ಸೋಮವಾರ, ಜೂನ್ 14, 2021
21 °C

ಸಹಾರಾ ಪ್ರಸ್ತಾವ ತಿರಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಹೂಡಿಕೆದಾರರ ಹಣ ವಾಪಸ್‌ಗೆ ವಿಶ್ವಾಸಾರ್ಹ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾದ ‘ಸಹಾರಾ ಸಮೂಹದ’ ಧೋರಣೆಯನ್ನು  ಸುಪ್ರೀಂ­ಕೋರ್ಟ್ ವಿಶೇಷ ಪೀಠ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಹಣ ಹಿಂತಿರುಗಿಸಲು ‘ಗೌರವಾನ್ವಿತ’ ಯೋಜನೆ ಪ್ರಕಟಿಸು­ವಂತೆ ಸೂಚಿಸಿದೆ. ಈ ಪ್ರಕರಣದ ವಿಚಾರಣೆಯನ್ನು ಕೋರ್ಟ್ ಮುಂದೂಡಿ­ದ್ದರಿಂದ ಈಗಾಗಲೆ ಬಂಧನದಲ್ಲಿರುವ ಸಂಸ್ಥೆಯ ಮುಖ್ಯಸ್ಥ ಸುಬ್ರತೊ ರಾಯ್‌ ಮುಂದಿನ ಮುಂಗಳವಾರದ ವರೆಗೆ ತಿಹಾರ್‌ ಜೈಲಿನಲ್ಲೇ ಇರಬೇಕಾಗಿದೆ.‘ತಮ್ಮ ಅಹವಾಲು ಆಲಿಸಲು ವಿಶೇಷ ಪೀಠ ಸೇರಬೇಕು ಎಂದು ಕೇಳಿಕೊಂಡಿದ್ದ ಸಹಾರಾ ಸಂಸ್ಥೆ, ಇದಕ್ಕೆ ಸಂಬಂಧಿಸಿ ಸಮರ್ಪಕವಾದ ಮಾಹಿತಿಯನ್ನೇ  ಒದಗಿಸಿಲ್ಲ. ಹಣ ಮರು­ಪಾವತಿಸಲು  ಆಗುವುದಿಲ್ಲ ಎಂದು ಈಗ ಹೇಳುತ್ತಿದೆ. ಇದು ನಮಗೆ (ಕೋರ್ಟಿಗೆ) ಮಾಡಿದ ಅವಮಾನ’ ಎಂದು ಪೀಠ ಹೇಳಿದೆ.ಮೂರು ದಿನದ ಒಳಗಡೆ ರೂ. 2,500 ಕೋಟಿ ನಗದು ಹಣ­ವನ್ನು ಪಾವತಿ ಮಾಡಲಾಗುವುದು.  ಉಳಿದ ಮೊತ್ತವಾದ ರೂ. 14,900 ಕೋಟಿಯನ್ನು 2015ರ ಜುಲೈ ಒಳಗೆ ಐದು ಕಂತುಗಳಲ್ಲಿ ‘ಸೆಬಿ’ಗೆ ಹಿಂತಿರುಗಿಸಲಾಗುವುದು ಎಂದು ಸಹಾರಾ ಸಮೂಹ ಕೋರ್ಟ್‌ಗೆ ಭರವಸೆ ನೀಡಿತ್ತು. ಆದರೆ ಸಂಸ್ಥೆಯ ಈ ಪ್ರಸ್ತಾವವನ್ನು ನ್ಯಾ. ರಾಧಾಕೃಷ್ಣನ್‌ ಹಾಗೂ ಜೆ.ಎಸ್‌. ಕೇಹರ್‌ ಅವರನ್ನೊಳಗೊಂಡ ಪೀಠ ತಿರಸ್ಕರಿಸಿತ್ತು.ಭಾರತೀಯ ಷೇರು ನಿಯಂತ್ರಣ ಮಂಡಳಿ (ಸೆಬಿ) ಸಹ ಈ ಪ್ರಸ್ತಾಪ ವಿರೋಧಿಸಿದೆ. ವಾಸ್ತವವಾಗಿ ಸಂಸ್ಥೆ ರೂ. 34,000 ಕೋಟಿ ನೀಡಬೇಕಿದ್ದು, ಆದರೆ ಅದೀಗ ಕೇವಲ ರೂ. 17,400 ಕೋಟಿ ನೀಡುವುದಾಗಿ ತಿಳಿಸಿದೆ ಎಂದು ‘ಸೆಬಿ ’ ತಿಳಿಸಿದೆ.‘ಇದು ಸರಿಯಾದ ಹಾಗೂ ಗೌರವಾನ್ವಿತ ಪ್ರಸ್ತಾಪ ಅಲ್ಲ’ ಎಂದು ಪೀಠ ತಿಳಿಸಿತು.ಹಿರಿಯ ವಕೀಲ ಸಿ.ಎ. ಸುಂದರಂ ಅವರು ಇತರ ಹಿರಿಯ ವಕೀಲರೊಂದಿಗೆ ಸೇರಿಕೊಂಡು ಈ ಸಂಬಂಧ ನ್ಯಾಯಪೀಠಕ್ಕೆ ವಸ್ತುಸ್ಥಿತಿ ಮನವರಿಕೆ ಮಾಡಿ ಕೊಡಲು ಯತ್ನಿಸಿದರು. ಸಂಸ್ಥೆಯ ಮುಖ್ಯಸ್ಥ ಸುಬ್ರತೊ ರಾಯ್‌ ಅವರೇ ಬಂಧನಕ್ಕೆ ಒಳಗಾಗಿದ್ದರಿಂದ ಈ ಹಂತದಲ್ಲಿ ಮತ್ತಷ್ಟು ಹಣ ಹೊಂದಿಸು­ವುದು ಅಸಾಧ್ಯ ಎಂದು ಈ ವಕೀಲರು ವಾದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.