ಮಂಗಳವಾರ, ನವೆಂಬರ್ 12, 2019
19 °C

ಸಹೋದ್ಯೋಗಿಗಳ ಜತೆ ವೇತನ ಚರ್ಚೆ ಇಲ್ಲವೇ ಇಲ್ಲ..!

Published:
Updated:

ನ್ಯೂಯಾರ್ಕ್ (ಪಿಟಿಐ): ಅತ್ತೆಯ ಕಿರಿಕಿರಿ, ಗಂಡನ ಮುನಿಸು, ಕೈಕೊಟ್ಟ ಪ್ರೇಯಸಿ... ಎಲ್ಲರ ಕುರಿತೂ ಸಹೋದ್ಯೋಗಿಗಳ ಜತೆ ಚರ್ಚಿಸಬಹುದು.

ಆದರೆ, ಸಂಬಳದ ವಿಚಾರದಲ್ಲಿ ಮಾತ್ರ ಸಹೋದ್ಯೋಗಿಗಳ  ಜತೆ ಚರ್ಚಿಸಲು ಮನಸ್ಸು ಹಿಂಜರಿಯುತ್ತದೆ. ಬಾಯಿ ಕಟ್ಟುತ್ತದೆ.ಇದು ಕೇವಲ ಒಂದು ದೇಶದ ಜನರ ಕಥೆಯಲ್ಲ. ಸಂಬಳದ ಬಗ್ಗೆ ಮಾತನಾಡುವುದು ಅಂದರೆ ಜಗತ್ತಿನ ಎಲ್ಲ ಭಾಗದ ಜನರಿಗೂ ಮುಜುಗರವಂತೆ...!

ವೇತನದ ವಿಷಯ ಬಂದಾಗ ಎಲ್ಲ ದೇಶಗಳ ಜನರೂ, `ನಮ್ಮನ್ನು ಕೇಳಬೇಡಿ, ನೀವೂ ಹೇಳಬೇಡಿ' ಎಂಬ ನೀತಿಯನ್ನು ಅನುಸರಿಸುತ್ತಾರೆ ಎಂಬ ಅಂಶ ಪ್ರಸಿದ್ಧ ಉದ್ಯೋಗ ಜಾಲತಾಣವಾದ `ಮಾನ್‌ಸ್ಟರ್ ಡಾಟ್‌ಕಾಮ್' ನಡೆಸಿದ ಜಾಗತಿಕ ಅಧ್ಯಯನದಿಂದ ಬಹಿರಂಗಗೊಂಡಿದೆ.   ಪ್ರಪಂಚದ  ಬಹುತೇಕ ಉದ್ಯೋಗಿಗಳು ತಮ್ಮ ಸಹೋದ್ಯೋಗಿಗಳೊಂದಿಗೆ ವೇತನ, ಲಾಭಾಂಶ, ರಜಾದಿನಗಳು, ಅನಾರೋಗ್ಯ ವಿಷಯಗಳನ್ನು ಚರ್ಚಿಸುವದಕ್ಕೆ ಹಿಂಜರಿಯುತ್ತಾರೆ ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)