ಸಾಂಬಾರು ಪಾತ್ರೆಗೆ ಬಿದ್ದು ವಿದ್ಯಾರ್ಥಿಗೆ ಗಾಯ

7

ಸಾಂಬಾರು ಪಾತ್ರೆಗೆ ಬಿದ್ದು ವಿದ್ಯಾರ್ಥಿಗೆ ಗಾಯ

Published:
Updated:

ಚಿಕ್ಕೋಡಿ: ಶಾಲೆಯಲ್ಲಿ ಬಿಸಿಯೂಟಕ್ಕೆ ಸಿದ್ಧಪಡಿಸಿದ್ದ ಬಿಸಿ ಸಾಂಬಾರು ಇದ್ದ ಪಾತ್ರೆಗೆ ವಿದ್ಯಾರ್ಥಿಯೊಬ್ಬ ಬಿದ್ದು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಜಾಗನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.ಶಾಲೆಯ ಎರಡನೇ ತರಗತಿಯ ಸಂತೋಷ ಪರಪ್ಪ ಹನುಮನ್ನವರ (8) ಎಂಬ ವಿದ್ಯಾರ್ಥಿ ವಿಶ್ರಾಂತಿ ಸಮಯದಲ್ಲಿ ಪಾತ್ರೆಯ ಮುಚ್ಚಳದ ಮೇಲೆ ಕುಳಿತುಕೊಳ್ಳಲು ಯತ್ನಿಸಿದ. ಆಗ ಮುಚ್ಚಳ ಮಗುಚಿ ಪಾತ್ರೆಯೊಳಗೆ ಬ್ದ್ದಿದ. ಆತನ ಹೊಟ್ಟೆ ಮತ್ತು ತೊಡೆಯ ಭಾಗಗಳಿಗೆ ಗಾಯಗಳಾಗಿವೆ.ಘಟಪ್ರಭಾದ ಜೆ.ಜೆ.ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜೆ.ಅಂಚಿ ಶಾಲೆಗೆ ಭೇಟಿ ಕೊಟ್ಟು ಪರಿಶೀಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry