ಮಂಗಳವಾರ, ಜೂನ್ 22, 2021
24 °C

ಸಹಾಯಧನ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಗುಂದ: ಸರಕಾರವು ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ.  ಬಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿಶೇಷ ಸಹಾಯ ಧನವನ್ನು ನೀಡುತ್ತಿದೆ. ಅದನ್ನು ಪಡೆದುಕೊಂಡು ಸರಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಸಿ.ಸಿ. ಪಾಟೀಲ ಕರೆ ನೀಡಿದರು.ಪಟ್ಟಣದಲ್ಲಿ ಶುಕ್ರವಾರ  ಪುರಸಭೆಯಲ್ಲಿ ನಡೆದ ಸಮಾರಂಭದಲ್ಲಿ ಬಜೆಟ್‌ನ 7.25ರ ಅನುದಾನದಡಿ ಎಸ್‌ಸಿ/ಎಸ್‌ಟಿ ಹಾಗೂ ಹಿಂದುಳಿದ ವರ್ಗದ ಬಡ ವಿದ್ಯಾರ್ಥಿಗಳಿಗೆ  ಸಹಾಯಧನದ ಚೆಕ್‌ನ್ನು ವಿತರಿಸಿ ಮಾತನಾಡಿದರು.   ವಿದ್ಯಾರ್ಥಿಗಳ ತಮ್ಮ ಜವಾಬ್ದಾರಿಯನ್ನು ಅರಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಈಗ ವಿತರಣೆ ಮಾಡಲಾಗುತ್ತಿರುವ ಸಹಾಯಧನವನ್ನು ಕಡ್ಡಾಯವಾಗಿ ಶೈಕ್ಷಣಿಕ ಸೌಲಭ್ಯಗಳಿಗೆ ಬಳಸಿಕೊಂಡು ಗುಣಾತ್ಮಕ ಶಿಕ್ಷಣ ಪಡೆದುಕೊಳ್ಳಬೇಕು ಎಂದರು.ಪುರಸಭೆ ಸದಸ್ಯ ವಸಂತ ಜೋಗಣ್ಣವರ, ಪ್ರಥಮ ಬಾರಿಗೆ ಪುರಸಭೆ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ತರಗತಿಗೆ ಅನುಗುಣವಾಗಿ ತಲಾ ಎರಡು ಸಾವಿರದಿಂದ ಹತ್ತು ಸಾವಿರ ರೂಪಾಯಿಗಳವರೆಗೆ ಸಹಾಯಧನವನ್ನು ನೀಡಲಾಗುತ್ತಿದ್ದು.

 

ಜೊತೆಗೆ ಮುಂಬರುವ ದಿನಗಳಲ್ಲಿ  ವೈದ್ಯಕೀಯ ಸೌಲಭ್ಯ ಹಾಗೂ ನೇತ್ರ ತಪಾಸಣೆಯನ್ನು ಹಮ್ಮಿಕೊಂಡು ಕನ್ನಡಕಗಳನ್ನು  ವಿತರಿಸಲಾಗುವುದು ಎಂದರು.  ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್.ಎಸ್. ಇಬ್ರಂಡಿ  ಎಸ್‌ಸಿ/ಎಸ್‌ಟಿಯ  84 ವಿದ್ಯಾರ್ಥಿಗಳಿಗೆ ರೂ. 1,66,000, ಇತರೆ ವರ್ಗದ ಬಡ 32 ವಿದ್ಯಾರ್ಥಿಗಳಿಗೆ ರೂ. 1,20,000 ಸಹಾಯಧನದ ಚೆಕ್ ವಿತರಿಸಲಾಗುತ್ತಿದೆ. ಇದರ ಸದುಪಯೋಗವಾಗಬೇಕಿದೆ.

 

7.25ರ ಅನುದಾನದಡಿ ವೈದ್ಯಕೀಯ ಸೌಲಭ್ಯ, ಹೊಲಿಗೆ ಯಂತ್ರ ವಿತರಣೆ ಸೇರಿದಂತೆ ವಿವಿಧ ಸೌಲಭ್ಯ ನೀಡಲಾಗುವುದು ಎಂದರು.ಪುರಸಭೆ ಅಧ್ಯಕ್ಷೆ ಮಲ್ಲವ್ವ ಗುಂಜಳ ಅಧ್ಯಕ್ಷತೆ ವಹಿಸಿದ್ದರು.  ಉಪಾಧ್ಯಕ್ಷ ಉಮೇಶ ಯಮೋಜಿ, ಸದಸ್ಯರಾದ ಪ್ರಕಾಶ ಪಟ್ಟಣಶೆಟ್ಟಿ, ಚಂದ್ರು ಕೋಟಿ, ರಾಮಕೃಷ್ಣ ಗೊಂಬಿ, ವಿಠ್ಠಲ ಮುಧೋಳೆ, ಶೈಲಾ ನರಗುಂದ, ಎಪಿಎಂಸಿ ಅಧ್ಯಕ್ಷ ಚಂದ್ರಗೌಡ ಪಾಟೀಲ, ಮುಖ್ಯಾಧಿಕಾರಿ ರಾಜಶೇಖರ, ಬಿ.ಇ. ನದಾಫ್, ಸದಾ ನರಗುಂದ, ಪುರಸಭೆ  ಸದಸ್ಯರಿದ್ದರು. ವಿಠ್ಠಲ ಹಡಗಲಿ ನಿರೂಪಿಸಿ, ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.