ಸಹಾಯಕ ಜಿಲ್ಲಾಧಿಕಾರಿಗೆ ಎನ್ಸಿಪಿ ಶಾಸಕನಿಂದ ಕಪಾಳಮೋಕ್ಷ

ಮುಂಬೈ: ಮಹರಾಷ್ಟ್ರದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಶಾಸಕ ಸುರೇಶ್ ಲಾಡ್, ಸಹಾಯಕ ಜಿಲ್ಲಾಧಿಕಾರಿಗೆ ಕಪಾಳಮೋಕ್ಷ ಮಾಡಿದ ಘಟನೆ ವರದಿಯಾಗಿದೆ.
ಕಳೆದ ವಾರ ಮಹರಾಷ್ಟ್ರದ ರಾಯ್ಗಢ್ ನಲ್ಲಿ ಅಲ್ಲಿನ ಸಹಾಯಕ ಜಿಲ್ಲಾಧಿಕಾರಿ ಅಭಯ್ ಕಲ್ಗುಡ್ಕರ್, ಭೂ ಸ್ವಾಧೀನ ಪ್ರಕರಣವೊಂದಕ್ಕೆ ಸಂಬಂಧಿಸಿ ಸಭೆ ಕರೆದಿದ್ದರು. ಆ ಸಭೆಯಲ್ಲಿ ರೈತರಿಗೆ ಪರಿಹಾರ ನೀಡುವ ವಿಷಯದ ಬಗ್ಗೆ ಮಾತಿಗೆ ಮಾತು ಬೆಳೆದು ಜಗಳವುಂಟಾಗಿದೆ. ಆ ವೇಳೆ ಕುಪಿತರಾದ ಕರ್ಜಾತ್ ಕ್ಷೇತ್ರದ ಶಾಸಕ ಸುರೇಶ್ ಲಾಡ್ ಅಭಯ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಆದಾಗ್ಯೂ, ಅಭಯ್ ಅವರಿಗೆ ಲಾಡ್ ಹೊಡೆದಿರುವುದಕ್ಕೆ ಸ್ಪಷ್ಟ ಕಾರಣ ಏನೆಂಬುದು ತಿಳಿದುಬಂದಿಲ್ಲ. ಇತ್ತ ಅಭಯ್ ಕೂಡಾ ಲಾಡ್ ವಿರುದ್ಧ ದೂರು ನೀಡಿಲ್ಲ.
ಲಾಡ್ ಅವರು ಅಭಯ್ ಅವರಿಗೆ ಥಳಿಸುತ್ತಿರುವ ವಿಡಿಯೊವನ್ನು ಸುದ್ದಿ ಮಾಧ್ಯಮಗಳು ಬಿತ್ತರಿಸಿದ್ದರೂ, ನಾನು ಹಾಗೇನು ಮಾಡಿಲ್ಲ ಎಂದು ಲಾಡ್ ವಾದಿಸುತ್ತಿದ್ದಾರೆ.
ಲಾಡ್ ಅವರು ಅಭಯ್ ಅವರಿಗೆ ಥಳಿಸುತ್ತಿರುವ ವಿಡಿಯೊ
WATCH: NCP MLA from Karjat, Suresh Lad slaps deputy collector in his office in Raigad(Maharashtra)https://t.co/9KYa3vrMOi
— ANI (@ANI_news) August 17, 2016
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.