ಸಾಂಸ್ಕೃತಿಕ ನಗರಿ ಸೂರು ದುಬಾರಿ

7

ಸಾಂಸ್ಕೃತಿಕ ನಗರಿ ಸೂರು ದುಬಾರಿ

Published:
Updated:
ಸಾಂಸ್ಕೃತಿಕ ನಗರಿ ಸೂರು ದುಬಾರಿ

ಬೆಳೆದಿದೆ ನೋಡ ಬೆಂಗಳೂರು ನಗರ.. ಎಂಬುದು 1970ರ ದಶಕದ ಚಲನಚಿತ್ರ ಗೀತೆ. ಅಂದಿನ ಕಾಲಕ್ಕೆ ಬೆಂಗಳೂರು ಬೆಳೆದ ರೀತಿಯನ್ನು ಆ ಹಾಡಿನಲ್ಲಿ ಕಟ್ಟಿಕೊಡಲಾಗಿತ್ತು. ಈಗ ಬೆಂಗಳೂರು ಮಾತ್ರವಲ್ಲ ಎರಡನೇ ಹಂತದ ನಗರಗಳಾದ (ಟೈರ್-2 ಸಿಟೀಸ್) ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಕೂಡ ಬೆರಗು ಮೂಡಿಸುವಷ್ಟು ಬೆಳೆದಿವೆ, ಬೆಳೆಯುತ್ತಲೇ ಇವೆ.ಸಾಂಸ್ಕೃತಿಕ ನಗರಿ, ಅರಮನೆಗಳ ನಗರಿ ಎಂಬ ಅಗ್ಗಳಿಕೆ ಹೊಂದಿರುವ ಮೈಸೂರು ನಗರ `ನಿವೃತ್ತರ ಸ್ವರ್ಗ'ವೂ ಹೌದು. ವೃತ್ತಿ ಜೀವನದ ಜಂಜಾಟಗಳಿಂದ ಬೇಸತ್ತಿರುವ ಜನರು ತಮ್ಮ `ನಿವೃತ್ತಿಯ ನಾಳೆ'ಗಳನ್ನು ನೆಮ್ಮದಿಯಾಗಿ ಕಳೆಯಬೇಕು ಎಂದು ಬಯಸುವಲ್ಲಿ ತಪ್ಪೇನೂ ಇಲ್ಲ. ಹಾಗೆ ನೋಡಿದರೆ ನಿವೃತ್ತರ ಪಾಲಿಗೆ `ರಾಜರ ಊರು' ನಿಜಕ್ಕೂ ಉತ್ತಮ ಆಯ್ಕೆ. ಅಗಲವಾದ ರಸ್ತೆಗಳು, ಸಂಚಾರ ದಟ್ಟಣೆ ಇಲ್ಲದಿರುವುದು, ವರ್ಷವಿಡೀ ಉತ್ತಮ ವಾತಾವರಣ, ಖರ್ಚು-ವೆಚ್ಚಗಳು ಕಡಿಮೆ.. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ, ಬೆಂಗಳೂರಿಗೆ ಹೋಲಿಕೆ ಮಾಡಿದರೆ ಮೈಸೂರು ಕೂಡ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬೆಳೆದಿದೆ. ರಿಯಲ್ ಎಸ್ಟೇಟ್ ವಿಷಯಕ್ಕೆ ಬಂದಾಗ ಮೈಸೂರಿನಲ್ಲಿ ಮನೆ, ನಿವೇಶನ ಹೊಂದುವುದು ಕೊಂಚ ದುಬಾರಿ ಎಂಬುದನ್ನು ಒಪ್ಪಿಕೊಳ್ಳಲೇಬೇಕು.ಹೌದು, ಇದಕ್ಕೆ ಹತ್ತಾರು ಕಾರಣಗಳಿವೆ. ಬೆಂಗಳೂರು ಒಂದರ್ಥದಲ್ಲಿ ಕಿಷ್ಕಿಂದೆ. ಅತೀ ಎನ್ನಿಸುವಷ್ಟು ಒತ್ತಡ, ಬೇಸರ ತರಿಸುವ ಸಂಚಾರ ದಟ್ಟಣೆ, ನಿವೇಶನ, ಮನೆ ಬಾಡಿಗೆ ದುಬಾರಿ, ಕಡಿಮೆ ದರದಲ್ಲಿ ಬಾಡಿಗೆ ಮನೆ ಬೇಕು ಎಂದಾದರೆ ನಗರ ಹೊರವಲಯಕ್ಕೆ ಹೋಗಬೇಕು. ಅಲ್ಲದೆ, ಬೆಂಗಳೂರಿನಲ್ಲಿ ಐಟಿ-ಬಿಟಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಉದ್ಯೋಗಾವಕಾಶ ಲಭ್ಯ ಇರುವುದರಿಂದ ಹೊರ ರಾಜ್ಯಗಳಿಂದ ಉದ್ಯೋಗ ಅರಸಿ ಬರುವವರ ಸಂಖ್ಯೆಯೂ ಹೆಚ್ಚು. ಇದರಿಂದಾಗಿ ಮನೆ, ನಿವೇಶನಗಳ ದರ ದುಬಾರಿ ಎಂಬ ಆರೋಪವನ್ನು ಅಲ್ಲಗಳೆಯುವಂತಿಲ್ಲ. ಜತೆಗೆ ನೆಮ್ಮದಿಯ ಜೀವನಕ್ಕೆ ಬೆಂಗಳೂರು ನಗರ ಹೇಳಿ ಮಾಡಿಸಿದ್ದಲ್ಲ ಎಂಬ ದೂರು, ಮೈಸೂರಿನಲ್ಲಿ `ಸೂರು' ದುಬಾರಿಯಾಗಲು ಕಾರಣವಾಗಿದೆ.

ಎಲ್ಲೆಲ್ಲಿ ನಿವೇಶನ ಲಭ್ಯ

ನಗರದ ಹೃದಯ ಭಾಗದಲ್ಲಿ ನಿವೇಶನಗಳು ಲಭ್ಯವಿಲ್ಲ. ಸ್ವಲ್ಪ ಆಚೀಚೆ, ಅಂದರೆ ಜೆ.ಪಿ. ನಗರ, ವಿಶ್ವೇಶ್ವರ ನಗರ, ಗೋಕುಲಂ, ವಿಜಯ ನಗರ, ಬನ್ನಿಮಂಟಪ, ಶಿವರಾತ್ರೀಶ್ವರ ನಗರ, ವಿವೇಕಾನಂದ ನಗರ, ದತ್ತ ನಗರ, ವಿದ್ಯಾರಣ್ಯಪುರಂ, ಹೆಬ್ಬಾಳ ಹಾಗೂ ಬೃಂದಾವನ ಬಡಾವಣೆಗಳತ್ತ ತೆರಳಿದರೆ ನಿವೇಶನಗಳು ಕಾಣಸಿಗುತ್ತವೆ. ಈ ಭಾಗಗಳಲ್ಲಿ ಪ್ರತಿ ಚದರ ಅಡಿ ನಿವೇಶನದ ಬೆಲೆ ರೂ. 1800 ರಿಂದ ರೂ. 3500 ವರೆಗೆ ಇದೆ. 30್ಡ40 ಅಡಿ ನಿವೇಶನ ಖರೀದಿಸಿ, ಎರಡು ಬೆಡ್ ರೂಂ ಮನೆ ನಿರ್ಮಿಸಬೇಕು ಎಂದರೆ ಕನಿಷ್ಠ ರೂ. 28 ಲಕ್ಷದಿಂದ 30 ಲಕ್ಷದವರೆಗೂ ವೆಚ್ಚವಾಗುತ್ತದೆ. ಇಷ್ಟೊಂದು ದೊಡ್ಡ ಮೊತ್ತ ಹೊಂದಿಸುವುದು ಕಷ್ಟ ಎನ್ನುವುದಾದರೆ ಅಪಾರ್ಟ್‌ಮೆಂಟ್ ಮೊರೆ ಹೋಗಬಹುದು. ಏಕೆಂದರೆ ಮೈಸೂರಿನಲ್ಲಿ ಇಷ್ಟೇ ಹಣದಲ್ಲಿ ಮನೆ ಖರೀದಿಸಿ, ಜತೆಗೊಂದು ಕಾರೂ ಖರೀದಿಸಬಹುದು!

ರಿಯಲ್ ಎಸ್ಟೇಟ್ ಹೇಗಿದೆ?

ಬೆಂಗಳೂರಿಗೆ ಹೋಲಿಸಿದರೆ ಮೈಸೂರಿನಲ್ಲಿ ರಿಯಲ್ ಎಸ್ಟೇಟ್ ಹವಾ ಜೋರಾಗಿಯೇ ಇದೆ. ವಿಶ್ರಾಂತ ಜೀವನ ಕಳೆಯಲು, ಮಕ್ಕಳ ಶಿಕ್ಷಣಕ್ಕಾಗಿ ಕೆಲವು ಪೋಷಕರು ಮೈಸೂರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.ಹಾಗೆಯೇ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವವರು `ತೆರಿಗೆ'ಯಿಂದ ತಪ್ಪಿಸಿಕೊಳ್ಳಲು ಹಾಗೂ ಭವಿಷ್ಯದ ಭದ್ರತೆ ದೃಷ್ಟಿಯಿಂದ ನಿವೇಶನ, ಫ್ಲಾಟ್ ಖರೀದಿಸುತ್ತಿದ್ದಾರೆ. ಅಲ್ಲದೆ, ಬೆಂಗಳೂರು-ಮೈಸೂರು ಚತುಷ್ಪಥ ರಸ್ತೆ, ಜೋಡಿ ರೈಲು ಹಳಿ ನಿರ್ಮಾಣ (ಕಾಮಗಾರಿ ಪ್ರಗತಿಯಲ್ಲಿದೆ), ವಿಮಾನ ನಿಲ್ದಾಣವೂ ಇರುವುದರಿಂದ ರಾಜಧಾನಿ ಮತ್ತು ಸಾಂಸ್ಕೃತಿಕ ರಾಜಧಾನಿ ನಡುವಿನ ಪಯಣ ಬಹಳ ದೂರದ್ದೇನೂ ಅಲ್ಲ. ಅಲ್ಲದೆ, ಬೆಂಗಳೂರು-ಮೈಸೂರು ಮಧ್ಯೆ `ಮೊನೊ' ರೈಲಿನ ಪ್ರಸ್ತಾವನೆ ಇರುವುದರಿಂದ ಮೈಸೂರಿನಲ್ಲಿ ನಿವೇಶನ, ಮನೆ ಖರೀದಿಗೆ ಹೆಚ್ಚಿನ ಜನರು ಆಸಕ್ತರಾಗಿದ್ದಾರೆ.

ಮೈಸೂರೂ ಬೆಳೆದಿದೆ

ಮೈಸೂರು ನಗರದ ಸುತ್ತಮುತ್ತ, ನಂಜನಗೂಡು, ಬನ್ನೂರು, ತಿ.ನರಸೀಪುರ ರಸ್ತೆ, ಹುಣಸೂರು ರಸ್ತೆ, ಶ್ರೀರಂಗಪಟ್ಟಣ ರಸ್ತೆಗಳಲ್ಲಿ 100ಕ್ಕೂ ಹೆಚ್ಚು ಖಾಸಗಿ ಬಡಾವಣೆಗಳು ತಲೆ ಎತ್ತಿ ನಿಂತಿವೆ. ಕಳೆದ 10 ವರ್ಷಗಳಲ್ಲಿ 50 ಸಾವಿರಕ್ಕೂ ಹೆಚ್ಚು ಎಕರೆ ಕೃಷಿ ಜಮೀನು ನಿವೇಶನವಾಗಿ ಪರಿವರ್ತನೆಯಾಗಿದೆ. ಸಹಜವಾಗಿ, ಇದರಿಂದ ಕೃಷಿ ಹಿನ್ನಡೆ ಸಾಧಿಸಿದೆ. ನಿತ್ಯ ಕೂಲಿ ಅರಸಿ ಮೈಸೂರಿಗೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಜತೆಗೆ ನಂಜನಗೂಡು ಕೈಗಾರಿಕಾ ಪ್ರದೇಶವಾದ್ದರಿಂದ ಇಲ್ಲಿಯೂ ನಿವೇಶನಗಳಿಗೆ ಸಾಕಷ್ಟು ಬೇಡಿಕೆ ಇದೆ. ಈ ಮೊದಲು ಬೆಂಗಳೂರು, ಮುಂಬೈಗೆ ಮಾತ್ರ ಸೀಮಿತ ಎಂಬಂತಿದ್ದ ಅಪಾರ್ಟ್‌ಮೆಂಟ್, ವಿಲ್ಲಾ ಸಂಸ್ಕೃತಿ ನಿಧಾನವಾಗಿ ಸಾಂಸ್ಕೃತಿಕ ನಗರಿಗೂ ಕಾಲಿಟ್ಟಿದ್ದು, ಜನರ ಚಿತ್ತ `ವಿಲ್ಲಾ'ಗಳತ್ತ ನೆಟ್ಟಿದೆ.30x40ಗೆ ಬೇಡಿಕೆ ಹೆಚ್ಚು

ಮೈಸೂರಿನಲ್ಲಿ ನಿವೇಶನಗಳ ಬೆಲೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಅದರಲ್ಲೂ 30್ಡ40 ನಿವೇಶನ ಹಾಟ್ ಕೇಕ್ ಇದ್ದಂತೆ. ಬೆಲೆ ನಾಲ್ಕೈದು ಲಕ್ಷ ಹೆಚ್ಚಾದರೂ ಬೇಡಿಕೆ ಜಾಸ್ತಿ. ಕಟ್ಟಡ ಸಾಮಗ್ರಿಗಳ ದರ ಹಾಗೂ ಜಮೀನಿನ ಬೆಲೆ ಹೆಚ್ಚಳದಿಂದ ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಾಣ ಕಷ್ಟವಾಗಿದೆ. ಅತೀ ಕಡಿಮೆ ಎಂದರೂ 30್ಡ40 ಅಡಿ ನಿವೇಶನಕ್ಕೆ 12 ಲಕ್ಷದಿಂದ 15 ಲಕ್ಷ ರೂಪಾಯಿ ಬೇಕು. 900ರಿಂದ 1000 ಚದರ ಅಡಿ ಕಟ್ಟಡ ನಿರ್ಮಾಣಕ್ಕೆ 18ರಿಂದ 20 ಲಕ್ಷ ರೂಪಾಯಿ ವೆಚ್ಚ ತಗಲುತ್ತದೆ. ಹೀಗಾಗಿ, ಸ್ವಂತ ಸೂರು ಹೊಂದಲು ರೂ. 30 ಲಕ್ಷದಿಂದ 35 ಲಕ್ಷ ಬೇಕೇಬೇಕು.

ಎ.ವಿ.ಶ್ರೀಧರ್, ನಿರ್ದೇಶಕ  ಎಫ್‌ಎನ್ ಇನ್‌ಫ್ರಾಸ್ಟ್ರಕ್ಚರ್ಪ್ರಮುಖ ಬಡಾವಣೆಗಳ ನಿವೇಶನ ದರ

(ಪ್ರತಿ ಚದರ ಅಡಿ)

ಸಿದ್ಧಾರ್ಥ ನಗರ ರೂ. 3000ಕುವೆಂಪುನಗರ ರೂ. 3000ಸರಸ್ವತಿಪುರಂ  ರೂ. 3600ಗೋಕುಲಂ,1ನೇ ಹಂತ   ರೂ. 3000ಗೋಕುಲಂ, 2ನೇ ಹಂತ ರೂ. 2500ಗೋಕುಲಂ,3ನೇ ಹಂತ ರೂ. 2000ಜಯಲಕ್ಷ್ಮೀಪುರಂ ರೂ. 2800 ರಿಂದ    ರೂ. 3500ವಿಶ್ವೇಶ್ವರನಗರ ರೂ. 1800ಜೆ.ಪಿ.ನಗರ  ರೂ. 1800

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry