ಸಹಾರಾ ಸಮೂಹಕ್ಕೆ ಸುಪ್ರೀಂ ಛೀಮಾರಿ

7

ಸಹಾರಾ ಸಮೂಹಕ್ಕೆ ಸುಪ್ರೀಂ ಛೀಮಾರಿ

Published:
Updated:

ನವದೆಹಲಿ (ಪಿಟಿಐ): ಹೂಡಿಕೆದಾರರಿಂದ ಸಂಗ್ರಹಿಸಿದ ರೂ.27 ಸಾವಿರ ಕೋಟಿ ಹಣವನ್ನು ವಾಪಸ್ ನೀಡಲು ವಿಳಂಬ ನೀತಿ ಅನುಸರಿಸುತ್ತಿರುವ ಸಹಾರಾ ಸಮೂಹಕ್ಕೆ  ಸುಪ್ರೀಂ  ಕೋರ್ಟ್ ಸೋಮವಾರ ಛೀಮಾರಿ ಹಾಕಿದೆ.

`ಹೂಡಿಕೆದಾರರ ಹಣ ಮರಳಿಸುವಲ್ಲಿ ನಿಮ್ಮ ಪ್ರತಿಯೊಂದು ನಡೆಯೂ ಅನುಮಾನಾಸ್ಪದವಾಗಿದೆ. ಸಂಪೂರ್ಣ ಹಣವನ್ನು ಒಂದು ವಾರದೊಳಗೆ ಮರಳಿಸಲು ಸಾಧ್ಯವೇ ಇಲ್ಲವೇ ಎನ್ನುವುದನ್ನು ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಅವರನ್ನೊಳಗೊಂಡ ಪೀಠ ಸೂಚಿಸಿದೆ.

ಸಹಾರಾ ಇಂಡಿಯಾ ರಿಯಲ್ ಎಸ್ಟೇಟ್ ಮತ್ತು ಸಹಾರಾ ಹೌಸಿಂಗ್ ಇನ್ವೆಸ್ಟ್‌ಮೆಂಟ್ ಹೂಡಿಕೆದಾರರಿಂದ ಹಣ ಸಂಗ್ರಹಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry