ಭಾನುವಾರ, ಮೇ 16, 2021
24 °C

ಸಾಂಸ್ಕೃತಿಕ ಕಾರ್ಯಕ್ರಮದಿಂದ ಮಕ್ಕಳ ಸ್ಥೈರ್ಯ ವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಸಾಂಸ್ಕೃತಿಕ ಕಾರ್ಯ ಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕೆಂದು ಪತ್ರಕರ್ತೆ  ತಾರಿಕಾ ಬೇಲಕರ ಹೇಳಿದರು.ಸ್ವಕುಳ ಸಾಳಿ ಸಮಾಜದ ಶ್ರಿಜೀವೇಶ್ವರ ಯುವಕ ಮಂಡಳ ಹಾಗೂ ಶ್ರಿ ಗಜಾನನ ಉತ್ಸವ ಸಮಿತಿ ಆಶ್ರಯದಲ್ಲಿ ನವನಗರದ ಶ್ರಿ ಜೀವೇಶ್ವರ ಮಂದಿರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.   ಸಾಂಸ್ಕೃತಿಕ ಕಾರ್ಯಕ್ರಮದಿಂದ ಮಕ್ಕಳಲ್ಲಿ ಮನೋಧೈರ್ಯ ವೃದ್ಧಿಯಾಗುವ ಜತೆಗೆ ಅವರ ಭವಿಷ್ಯಕ್ಕೆ ನೆರವಾಗುತ್ತದೆ ಎಂದರು.ಉಷಾ ಪಾಟೀಲ ಮಾತನಾಡಿ, ಸಾಂಸ್ಕೃತಿಕ  ಕಾರ್ಯಕ್ರಮಗಳು ಸಮಾಜ ಕ್ಕಷ್ಟೇ ಸೀಮಿತವಾಗದೇ ಬೇರೆ ಸಮಾಜದವರೂ ಭಾಗವಹಿಸಲು ಮುಕ್ತ ಅವಕಾಶ ಕೊಟ್ಟಿರುವ ಕಾರ್ಯ ಶ್ಲಾಘನೀಯ ಎಂದರು.

ಸಮಾಜದ ಗೌರವಾಧ್ಯಕ್ಷ ವಿಠಲರಾವ್ ಕಾಂಬಳೆ, ಕಾರ್ಯಾಧ್ಯಕ್ಷ ಶಿವಾನಂದ ಏಕಬೋಠೆ, ಮಹಿಳಾ ಮಂಡಳ ಅಧ್ಯಕ್ಷೆ ಮಂಜುಳಾ ಸಫಾರೆ ಮತ್ತಿತರರು ಉಪಸ್ಥಿತರಿದ್ದರು.`ಅಧ್ಯಯನ ಶೀಲರಾಗಿ~


 ಶಿಕ್ಷಕರು ಸದಾ ಅಧ್ಯಯನ ಶೀಲರಾಗಿರಬೇಕು ಎಂದು ತುಳಸಿಗೇರಿ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಕಾಶ ಕೋಟಿ ಹೇಳಿದರು. ತುಳಸಿಗೇರಿಯ ಕ್ಲಸ್ಟರಿನ ಮಾಸಿಕ ನಲಿ-ಕಲಿ ಸಮಾಲೋಚನೆ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ನಲಿ-ಕಲಿ ಸಮಾಲೋಚನೆ ಸಭೆಯಿಂದ ಶಿಕ್ಷಕರಲ್ಲಿ ಪುನಶ್ಚೇತನ, ಟಾನಿಕ್ ನೀಡಿದಂತಾಗುವದು ಅಲ್ಲದೆ ನೂತನ ಬಗೆಯ ಬೋಧನಾ ಚಟುವಟಿಕೆಗಳು ಬಳಸಲು ಪರಸ್ಪರ ವಿಚಾರಧಾರೆಗಳ ವಿನಿಯಮದಿಂದ ಹೊಸ ಬಗೆಯ ಕಲಿಕಾ ಹುಮ್ಮಸ್ಸು ಬರಲಿದೆ ಎಂದರು.ಕುವೆಂಪು ಮಾದರಿ ಶಾಲೆಯ ಮುಖ್ಯ ಗುರು ಡಿ.ಎ.ಸಣ್ಣಪ್ಪನವರ,  ಶಿಕ್ಷಕ  ಕಮಕೇರಿ ಸೇರಿದಂತೆ ವಿವಿಧ ಶಾಲೆಯ 22 ಶಿಕ್ಷಕರು ಭಾಗವಹಿಸಿದ್ದರು.ಪವಾಡ ಬಯಲು

ಬಾಗಲಕೋಟೆ: 
ಸಮಾಜವನ್ನು ಮೋಸ ಕಪಟ ವಂಚನೆಯಿಂದ ರಕ್ಷಿಸುವ ಗುರುತರ ಜವಾಬ್ದಾರಿ ಯುವಕರ ಮೇಲಿದೆ ಎಂದು ರಾಯಚೂರಿನ ಎಲ್.ವಿ.ಡಿ. ಕಾಲೇಜಿನ ಪ್ರಾಧ್ಯಾಪಕ ಪಿ.ಎಚ್.ನರಹಟ್ಟಿ  ಹೇಳಿದರು.

  ನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯ ಎಸ್.ಬಿ.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಇಕೋ ಕ್ಲಬ್ ಸಹಯೋಗದೊಂದಿಗೆ  ಕಾಳಿದಾಸ ಕಲ್ಯಾಣ ಮಂಟಪದಲ್ಲಿ ನಡೆದ ಪವಾಡ ಬಯಲು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಸತ್ಯದ ಮಧ್ಯವರ್ತಿಗಳಾಗಿ ಸಮಾಜದಲ್ಲಿ ಅಡಗಿದ ಮೂಢನಂಬಿಕೆ ಹೋಗಲಾಡಿಸಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗೌರವ ಕಾರ್ಯದರ್ಶಿ ಎಂ.ಕೆ.ರಂಗಣ್ಣವರ, ನಿರ್ದೇಶಕ ವೈ.ಎಚ್.ದಡ್ಡಿ, ಸದಸ್ಯರಾದ ಬೋಕೆ, ಮುಖ್ಯೋಪಾಧ್ಯಾಯ ವೈ.ಕೆ.ಗುಡೂರ, ಪ್ರಾಂಶುಪಾಲ ಆರ್.ಬಿ.ಪೂಜಾರ, ಟಿ.ಡಿ.ಬಜಂತ್ರಿ, ಬಿ.ಎಚ್.ಪೂಜಾರ, ಎಚ್.ಪಿ.ಹಚ್ಚೋಳ್ಳಿ  ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.