ಸಹಾಯಧನದಲ್ಲಿ ರೈತರಿಗೆ ಬೀಜ ವಿತರಣೆ

ಮಂಗಳವಾರ, ಜೂಲೈ 16, 2019
25 °C

ಸಹಾಯಧನದಲ್ಲಿ ರೈತರಿಗೆ ಬೀಜ ವಿತರಣೆ

Published:
Updated:

ರಾಣೆಬೆನ್ನೂರು: ತಾಲ್ಲೂಕಿನ ಮೆಡ್ಲೇರಿ. ಕುಪ್ಪೇಲೂರು ಮತ್ತು ರಾಣೆಬೆನ್ನೂರು ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ತಾಪಂ ಸಹಾಯಧನದಲ್ಲಿ ರೈತರಿಗೆ ಬೀಜ ವಿತರಣೆ  ನಡೆಯಿತು.ಜಿಪಂ ಸದಸ್ಯ ಶಿವಕುಮಾರ ಮುದ್ದಪ್ಪಳವರ ಮಾತನಾಡಿ, ರೈತರು ಸರ್ಕಾರೀ ಯೋಜನೆಗಳ ಸದುಪಯೋಗ ಪಡೆದು ಆರ್ಥಿಕವಾಗಿ ಮುಂದೆ ಬರಬೇಕೆಂದರು.ಸಹಾಯಕ ಕೃಷಿ ನಿರ್ದೇಶಕ ಡಾ. ಬತ್ತಿಕೊಪ್ಪದ,  ರೈತರು ಬೀಜ ಬಿತ್ತನೆ ಸಮಯದಲ್ಲಿ ಉತಮ ಮೊಳಕೆ ಮತ್ತು ಇಳುವರಿ ತೆಗೆಯಲು ಲಘು ಪೋಷಕಾಂಶಗಳಾದ ಜಿಂಕು, ಜಿಪ್ಸಂ, ಬೋರಾನ್‌ಗಳು ಸಹಾಯಧನದಲ್ಲಿ ಲಭ್ಯವಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಎಪಿಎಂಸಿ ಸದಸ್ಯ ಮಂಜುನಾಥ ಲಿಂಗದಹಳ್ಳಿ ಹಾಗೂ ಗ್ರಾಪಂ ಸದಸ್ಯೆಯರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry