ಸಹೋದರಿಯನ್ನೂ ಕೊಂದಿದ್ದ ಹಂತಕ?

7

ಸಹೋದರಿಯನ್ನೂ ಕೊಂದಿದ್ದ ಹಂತಕ?

Published:
Updated:

ನ್ಯೂಯಾರ್ಕ್ (ಪಿಟಿಐ): ಇಲ್ಲಿನ ವೆಬ್‌ಸ್ಟರ್ ಪ್ರದೇಶದಲ್ಲಿ ಮನೆಗೆ ಹೊತ್ತಿದ್ದ ಬೆಂಕಿ ನಂದಿಸುತ್ತಿದ್ದ ಇಬ್ಬರು ಅಗ್ನಿಶಾಮಕ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದ ಹಂತಕನ ಮನೆಯಲ್ಲಿ ಶವ ವೊಂದು ಪತ್ತೆಯಾಗಿದೆ.ಈ ಶವವು ಹಂತಕ ವಿಲಿಯಂ ಸ್ಪೆಂಗ್ಲರ್‌ನ ಸಹೋದರಿಯದ್ದಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಸಹೋದರಿಯೊಂದಿಗೆ ಆತನ ಸಂಬಂಧ ಸರಿ ಇರಲಿಲ್ಲ ಎಂದೂ ಹೇಳಲಾಗಿದೆ.ಸ್ಪೆಂಗ್ಲರ್ ಕೊಲ್ಲಲು ನಿರ್ಧರಿಸುವ ಮುನ್ನ ಬರೆದಿಟ್ಟಿದ್ದ ಒಂದು ಪತ್ರವೂ ಮನೆಯಲ್ಲಿ ಸಿಕ್ಕಿದೆ. `ನನಗೆ ಅತ್ಯಂತ ಖುಷಿ ಕೊಡುವ ಕೆಲಸವನ್ನು- ಜನರನ್ನು ಕೊಲ್ಲುವ ಕಾರ್ಯವನ್ನು- ನಾನು ಮಾಡುತ್ತೇನೆ' ಎಂಬ ಒಕ್ಕಣೆ ಅದರಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry