ಸಹಪಾಠಿಯಿಂದ ಹಲ್ಲೆ: ವಿದ್ಯಾರ್ಥಿ ಸಾವು

7

ಸಹಪಾಠಿಯಿಂದ ಹಲ್ಲೆ: ವಿದ್ಯಾರ್ಥಿ ಸಾವು

Published:
Updated:

ಬಳ್ಳಾರಿ: ಕೋಣೆಯ ದೀಪ ಉರಿಸುವುದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ನಡುವೆ ನಡೆದ ಜಗಳ ಕೊಲೆಯಲ್ಲಿ ಕೊನೆಗೊಂಡ ಘಟನೆ ಬೆಸ್ಟ್ ವಸತಿ ಶಾಲೆಯಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ. ವಸತಿನಿಲಯದಲ್ಲಿ ಗುಲ್ಬರ್ಗದ ಮನಮಳ್ಳಿ ಗ್ರಾಮದ ಲಿಂಗರಾಜ ಕೆಂಚಪ್ಪ ಪೂಜಾರಿ(16) ಹಾಗೂ ಆತನ ಸಹಪಾಠಿ ಗುಲ್ಬರ್ಗ ಜಿಲ್ಲೆಯ ವಿಶಾಲ್(17) ನಡುವೆ, ರಾತ್ರಿ ವೇಳೆ ದೀಪ ಹಚ್ಚುವ ಸಂಬಂಧ ವಾಗ್ವಾದ ನಡೆದಿದೆ. ಓದಲು ವಿದ್ಯುತ್ ದೀಪ ಉರಿಸುವುದಾಗಿ ತಿಳಿಸಿದ ಲಿಂಗರಾಜನ ಮೇಲೆ, ವಿಶಾಲ್ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ತೀವ್ರ ಗಾಯಗೊಂಡ ಲಿಂಗರಾಜನನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಅಸುನೀಗಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry