ಸಹೋದರಿಯ ಶಿರಚ್ಛೇದ

7

ಸಹೋದರಿಯ ಶಿರಚ್ಛೇದ

Published:
Updated:

ಕೋಲ್ಕತ್ತ (ಪಿಟಿಐ): ವಿವಾಹಿತ ಸಹೋದರಿ ಅನ್ಯ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನುವ ಕಾರಣಕ್ಕಾಗಿ ಸಹೋದರನೊಬ್ಬ ಕತ್ತಿಯಿಂದ ಆಕೆಯ ಶಿರಚ್ಛೇದ ಮಾಡಿ ಬಳಿಕ ಆಕೆಯ ಶಿರದೊಂದಿಗೆ ಪೊಲೀಸ್ ಠಾಣೆಯಲ್ಲಿ ಶರಣಾಗಿರುವ ಘಟನೆ ಪಶ್ಚಿಮಬಂಗಾಳದಲ್ಲಿ ನಡೆದಿದೆ.`24 ವರ್ಷದ ನಿಲೊಫರ್ ಬೀಬಿ ಅವರನ್ನು ಸಹೋದರ ಮೆಹ್ತಾಬ್ ಆಲಂ (29) ಹತ್ಯೆ ಮಾಡಿದ್ದಾನೆ. ಇಬ್ಬರು ಮಕ್ಕಳನ್ನು ಹೊಂದಿದ್ದ ನಿಲೊಫರ್ ರಿಕ್ಷಾ ಗಾಡಿ ತಳ್ಳುವವನೊಂದಿಗೆ ವಾಸವಾಗಿದ್ದಳು. ಇದನ್ನು ತಿಳಿದ ಮೆಹ್ತಾಬ್ ಆಕೆ ಇದ್ದ ಮನೆಗೆ ತೆರಳಿ ಅವಳನ್ನು ಮನೆಯ ಹೊರಕ್ಕೆ ಎಳೆದೊಯ್ದು ಸಾರ್ವಜನಿಕವಾಗಿ ಶಿರಚ್ಛೇದ ಮಾಡಿದ್ದಾನೆ' ಎಂದು ಉಪ ಪೊಲೀಸ್ ಆಯುಕ್ತ ಮೆಹಬೂಬ್ ರೆಹಮಾನ್ ತಿಳಿಸಿದ್ದಾರೆ.ಕೈಯಲ್ಲಿ ರುಂಡವನ್ನು ಹಿಡಿದು ನಾಡಿಯಾ ಪೊಲೀಸ್ ಠಾಣೆಗೆ ತೆರಳುತ್ತಿದ್ದ ಆಲಂನನ್ನು ಜನರು ಭಯಭೀತರಾಗಿ ನೋಡುತ್ತಿದ್ದರು. ಆರೋಪಿ ಆಲಂನನ್ನು ಡಿಸೆಂಬರ್ 22ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry