ಸಾಂಸ್ಕೃತಿಕ ಕಾರ್ಯಕ್ರಮಗಳು - ಶನಿವಾರ 13, ಅಕ್ಟೋಬರ್

7

ಸಾಂಸ್ಕೃತಿಕ ಕಾರ್ಯಕ್ರಮಗಳು - ಶನಿವಾರ 13, ಅಕ್ಟೋಬರ್

Published:
Updated:
ಸಾಂಸ್ಕೃತಿಕ ಕಾರ್ಯಕ್ರಮಗಳು - ಶನಿವಾರ 13, ಅಕ್ಟೋಬರ್

ಶನಿವಾರ 13, ಅಕ್ಟೋಬರ್

ಬಂಜಾರ ಚಿತ್ರಕಲಾ ಶಿಬಿರ

ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ: ರವೀಂದ್ರ ಕಲಾಕ್ಷೇತ್ರ, ಕನ್ನಡ ಭವನ ಆವರಣ, ಜೆ.ಸಿ.ರಸ್ತೆ. ಬೆಳಿಗ್ಗೆ 11ಕ್ಕೆ ಬಂಜಾರ ಚಿತ್ರಕಲಾ ಶಿಬಿರಕ್ಕೆ ಚಾಲನೆ. 11.30ಕ್ಕೆ ಬಂಜಾರ ಮಕ್ಕಳ ಮಾರಾಟ ಅರಿವಿನ ಬೀದಿ ನಾಟಕ `ಹೆಜ್ಜೆ ಗೆಜ್ಜೆ~ ನಾಟಕ ಪ್ರದರ್ಶನ ಹಾಗೂ ರಾಜ್ಯ ಮಟ್ಟದ ಪ್ರಥಮ ಬಂಜಾರ ಸಾಹಿತ್ಯ, ಸಾಂಸ್ಕೃತಿಕ ಸಮಾವೇಶ.ಸಾನಿಧ್ಯ- ಸಂಗನಬಸವ ಸೇವಾಲಾಲ್ ಸ್ವಾಮೀಜಿ. ಉದ್ಘಾಟನೆ- ಸಾಹಿತಿ ಚಂದ್ರಶೇಖರ ಪಾಟೀಲ. 12.30ಕ್ಕೆ ವಿಚಾರ ಸಂಕಿರಣ. ಅಧ್ಯಕ್ಷತೆ- ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್. 1.30ಕ್ಕೆ ಕವಿಗೋಷ್ಠಿ. ಅಧ್ಯಕ್ಷತೆ- ಗುಲ್ಬರ್ಗಾ ವಿವಿ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಡಾ.ಪಿ.ಕೆ. ಖಂಡೋಬ. ಇದೇ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ, ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಸಂಜೆ 6.30ಕ್ಕೆ ಗಾಯಕಿ ಭಾನುಮತಿ ವಿಶ್ವನಾಥ್ ಹಾಗೂ ತಂಡದಿಂದ ಗಾಯನ.

 

ತಿಂಗಳ ಬೆಳಕು

ಭಾರತೀಯ ಸ್ಟೇಟ್ ಬ್ಯಾಂಕ್ ಕನ್ನಡ ಸಂಘ: ಸಂಘದ ಸಭಾಂಗಣ, ಭಾರತೀಯ ಸ್ಟೇಟ್ ಬ್ಯಾಂಕ್ ಸ್ಥಳೀಯ ಪ್ರಧಾನ ಕಚೇರಿ, ಸೇಂಟ್ ಮಾರ್ಕ್ಸ್ ರಸ್ತೆ. ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರಿಗೆ ಸನ್ಮಾನ ಹಾಗೂ ಅವರಿಂದ ಉಪನ್ಯಾಸ, ಸಂವಾದ. ಮಧ್ಯಾಹ್ನ 2.45.

ಬಾರ್ಡರ್ಸ್ ಅಂಡ್ ಬೌಂಡ್ರೀಸ್

ಗ್ಯಾಲರಿ ಸುಮುಖ ಬೆಂಗಳೂರು: 24/10, ಬಿಟಿಎಸ್ ಡಿಪೊ ಹತ್ತಿರ, ವಿಲ್ಸನ್ ಗಾರ್ಡನ್. `ಬಾರ್ಡರ್ಸ್ ಅಂಡ್ ಬೌಂಡ್ರೀಸ್~. ಖ್ಯಾತ ಕಲಾವಿದ ಶ್ಯಾಮ್ ಸುಂದರ್ ಅವರ ಅಪರೂಪದ ಕಲಾಕೃತಿಗಳ ಪ್ರದರ್ಶನದ ಉದ್ಘಾಟನೆ. ಮಧ್ಯಾಹ್ನ 3.30.

ವೀರಶೈವ ಸಮಾಜ ಅರಕೆರೆ: ನಾದಬ್ರಹ್ಮ ಪ್ರಾರ್ಥನಾ ಮಂದಿರ, ನಂ.27/28, 3ನೇ ಮಹಡಿ, 1ನೇ ಕ್ರಾಸ್, ವೇಣುಗೋಪಾಲ ರೆಡ್ಡಿ ಲೇಔಟ್, ಬನ್ನೇರುಘಟ್ಟ ರಸ್ತೆ, ಅರಕೆರೆ. ಶರಣಸಂಜೆ ಕಾರ್ಯಕ್ರಮದಲ್ಲಿ ಲೇಖಕಿ ಇಂದಿರಾ ಶರಣ್ ಜಮ್ಮಲದಿನ್ನಿ ಹಾಗೂ ಡಾ. ಪ್ರತಿಮಾ ಕೆ.ಸಿ. ಅವರಿಂದ ಉಪನ್ಯಾಸ. ಅತಿಥಿ- ಬೊಮ್ಮನಹಳ್ಳಿ ನಗರಸಭಾ ಮಾಜಿ ಸದಸ್ಯೆ ಕಲ್ಪನಾ ಪುರುಷೋತ್ತಮ್ ಹಾಗೂ ಎಂ. ವೀರಭದ್ರಪ್ಪ ಮತ್ತು ಸಂಗಡಿಗರಿಂದ ಭಜನಾ ಕಾರ್ಯಕ್ರಮ. ಸಂಜೆ 6.ಕರ್ನಾಟಕ ಸ್ಟೇಟ್ ಪೊಲೀಸ್: ಚಿನ್ನಸ್ವಾಮಿ ಸ್ಟೇಡಿಯಂ. ಕರ್ನಾಟಕ ಪೊಲೀಸರಿಗೆ ಅಭಿನಂದನಾ ಕಾರ್ಯಕ್ರಮ. ಕನ್ನಡ ಚಲನಚಿತ್ರ ತಾರೆಯರಿಂದ ನೃತ್ಯ ಹಾಗೂ ಡಾ. ಸಂಜಯ್ ಅವರಿಂದ ಸಾಂಸ್ಕೃತಿಕ ನೃತ್ಯ, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರಿಂದ ರಸಮಂಜರಿ ಕಾರ್ಯಕ್ರಮ.ಉದ್ಘಾಟನೆ- ಪೊಲೀಸ್ ಮಹಾನಿರ್ದೇಶಕ ಎಲ್. ಪಚಾವೊ ಹಾಗೂ ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ. ಅಧ್ಯಕ್ಷತೆ- ಉಪಮುಖ್ಯಮಂತ್ರಿ ಆರ್. ಅಶೋಕ್. ಅತಿಥಿಗಳು- ಸಾ.ರಾ. ಗೋವಿಂದು, ನಟ ಅಂಬರೀಷ್, ರಾಘವೇಂದ್ರ ರಾಜಕುಮಾರ್, ವಿ. ರವಿಚಂದ್ರನ್, ಸುದೀಪ್, ರಾಕ್‌ಲೈನ್ ವೆಂಕಟೇಶ್, ತಾರಾ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮುಂತಾದವರು. ಸಂಜೆ 6.ದಿ ನ್ಯಾಷನಲ್ ಕಾಲೇಜು: ಡಾ.ಎಚ್.ಎನ್. ಕಲಾಕ್ಷೇತ್ರ. ಡಾ.ಪಿ. ಸದಾನಂದ ಮಯ್ಯ ಕಟ್ಟಡದ ಎಂಟು ನೂತನ ವಿಜ್ಞಾನ ಪ್ರಯೋಗಾಲಯಗಳ ಉದ್ಘಾಟನೆ- ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರೊ. ಜೂಲ್ಸ್ ಎ. ಹಾಫ್‌ಮನ್. ಅಧ್ಯಕ್ಷತೆ- ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನಿರ್ದೇಶಕ ಡಾ.ಪಿ. ಬಲರಾಮ್. ಅತಿಥಿ- ದಿ ಎನ್‌ಇಎಸ್ ಆಫ್ ಕರ್ನಾಟಕ ಅಧ್ಯಕ್ಷ ಡಾ.ಎ.ಎಚ್. ರಾಮ ರಾವ್, ಡಾ.ಪಿ. ಸದಾನಂದ ಮಯ್ಯ ಹಾಗೂ ಸುನಂದಾ ಮಯ್ಯ, ಶಾಸಕ ಬಿ.ಎನ್. ವಿಜಯ್ ಕುಮಾರ್, ಡಾ. ಗೀತಾ ರಾಮಾನುಜಂ. ಬೆಳಿಗ್ಗೆ 9.30.ಯಲಹಂಕ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು: ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಆವರಣ, ಯಲಹಂಕ ಉಪನಗರ.  ಬೆಳಿಗ್ಗೆ 11ಕ್ಕೆ ಯುವ ಕವಿಗಳ ಸಮ್ಮೇಳನ ಹಾಗೂ ಸಂಜೆ 6ಕ್ಕೆ ಘಟಕದ ಉದ್ಘಾಟನಾ ಸಮಾರಂಭ.

ಯೂರೊ ಸ್ಕೂಲ್: ಫಿನಿಕ್ಸ್ ಮಾಲ್. ತ್ಯಾಜ್ಯ ನಿರ್ವಹಣೆ ಕುರಿತಾದ ನೂತನ ಕಾರ್ಯಕ್ರಮ `ಸಿಟಿ ಲೈಟ್~. ಸಂಜೆ 6.ದಿ ಛೋಪ್ರಾಸ್: ತಾಜ್ ವಿವಾಂತ. ಎಂ.ಜಿ.ರಸ್ತೆ. `ಗ್ಲೋಬಲ್ ಎಜುಕೇಶನ್ ಇಂಟರಾಕ್ಟ್~ ಬೆಳಿಗ್ಗೆ 11.ಬಿ.ಎಸ್.ಆರ್. ಕಾಂಗ್ರೆಸ್ ಪಾರ್ಟಿ: ರಾಮಮಂದಿರ ಮೈದಾನ, ರಾಜಾಜಿ ನಗರ. `ಸ್ವಾಭಿಮಾನ ಯುವಸಂದೇಶ ಅಭಿಯಾನ~ಕ್ಕೆ ಚಾಲನೆ. ಉದ್ಘಾಟನೆ ಹಾಗೂ ಸ್ವಾಭಿಮಾನಿ ಯುವಸಂದೇಶ ಮುಖವಾಣಿ ಬಿಡುಗಡೆ- ಶಾಸಕ ಬಿ. ಶ್ರೀರಾಮುಲು. ಅತಿಥಿ- ಸಂಸದ ಸಣ್ಣ ಫಕೀರಪ್ಪ, ಜೆ. ಶಾಂತಾ, ಶಾಸಕ ಸೋಮಶೇಖರ ರೆಡ್ಡಿ ಹಾಗೂ ಸುರೇಶ್ ಬಾಬು. ಸಂಜೆ 6.ಪೀಸ್ ಥ್ರೂ ಸರ್ವಿಸ್: ಕಾಸಿಯಾ ಸಭಾಂಗಣ, ಮಾಗಡಿ ರಸ್ತೆ, ವಿಜಯನಗರ. `ರಿನಿವೇಬಲ್ ಎನರ್ಜಿ ಅಪಾರ್ಚುನಿಟಿ ಫಾರ್ ಎಂಟರ್‌ಪ್ರಿನರ್‌ಶಿಪ್~ ಕುರಿತು ವಿಚಾರ ಸಂಕಿರಣ. ಉದ್ಘಾಟನೆ- ರೋಟರಿ ಇಂಟರ್‌ನ್ಯಾಷನಲ್‌ನ ಡಿಸ್ಟ್ರಿಕ್ಟ್ ಗವರ್ನರ್ ಬದ್ರಿ ಪ್ರಸಾದ್ ಆರ್. ಅತಿಥಿ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ಜೈರಾಜ್. ಸನ್ ಮೋಕ್ಷಾ ಅಂಡ್ ಕ್ಲೀನ್ ಟೆಕ್ ಸ್ಪೆಷಲ್ ಇಂಟರೆಸ್ಟ್ ಗ್ರೂಪ್ ಮುಖ್ಯಸ್ಥ ಡಾ. ಅಶೋಕ್ ದಾಸ್ ಉಪನ್ಯಾಸ. ಬೆಳಿಗ್ಗೆ 10. ಕನ್ನಡ ಕಣ್ಮಣಿ ಪ್ರಕಾಶನ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಎ.ಆರ್. ಗೋಪಾಲ ನಾಯಕ್ ಅವರ `ಅಜರಾಮರ~ ಕವನ ಸಂಕಲನ ಬಿಡುಗಡೆ ಸಮಾರಂಭ. ಉದ್ಘಾಟನೆ- ಮಾಜಿ ಸಚಿವ ಡಿ.ಕೆ. ಶಿವಕುಮಾರ್. ಅಧ್ಯಕ್ಷತೆ- ರಂಗ ತಜ್ಞ ಡಾ.ಎ.ಆರ್. ಗೋವಿಂದಸ್ವಾಮಿ. ಕೃತಿ ಲೋಕಾರ್ಪಣೆ- ಕವಿ ಡಾ. ದೊಡ್ಡರಂಗೇಗೌಡ. ಅತಿಥಿ- ಪಶು ಸಂಗೋಪನೆ ಹಾಗೂ ಗ್ರಂಥಾಲಯ ಸಚಿವ ರೇವುನಾಯಕ ಬೆಳಮಗಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ಕರ್ನಾಟಕ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಎಲ್.ಎನ್. ಮುಕುಂದರಾಜು, ರಾಜ್‌ಕುಮಾರ್ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಗೋವಿಂದಹಳ್ಳಿ ದೇವೇಗೌಡ. ಸಂಜೆ 5.30.ಆಟಾ ಗಲಾಟಾ: 2ನೇ ಮುಖ್ಯರಸ್ತೆ, 1ನೇ ಬ್ಲಾಕ್, ಕೋರಮಂಗಲ. ಮಕ್ಕಳಿಗಾಗಿ ಕಥಾಲಯದ ಸಂಸ್ಥಾಪಕಿ ಗೀತಾ ರಾಮಾನುಜಂ ಅವರಿಂದ ದೇವದತ್ ಪಟ್ನಾಯಕ್ ಅವರ ರಚನೆಯ `ತುಲಿಕಾಸ್ ಅವರ್ ಮಿಥ್ಸ್~ ಕಥಾವಾಚನ. ಸಂಜೆ 4. ಪ್ರವೇಶ ಉಚಿತ. ಸಂಪರ್ಕಕ್ಕೆ- 96325 10126.ಎಂಇಎಸ್ ಕಲಾವೇದಿ: ನ್ಯೂ ಕಾನ್ಫರೆನ್ಸ್ ಹಾಲ್, ಎಂ.ಇ.ಎಸ್.ಕಾಲೇಜು, ವಿದ್ಯಾಸಾಗರ  ಪ್ರೊ. ಎಂ.ಪಿ.ಎಲ್.ಶಾಸ್ತ್ರಿ ರಸ್ತೆ, 15ನೇ ಕ್ರಾಸ್, ಮಲ್ಲೇಶ್ವರಂ. ಡಾ. ಆರ್.ರಂಗಾಚಾರ್ ದತ್ತಿ ಕಾರ್ಯಕ್ರಮದ ಅಂಗವಾಗಿ ಭಾರತೀಯ ಶಾಸ್ತ್ರೀಯ ಸಂಗೀತ. ವಿದ್ವಾನ್ ಆರ್.ಕೆ.ಪದ್ಮನಾಭ ಅವರಿಂದ ಗಾಯನ. ಪಕ್ಕವಾದ್ಯದಲ್ಲಿ ಸಿ.ಎನ್.ಚಂದ್ರಶೇಖರ್ (ವಯೊಲಿನ್), ಎ.ರೇಣುಕಾ ಪ್ರಸಾದ್ (ಮೃದಂಗ), ವಿಶ್ವನಾಥ್ ನಾಕೋಡ (ತಬಲಾ) . ಸಂಜೆ 6.30.ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಟೂನಿಸ್ಟ್ಸ್: ನಂ.1, ಮಿಡ್‌ಫೋರ್ಡ್ ಹೌಸ್, ಮಿಡ್‌ಫೋರ್ಡ್ ಗಾರ್ಡನ್, ಟ್ರಿನಿಟಿ ವೃತ್ತ, ಎಂ.ಜಿ.ರಸ್ತೆ, ಕಿಡ್ಸ್‌ಕೆಂಪ್ ಹತ್ತಿರ. ಖ್ಯಾತ ವ್ಯಂಗ್ಯಚಿತ್ರಕಾರ ಡಾ. ಸತೀಶ್ ಶೃಂಗೇರಿ ಸ್ಮರಣಾರ್ಥ ಸಭೆ. ಉಪಸ್ಥಿತಿ: `ಸಂಯುಕ್ತ ಕರ್ನಾಟಕ~ ಪತ್ರಿಕೆ ಸಂಪಾದಕ ಹುಣಸವಾಡಿ ರಾಜನ್, ಆಯುರ್ವೇದ ತಜ್ಞ ಡಾ. ಗಿರಿಧರ್ ಕಜೆ. ಬೆಳಿಗ್ಗೆ 11.ಬಿಗ್ ರೀಸರ್ಚ್: ಹೋಟೆಲ್ ಲಲಿತ್ ಅಶೋಕ್, ಕುಮಾರ ಕೃಪಾ ಹೈಗ್ರೌಂಡ್ಸ್. ಸೌತ್ ಇಂಡಿಯಾ ಬಿಸಿನೆಸ್ ಅಂಡ್ ಸರ್ವಿಸ್ ಎಕ್ಸಲೆನ್ಸ್ ಅವಾರ್ಡ್ಸ್. ಉಪಸ್ಥಿತಿ: ನ್ಯಾಷನಲ್ ಕ್ರಿಕೆಟ್ ಟೀಮ್ ಆಯ್ಕೆ ಸಮಿತಿ ಅಧ್ಯಕ್ಷ ಕ್ರಿಸ್ ಶ್ರೀಕಾಂತ್. ಬೆಳಿಗ್ಗೆ 11.ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್: ಖಿಂಚ ಸಭಾಂಗಣ, ಭಾರತೀಯ ವಿದ್ಯಾ ಭವನ, ರೇಸ್ ಕೋರ್ಸ್ ರಸ್ತೆ. ಕಲಾವಿದೆ ಶುಭಾ ಧನಂಜಯ್ ಅವರಿಂದ ಕಥಕ್ ಹಾಗೂ ಭರತನಾಟ್ಯ ಪ್ರದರ್ಶನ. ಸಂಜೆ 6.30.ವೀರಶೈವ ವಿಚಾರ ವೇದಿಕೆ: ಬಸವ ಸಭಾಂಗಣ, ಶ್ರೀ ಬಸವೇಶ್ವರ ವಿದ್ಯಾಸಂಸ್ಥೆ, ನಿಜಲಿಂಗಪ್ಪ ಕಾಲೇಜು ಎದುರು, 2ನೇ ಬ್ಲಾಕ್, ರಾಜಾಜಿನಗರ. 134ನೇ ಮಾಸಿಕ ವಿಚಾರ ಮಾಲೆಯ ವಿಶೇಷ ಕಾರ್ಯಕ್ರಮ `ಶರನ್ನವರಾತ್ರಿ~. ಸಾನಿಧ್ಯ: ಅಟವಿ ಜಂಗಮ ಕ್ಷೇತ್ರದ ಅಟವಿ ಶಿವಲಿಂಗ ಸ್ವಾಮೀಜಿ, ಉಪನ್ಯಾಸ: ಪ್ರವಚನಕಾರ ಅನ್ನದಾನ ಸ್ವಾಮೀಜಿ. ಸಂಜೆ 6.ರಂಗತಂತ್ರ: ಎಡಿಎ ರಂಗಮಂದಿರ, ಜೆಸಿ ರಸ್ತೆ. ಹಾಸ್ಯನಾಟಕೋತ್ಸವದಲ್ಲಿ ಮಾಧವ ರಾವ್ ಅವರ `ಬಂಡ್ವಾಳ್ವಿಲ್ಲದ ಬಡಾಯಿ~ ನಾಟಕ ಪ್ರದರ್ಶನ. ಸಂಜೆ 7.30. ಟಿಕೆಟ್ ದರ 70 ರೂಪಾಯಿ. ಸಂಪರ್ಕಕ್ಕೆ 94497 95282.ಗಾಂಧೀ ಸಾಹಿತ್ಯ ಸಂಘ: 8ನೇ ಕ್ರಾಸ್, ಮಲ್ಲೇಶ್ವರ. `ಕೃಷ್ಣಶರ್ಮರ ಸಾಹಿತ್ಯ ರಚನೆಗಳು~ ವಿಷಯದ ಕುರಿತು ಪ್ರೊ.ಎಚ್.ವಿ. ಶ್ರೀನಿವಾಸ ಶರ್ಮ ಅವರಿಂದ ಉಪನ್ಯಾಸ. ಸಂಜೆ 6.30.ನಾಗರಿಕರ ವೇದಿಕೆ: ಶ್ರೀ ಗಣಪತಿ ವಿದ್ಯಾಮಂದಿರ, ನಂ.6, ವೆಂಕಟಪ್ಪ ರಸ್ತೆ, ಚಿಕ್ಕಮಾವಳ್ಳಿ. `ಸ್ವಾತಂತ್ರ್ಯ ಚಳವಳಿಯಲ್ಲಿ ಆನಿಬೆಸೆಂಟ್‌ರ ಪಾತ್ರ~ ವಿಷಯದ ಕುರಿತು ಟಿ.ಕೆ. ತಿಮ್ಮರಾಜ ಸೆಟ್ಟಿ ಅವರಿಂದ ಉಪನ್ಯಾಸ. ಸಂಜೆ 4.ಕಲಾಪ್ರೇಮಿ ಫೌಂಡೇಶನ್: ಸೇವಾಸದನ, ಮಲ್ಲೇಶ್ವರ. ಪ್ರಾಚೀನ ಭಾರತೀಯ ಸಾಹಿತ್ಯ ಪರಂಪರೆಯ ವಿಶೇಷ ಕಾರ್ಯಕ್ರಮ `ಪ್ರತಿಮಾಲೆ~. ನಡೆಸಿಕೊಡುವವರು- ಶತಾವಧಾನಿ ಆರ್. ಗಣೇಶ್, ಕೆ.ಎಸ್. ಕಣ್ಣನ್, ಪ್ರೊ.ಎಸ್. ರಂಗನಾಥ್, ಆರ್. ಶಂಕರ್, ಸುಧೀರ್ ಕೃಷ್ಣಮೂರ್ತಿ, ಎನ್.ಎ. ರಾಮಚಂದ್ರ. ಸಂಜೆ 6.30.ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ: ಸುಚಿತ್ರ ಕಿ.ರಂ. ನುಡಿಮನೆ, ನಂ. 36, ಬಿ.ವಿ. ಕಾರಂತ ರಸ್ತೆ, ಬನಶಂಕರಿ 2ನೇ ಹಂತ. ಸ.ರಘುನಾಥ್ ಅವರಿಂದ ಕತೆ-ಕವನ ವಾಚಿಕೆ ಹಾಗೂ ಅನುಭವ ಕಥನ. ಸಂಜೆ 6.ಆಂಜನೇಯ ಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ: ದೀಪಾಂಜಲಿನಗರದ ರಂಗಮಂದಿರ, ಮೈಸೂರು ರಸ್ತೆ. `ಪಾಂಡವರ ವಿಜಯ~ ನಾಟಕ ಪ್ರದರ್ಶನ. ಉದ್ಘಾಟನೆ- ಸಮಾಜ ಸೇವಕರಾದ ವೀಣಾ. ಅತಿಥಿ- ಬಿಬಿಎಂಪಿ ಸದಸ್ಯ ವಿ.ಕೃಷ್ಣ. ಅಧ್ಯಕ್ಷತೆ- ಬಿಬಿಎಂಪಿ ಸದಸ್ಯರಾದ ಮಾಲತಿ ಎನ್. ವೆಂಕಟಸ್ವಾಮಿ. ರಾತ್ರಿ 8.30. ವಿ. ಹರೀಶ್ ಕುಮಾರ್ (ಹಾರ್ಮೋನಿಯಂ), ಎಂ. ಮುತ್ತುರಾಜು (ತಬಲಾ), ತರಂಗಿಣಿ (ಎಂ.ಮುನಿರಾಜು), ಶೋಕೇಶ್ ಕುಮಾರ್(ಕ್ಲಾರಿಯೋನೆಟ್), ವೆಂಕಟೇಶ್ ಮೂರ್ತಿ (ತಾಳವಾದ್ಯ).ಸಾಯಿ ಗೀತಾಂಜಲಿ:
ಸತ್ಯಸಾಯಿ ಸೇವಾಕ್ಷೇತ್ರ, 21ನೇ ಮುಖ್ಯರಸ್ತೆ, 7ನೇ ಕ್ರಾಸ್, ಜೆ.ಪಿ. ನಗರ. `ಭಜನೆ ಸಮಾವೇಶ~. ಬೆಳಿಗ್ಗೆ 11.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry