ ಹೀಯಾಳಿಕೆ: ವಿದ್ಯಾರ್ಥಿ ಆತ್ಮಹತ್ಯೆ

7

ಸಹಪಾಠಿಗಳ ಹೀಯಾಳಿಕೆ: ವಿದ್ಯಾರ್ಥಿ ಆತ್ಮಹತ್ಯೆ

Published:
Updated:

ಬೆಂಗಳೂರು: ಜೀವನ್‌ಬಿಮಾನಗರ ಸಮೀಪದ ಬಾಬಾಸಾಬ್ ಕಾಲೊನಿಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನರಸಿಂಹಮೂರ್ತಿ ಮತ್ತು ಕಮಲಮ್ಮ ದಂಪತಿಯ ಮಗ ನಾಗವಿನಯ್ (14) ಆತ್ಮಹತ್ಯೆ ಮಾಡಿಕೊಂಡವನು.ಇಂದಿರಾನಗರದ ಖಾಸಗಿ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ ಆತ, ಶಾಲೆಯಲ್ಲಿ ಎನ್‌ಸಿಸಿಗೆ ಸೇರಿದ್ದ. ನಾಗವಿನಯ್‌ನ ಸಹಪಾಠಿಗಳು, ಆತನಿಗೆ `ದೈಹಿಕವಾಗಿ ದುರ್ಬಲನಾಗಿರುವ ನೀನು, ಎನ್‌ಸಿಸಿಗೆ ಸೇರಿರುವುದು ಸರಿಯಲ್ಲ' ಎಂದು ಹೀಯಾಳಿಸುತ್ತಿದ್ದರು.ಇದರಿಂದ ಬೇಸರಗೊಂಡಿದ್ದ ಆತ ಆ ಬಗ್ಗೆ ತಾಯಿಯ ಬಳಿ ಸೋಮವಾರ ರಾತ್ರಿ ಅಳಲು ತೋಡಿಕೊಂಡಿದ್ದ. ಕಮಲಮ್ಮ, ಶಾಲೆಗೆ ಬಂದುಶಿಕ್ಷಕರ ಮೂಲಕ ಸಹಪಾಠಿಗಳಿಗೆ ಬುದ್ಧಿ ಹೇಳಿಸುವುದಾಗಿ ಮಗನನ್ನು ಸಮಾಧಾನಪಡಿಸಿದ್ದರು. ತಲೆನೋವಿದೆ ಎಂದು  ಮಂಗಳವಾರ ಶಾಲೆಗೆ ಹೋಗದೆ ಮನೆಯಲ್ಲೇ ಇದ್ದ ನಾಗವಿನಯ್, ಪೋಷಕರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ನೇಣು ಹಾಕಿಕೊಂಡಿದ್ದಾನೆ. ಪೋಷಕರು ರಾತ್ರಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry