`ಸಹೋದರತ್ವ ಭಾವನೆಯಿಂದ ದೇಶ ಬಲಿಷ್ಠ'

7

`ಸಹೋದರತ್ವ ಭಾವನೆಯಿಂದ ದೇಶ ಬಲಿಷ್ಠ'

Published:
Updated:
`ಸಹೋದರತ್ವ ಭಾವನೆಯಿಂದ ದೇಶ ಬಲಿಷ್ಠ'

ಬೀದರ್: ಪರಸ್ಪರ ಸಹೋದರತ್ವ ಭಾವನೆ ಮೂಡಿದಾಗಲೇ ದೇಶ ಬಲಶಾಲಿ ಆಗಲು ಸಾಧ್ಯ ಎಂದು ಪರಿಷತ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದ್ರಿ ಹೇಳಿದರು.

ಸ್ವಾಮಿ ವಿವೇಕಾನಂದ ಹಾಗೂ ಸುಭಾಷ್‌ಚಂದ್ರ ಬೋಸ್ ಜಯಂತಿ ಪ್ರಯುಕ್ತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರದ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಪ್ರಸ್ತುತ ಮಹಿಳೆಯರಿಗೂ ಪುರುಷರಿಗೆ ಸರಿ ಸಮನಾದ ಸ್ಥಾನಮಾನ ನೀಡಬೇಕಾದ ಅಗತ್ಯವಿದೆ ಎಂದರು.

ವಿವೇಕಾನಂದ ಹಾಗೂ ಸುಭಾಷ್‌ಚಂದ್ರ ಬೋಸ್ ಅವರ ತತ್ವಗಳು ಯುವ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಗೋವಿಂದರಾಜು ನುಡಿದರು.

ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮಲ್ಲಮ್ಮ ಚೌಬೆ ಉದ್ಘಾಟಿಸಿದರು.

ಪರಿಷತ್ ನಗರ ಘಟಕದ ಅಧ್ಯಕ್ಷ ರಮೇಶ್ ಪಾಟೀಲ್, ಕಾರ್ಯದರ್ಶಿ ವಿನಾಯಕ ದೇಶಪಾಂಡೆ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry