ಸಾಂಬಾರ ಪದಾರ್ಥ ರಫ್ತು ಪ್ರಗತಿ

ಗುರುವಾರ , ಜೂಲೈ 18, 2019
24 °C

ಸಾಂಬಾರ ಪದಾರ್ಥ ರಫ್ತು ಪ್ರಗತಿ

Published:
Updated:

ನವದೆಹಲಿ (ಪಿಟಿಐ): ಪ್ರಸಕ್ತ ವರ್ಷದ ಏಪ್ರಿಲ್ ತಿಂಗಳಲ್ಲಿ ದೇಶದ ಸಾಂಬಾರ ಪದಾರ್ಥಗಳ ರಫ್ತು ಶೇ 37ರಷ್ಟು ಹೆಚ್ಚಿದ್ದು, ರೂ773.55 ಕೋಟಿಗೆ ಏರಿಕೆ ಕಂಡಿದೆ.ಏಲಕ್ಕಿ, ಕರಿಮೆಣಸು ಮತ್ತು ಜಾಯಿಕಾಯಿ ರಫ್ತು ಹೆಚ್ಚಿದೆ ಎಂದು ಕೇಂದ್ರ ಸಂಬಾರ ಮಂಡಳಿ ಹೇಳಿದೆ.

2011ರ ಇದೇ ಅವಧಿಯಲ್ಲಿ ದೇಶದಿಂದ ರೂ 564.18 ಕೋಟಿ ಮೌಲ್ಯದ ಮಸಾಲೆ ಪದಾರ್ಥಗಳು ರಫ್ತಾಗಿದ್ದವು.

 

ಪ್ರಸಕ್ತ ಏಪ್ರಿಲ್‌ನಲ್ಲಿ ರೂ58,685 ಟನ್‌ಗಳಷ್ಟು ಸಾಂಬಾರ ಪದಾರ್ಥ ಸಾಗರೋತ್ತರ ಮಾರುಕಟ್ಟೆಗೆ ರಫ್ತಾಗಿದೆ.ಏಪ್ರಿಲ್ ತಿಂಗಳಲ್ಲಿ ರೂ6.55 ಕೋಟಿ ಮೌಲ್ಯದಷ್ಟು, ಅಂದರೆ 100 ಟನ್‌ಗಳಷ್ಟು ಭಾರಿ ಪ್ರಮಾಣದಲ್ಲಿ ಏಲಕ್ಕಿ ರಫ್ತು ಮಾಡಲಾಗಿದೆ. ಕರಿಮೆಣಸಿನ ರಫ್ತು 30 ಸಾವಿರ ಟನ್‌ಗಳಷ್ಟಾಗಿದ್ದು, ರೂ230.70 ಕೋಟಿ ವಹಿವಾಟು ನಡೆದಿದೆ. 140 ಟನ್‌ಗಳಷ್ಟು ಜಾಯಿಕಾಯಿ ರಫ್ತಾಗಿದ್ದು, ರೂ10.5 ಕೋಟಿಗಳಷ್ಟು ವಹಿವಾಟು ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry