ಸೋಮವಾರ, ಮೇ 17, 2021
31 °C

ಸಹರಾ ಮರುಭೂಮಿಯಲ್ಲಿ ಅಂತರ್ಜಲ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಐಎಎನ್‌ಎಸ್): ಈ ಭೂಮಿಯ ಮೇಲಿನ ಅತಿ ಒಣಗಿದ ಪ್ರದೇಶವಾದ ಸಹರಾ ಮರುಭೂಮಿಯಲ್ಲಿ ಅಪಾರ ಪ್ರಮಾಣದಲ್ಲಿ ಅಂತರ್ಜಲವಿದೆ ಎಂದು ಸಂಶೋಧಕರು ಹೇಳಿದ್ದಾರೆ.ಬ್ರಿಟನ್‌ನ ಭೂಗರ್ಭ ಸರ್ವೇಕ್ಷಣಾಲಯ ಮತ್ತು ಲಂಡನ್ ವಿಶ್ವವಿದ್ಯಾಲಯ ಕಾಲೇಜಿನ ಸಂಶೋಧಕರು ಮರುಭೂಮಿಯ ಅಂತರ್ಜಲವಿರುವ ಪ್ರದೇಶದ ನಕ್ಷೆಯನ್ನು ಸಿದ್ಧಪಡಿಸಿದ್ದಾರೆ.ಉತ್ತರ ಆಫ್ರಿಕಾದ ಲಿಬಿಯಾ, ಅಲ್ಜೀರಿಯಾ, ಈಜಿಪ್ಟ್ ಮತ್ತು ಸೂಡಾನ್‌ನಲ್ಲಿ ಸುಮಾರು 0.66 ದಶಲಕ್ಷ ಕ್ಯೂಬಿಕ್ ಕಿಲೋಮೀಟರ್ ಅಂತರ್ಜಲವಿದೆ ಎಂದು ಅಂದಾಜು ಮಾಡಲಾಗಿ.ದೆ. ಕೆಲವು ಕಡೆಗಳಲ್ಲಿ 100ರಿಂದ 250 ಮೀಟರ್ ಆಳದಲ್ಲಿ ಅಂತರ್ಜಲವಿರುವುದರಿಂದ ಅಲ್ಲಿ ನೀರನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.