ಸಾಂಬಾರ್‌ಗೆ ಬಿದ್ದ ಬಾಲಕಿ ಸಾವು

7

ಸಾಂಬಾರ್‌ಗೆ ಬಿದ್ದ ಬಾಲಕಿ ಸಾವು

Published:
Updated:

ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲ್ಲೂಕಿನ ಡಿ.ಪಾಳ್ಯದ (ದಾರಿ­ನಾಯಕನ­­ಪಾಳ್ಯ) ಸರ್ಕಾರಿ ಶಾಲೆ­ಯಲ್ಲಿ ಬಿಸಿಯೂಟ ವಿತರಣೆ ಸಂದ­ರ್ಭದಲ್ಲಿ ಬಿಸಿ ಸಾಂಬಾರ್‌ ಪಾತ್ರೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ 1ನೇ ತರಗತಿ ಬಾಲಕಿ ಅನು (6) ಮಂಗಳವಾರ ಮಧ್ಯರಾತ್ರಿ ಬೆಂಗಳೂರಿನ ವಿಕ್ಟೋ­ರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದಳು.ಶೇ 80ರಷ್ಟು ಸುಟ್ಟಗಾಯಗಳಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾ­ಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾ­ಗದೇ ಆಕೆ ಕೊನೆಯುಸಿರೆಳೆದಳು.ಬೆಂಗಳೂರಿನಿಂದ ಡಿ.ಪಾಳ್ಯದ ಸರ್ಕಾರಿ ಶಾಲಾ ಆವರಣಕ್ಕೆ ಬುಧ­ವಾರ ಮಧ್ಯಾಹ್ನ ಆಂಬುಲೆನ್ಸ್‌ ಮೂಲಕ ಶವ ತರಲಾಯಿತು. ಪುತ್ರಿ­ಯನ್ನು ಕಳೆದುಕೊಂಡ ನೋವು ಸಹಿಸಲಾಗದೆ ಕೂಲಿಕಾರ್ಮಿಕರಾದ ಅಶ್ವತ್ಥಪ್ಪ ಮತ್ತು ವೆಂಕಟಲಕ್ಷ್ಮಿ ದಂಪತಿ ಹಾಗೂ ಸಂಬಂಧಿಕರು ರೋದಿಸುತ್ತಿದ್ದರು. ಅನುವಿನ ಹಿರಿಯ ಸಹೋದರ ಆನಂದ್‌ ಕೂಡ ಅಳುತ್ತಿದ್ದ. ಘಟನೆ ನಡೆದ ಶಾಲಾ ಆವರಣದಲ್ಲಿಯೇ ಆಕೆಯ ಶವವನ್ನು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಇರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry