ಸಹಾಯ ಹಸ್ತ ಲಾಂಛನ ಉದ್ಘಾಟನೆ

7

ಸಹಾಯ ಹಸ್ತ ಲಾಂಛನ ಉದ್ಘಾಟನೆ

Published:
Updated:

ಮೈಸೂರು: ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಯೋಜನೆಯ `ಸಹಾಯ ಹಸ್ತ~ ಲಾಂಛನವನ್ನು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್ ಬಿಡುಗಡೆ ಮಾಡಿದರು.ಬಳಿಕ ಮಾತನಾಡಿದ ಅವರು, `ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಆದ್ದರಿಂದ ಈ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸೌಲಭ್ಯ ಜನರಿಗೆ ತಲುಪಿಸುವ ಜವಾಬ್ದಾರಿ ಹೊತ್ತವರು ಸ್ಥಳಕ್ಕೆ ಹೋಗಿ ಪರಿಶೀಲಿಸಬೇಕು. ಅಗತ್ಯ ನೆರವು ಬೇಕಾದ ಕುಟುಂಬಗಳಿಗೆ `ಸಹಾಯ ಹಸ್ತ~ ನೀಡಬೇಕು~ ಎಂದು ಹೇಳಿದರು.ಯೋಜನೆಯ ರೂವಾರಿ ಕೆ.ಎಸ್.ಮಂಜುನಾಥ್ ಮಾತನಾಡಿ, `ಸರ್ಕಾ ರದ ಸೌಲಭ್ಯ ಅರ್ಹರಿಗೆ ಕಷ್ಟಪಡದೆ ಸಿಗುವಂತಾಗಬೇಕು. ಈ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯು ಸಾಮಾಜಿಕ ಭದ್ರತಾ ಯೋಜನೆಯನ್ನು ಜಾರಿಗೆ ತಂದಿದೆ. ಸೌಲಭ್ಯ ಜನರಿಗೆ ತಲುಪಿಸುವ ಜವಾಬ್ದಾರಿ ಹೊತ್ತವರು ಸಂಬಂಧಿಸಿದ ಅಧಿಕಾರಿಗಳಿಗೆ ಫಲಾನುಭವಿಗಳ ಅರ್ಜಿ ಕಳುಹಿಸುವ ಮೂಲಕ ಅವರಿಗೆ ನೆರವಾಗಬೇಕು. ಜಿಲ್ಲಾಧಿಕಾರಿ ಮತ್ತು ಜಿ.ಪಂ. ಸಿಇಒ ಮಾರ್ಗದರ್ಶನ ನೀಡ ಬೇಕು. ಬಳ್ಳಾರಿಗೆ ಹೋಲಿಸಿದರೆ ಮೈಸೂರು ಜಿಲ್ಲೆಯಲ್ಲಿ ಯೋಜನೆ ಮಂದಗತಿಯಲ್ಲಿ ಸಾಗುತ್ತಿದೆ. ಆದ್ದರಿಂದ ಎಲ್ಲರೂ ಬದ್ಧತೆಯಿಂದ ಕೆಲಸ ಮಾಡಬೇಕು. ಇಲ್ಲವಾದರೆ ಕೆಲಸ ಬಿಟ್ಟು ಹೋಗಬೇಕು~ ಎಂದು ಎಚ್ಚರಿಕೆ ನೀಡಿದರು.ಜಿಲ್ಲಾ ಪಂಚಾಯಿತಿ ಸಿಇಒ ಜಿ.ಸತ್ಯವತಿ, ಯೋಜನಾ ನಿರ್ದೇಶಕ ಹಾನ್ಸ್ ಕ್ರಿಸ್ಟೋಫರ್ ಅಮ್ಮಾನ್ ಮಾತನಾಡಿದರು. ನಮ್ರತಾ ಶರ್ಮಾ ಹಾಜರಿದ್ದರು.ಏನಿದು ಯೋಜನೆ: ಅಸಂಘಟಿತ ಕಾರ್ಮಿಕರು ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ಪಡೆಯಲು ಮತ್ತು ಅಸಂಘಟಿತ ಕಾರ್ಮಿಕರಿಗೆ ಮಾರ್ಗದರ್ಶನ ನೀಡಲು `ಸಾಮಾಜಿಕ ಭದ್ರತಾ ಯೋಜನೆ~ಯನ್ನು ಜಾರಿಗೊ ಳಿಸಲಾಗಿದೆ. ಪ್ರಸ್ತುತ 215 ಕಾರ್ಮಿಕ ಸೇವಾ ಸೌಲಭ್ಯ ಕೇಂದ್ರಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರಂಭಿಸಲಾಗಿದೆ.ಕಾರ್ಮಿಕ ಸೇವಾ ಸೌಲಭ್ಯ ಕೇಂದ್ರಗಳನ್ನು ಮೈಸೂರು, ಬಳ್ಳಾರಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ದಕ್ಷಿಣ ಕನ್ನಡ ಹಾಗೂ ಗುಲ್ಬರ್ಗಾ ಸೇರಿದಂತೆ 5 ಜಿಲ್ಲೆಗಳಲ್ಲಿ ಆರಂಭಿಸಲಾಗಿದೆ.ಇದುವರೆಗೆ 62 ಸಾವಿರ ಅಸಂಘಟಿತ ಕಾರ್ಮಿಕ ಕುಟುಂಬಗಳ ಸಮಗ್ರ ಕೌಟುಂಬಿಕ ಮಾಹಿತಿ ಸಂಗ್ರಹಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು 50 ಮಂದಿ ಫೆಸಿಲಿಟೇಟರ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಯೋಜನೆಯಿಂದ ವೃದ್ಧಾಪ್ಯ ವೇತನ, ವಿಧವಾ ಮತ್ತು ಅಂಗವಿಕಲ ವೇತನ, ಕಟ್ಟಡ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳು, ಹೊಸ ಪಿಂಚಣಿ ಯೋಜನೆ, ಅಮ್ ಆದ್ಮಿ ಭೀಮಾ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ ಮತ್ತು ವಾಜಪೇಯಿ ಆರೋಗ್ಯಶ್ರೀ ಯೋಜನೆಗಳ  ಮಾರ್ಗ ದರ್ಶನ ನೀಡಲು ಸಹಾಯಕವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry