ಭಾನುವಾರ, ನವೆಂಬರ್ 17, 2019
29 °C

ಸಾಂಸ್ಕೃತಿಕ ಚಿಕಿತ್ಸಕ ಹಳೆಮನೆ: ಹೊಂಬಯ್ಯ

Published:
Updated:

ಮೈಸೂರು: `ಪ್ರೊ.ಲಿಂಗದೇವರು ಹಳೆಮನೆಯವರು ತಮ್ಮ ಪ್ರಖರ ಚಿಂತನೆಗಳಿಂದ ಮಾನವತೆಯಿಂದ ಸಾಂಸ್ಕೃತಿಕ ಚಿಕಿತ್ಸಕರಾಗಿದ್ದರು~ ಎಂದು  ದಲಿತ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಹೊನ್ನಲಗೆರೆ ಹೊಂಬಯ್ಯ ಅಭಿಪ್ರಾಯ ಪಟ್ಟರು.ಜಿಲ್ಲಾ ದಲಿತ ಸಾಹಿತ್ಯ ಪರಷತ್ ವತಿಯಿಂದ ಮಾನಸಂಗಂಗೋತ್ರಿಯ ಬುದ್ಧಬೆಳದಿಂಗಳು ಅರಳಿಕಟ್ಟೆಯಲ್ಲಿ ಗುರುವಾರ ಆಯೋಜಿಸಿದ್ದ `ಸಾಂಸ್ಕೃತಿಕ ಚಿಕಿತ್ಸಕ ಹಳೆಮನೆಗೆ ಬುದ್ಧ ವಂದನೆ~ ಕಾರ್ಯಕ್ರಮದಲ್ಲಿ ಮಾತನಾಡಿದರು.ಹಳೆಮನೆ ಸಮಾಜವಾದಿ ನೆಲೆಯಲ್ಲಿ ಸಮ ಸಮಾಜವನ್ನು ಕಟ್ಟುವ ಹೋರಾಟ ಗಳೊಂದಿಗೆ ತಮ್ಮನ್ನು ತೊಡಗಿಸಿ ಕೊಂಡಿದ್ದವರು. ವಿವಿಧ ಭಾಷೆಗಳನ್ನು ಬಲ್ಲವರಾಗಿದ್ದ ಹಳೆಮನೆ ಕನ್ನಡ ಸಾಹಿತ್ಯ ವಿವಿಧ ಪ್ರಕಾರಗಳನ್ನು ವಿವಿಧ ನೆಲೆಯಲ್ಲಿ ಆಳವಾಗಿ ಅರ್ಥಮಾಡಿಕೊಳ್ಳುವ ದಿಕ್ಕು ತೋರಿದವರು. ಸಮುದಾಯ ಸಂಘಟನೆ ಯೊಂದಿಗೆ ಬೆಳೆದ ಮಹನೀಯರು ದಲಿತ ಚಳವಳಿ- ಸಾಹಿತ್ಯದ ಬಗೆಗೆ ತುಂಬಾ ಕಾಳಜಿ ಯನ್ನು ಇಟ್ಟು ಕೊಂಡಿದ್ದರು ಎಂದು ತಿಳಿಸಿದರು.ರಂಗಭೂಮಿಯ ಎಲ್ಲೆಗಳನ್ನು ವಿಸ್ತರಿಸಿದವರು ಹಳೆಮನೆ. ಇಂಥವರ ಅಕಾಲಿಕ ಅಗಲಿಕೆ ಈ ನಾಡು ಹಾಗೂ ನಮ್ಮಂಥ ಯುವಕರು ತುಂಬಾ ನೋವು, ನಷ್ಟವನ್ನು ಅನುಭವಿಸು ವಂತಾಗಿದೆ. ಹಳೆಮನೆ ಅವರು ಭೌತಿಕವಾಗಿ ನಮ್ಮಿಂದ ದೂರವಾದರೂ ಬೌದ್ಧಿಕತೆ, ಹೋರಾಟಗಳಿಂದ ನಮ್ಮ ನಡುವೆ ಎಂದೂ ಮಾರ್ಗ ದರ್ಶಕರಾಗಿ  ಜೀವಂತ ವಾಗಿದ್ದಾರೆ ಎಂದು ಸ್ಮರಿಸಿ ಕೊಂಡರು.ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣ ಕೇಂದ್ರ ಪ್ರಾಧ್ಯಾಪಕ ಡಾ.ಎಸ್.ನರೇಂದ್ರ ಕುಮಾರ್, ಸಂಶೋಧಕರಾದ ಎಚ್.ಎನ್.ಪುಷ್ಪಲತಾ, ಬಸವರಾಜ ನಾಗವ್ವನವರ, ಬುದ್ಧಭೂಮಿ ಬಳಗದ ಸಂಚಾಲಕರಾದ ಮಲ್ಲಿಕೇಶ್, ಆದೆಪ್ಪ, ನಾ.ನವೀನ್ ಕುಮಾರ ಮಂಗಸಂದ್ರ, ಚಂದ್ರಕಿರಣ್ ಇತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)