ಸಾಂಸ್ಕೃತಿಕ ಮುನ್ನೋಟ ಅಕ್ಟೋಬರ್ 18 ಮತ್ತು 19

7

ಸಾಂಸ್ಕೃತಿಕ ಮುನ್ನೋಟ ಅಕ್ಟೋಬರ್ 18 ಮತ್ತು 19

Published:
Updated:

ಸಂಗೀತೋತ್ಸವದಲ್ಲಿ...

ಬೆಂಗಳೂರು ಗಾಯನ ಸಮಾಜ: 43ನೇ ಸಂಗೀತ ಸಮ್ಮೇಳನದಲ್ಲಿ ಮಂಗಳವಾರ ಬೆಳಿಗ್ಗೆ 10ಕ್ಕೆ ಆರ್.ಕೆ. ಪದ್ಮನಾಭ ಅವರಿಂದ `ಮುತ್ತುಸ್ವಾಮಿ ದೀಕ್ಷಿತರ ರಚನೆಗಳಲ್ಲಿ ರಾಗವೈಭವ~, ಸುಕನ್ಯಾ ಪ್ರಭಾಕರ್ ಅವರಿಂದ `ತ್ಯಾಗರಾಜ~ ಮತ್ತು ಟಿ.ಎಸ್. ಸತ್ಯವತಿ ಅವರಿಂದ `ಶ್ಯಾಮಾಶಾಸ್ತ್ರಿ~ಗಳ ಕುರಿತು ಉಪನ್ಯಾಸ, ಪ್ರಾತ್ಯಕ್ಷಿಕೆ. ಸಂಜೆ 4.15ಕ್ಕೆ ಪ್ರಿಯಾಂಕ ಸಿ. ಪ್ರಕಾಶ್ ಅವರಿಂದ ಗಾಯನ. ಅನಿರುದ್ಧ (ವಯಲಿನ್), ವಿ.ಕಾರ್ತಿಕ್ (ಮೃದಂಗ). 6.15ಕ್ಕೆ ಎನ್.ವಿಜಯಶಿವ ಅವರಿಂದ ಗಾಯನ.ಪಕ್ಕವಾದ್ಯದಲ್ಲಿ: ಚಾರುಲತಾ ರಾಮಾನುಜಂ (ವಯಲಿನ್), ಮನೋಜ್ ಶಿವ (ಮೃದಂಗ), ಜಿ.ಗುರುಪ್ರಸನ್ನ (ಖಂಜಿರಾ). ಬುಧವಾರ ಬೆಳಿಗ್ಗೆ 10ಕ್ಕೆ ಸುಗುಣಾ ಪುರುಷೋತ್ತಮ ಅವರಿಂದ `ನೆರವಲ್~, ಆರ್. ವಿಶ್ವೇಶ್ವರನ್ ಅವರಿಂದ `ಗಮಕದಲ್ಲಿ ರಾಗಗಳು~ ಪ್ರಾತ್ಯಕ್ಷಿಕೆ.

ಸಂಜೆ 4.15ಕ್ಕೆ ಕಲಾಧರಿ ಭವಾನಿ ಅವರಿಂದ ಗಾಯನ. ಪಕ್ಕವಾದ್ಯದಲ್ಲಿ: ನಾರಾಯಣಶರ್ಮಾ (ವಯಲಿನ್), ಮೈಸೂರು ಆರ್ ಸುಕೃತ (ಮೃದಂಗ). 6.15ಕ್ಕೆ ಡಾ.ಸುಮಾ ಸುಧೀಂದ್ರ ಅವರಿಂದ ವೀಣಾವಾದನ. ಪಕ್ಕವಾದ್ಯದಲ್ಲಿ: ಬಿ.ರಘುರಾಮ್ (ವಯಲಿನ್), ಬಿ.ಸಿ.ಮಂಜುನಾಥ್ (ಮೃದಂಗ), ನಾರಾಯಣ ಮೂರ್ತಿ (ಘಟ).

ಸ್ಥಳ: ಕೆ.ಆರ್.ರಸ್ತೆ.ಭಾಗವತದಲ್ಲಿ ವೇದಾಂತ ದರ್ಶನ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ಮಂಗಳವಾರ ಗಣೇಶ ಭಟ್ಟ ಹೋಬಳಿ ಅವರಿಂದ `ಭಾಗವತದಲ್ಲಿ ವೇದಾಂತ ದರ್ಶನ~ ಕುರಿತು ಉಪನ್ಯಾಸ. ಬುಧವಾರ ಬಿ.ಆರ್.ಪ್ರಭಾಕರ್ ಅವರಿಂದ `ರಾಮಾಯಣ -ಸೀತಾಚರಿತೆ~ ಕುರಿತು ಉಪನ್ಯಾಸ.

ಸ್ಥಳ: ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ನಿತ್ಯ ಸಂಜೆ 6.15.ಕಾರ್ತಿಕ ದೀಪೋತ್ಸವ

ಇಸ್ಕಾನ್: ತುಪ್ಪದ ದೀಪ ಬೆಳಗುವ ಕಾರ್ಯಕ್ರಮ,  8 ಗಂಟೆಗೆ ಶಯನ ಆರತಿ, 8.30ಕ್ಕೆ ಕೀರ್ತನೆ ಜತೆ ಪಲ್ಲಕ್ಕಿ ಉತ್ಸವ. ಸ್ಥಳ: ಇಸ್ಕಾನ್, ವೆಸ್ಟ್ ಆಫ್ ಕಾರ್ಡ್ ರಸ್ತೆ.ರಂಗಶಂಕರ ನಾಟಕೋತ್ಸವದಲ್ಲಿ

ರಂಗಶಂಕರ: ರಂಗಶಂಕರ ನಾಟಕೋತ್ಸವದಲ್ಲಿ ಮಂಗಳವಾರ ಎಸ್.ಎ. ಮುದ್ರ ಫೌಂಡೇಶನ್‌ನಿಂದ `ಕೃಷ್ಣ ಸಂಧಾನ~ ಯಕ್ಷಗಾನ ತಾಳಮದ್ದಳೆ (ನಿ: ಪ್ರೊ. ಕೆ.ಇ.ರಾಧಾಕೃಷ್ಣ). ಬುಧವಾರ `ನೀರೊಸ್ ಗೆಸ್ಟ್~ ಇಂಗ್ಲಿಷ್ ಚಲನಚಿತ್ರ. (ನಿ: ದೀಪಾ ಭಾಟಿಯ. ಉಚಿತ ಪ್ರವೇಶ).  ಸ್ಥಳ: ರಂಗಶಂಕರ, ಜೆಪಿ ನಗರ 2ನೇ ಹಂತ. ಸಂಜೆ 7.30.ಭಾಗವತ ಪಂಚಮಸ್ಕಂದ

ದೇವಗಿರಿ ಶ್ರೀ ಗುರುಸೇವಾ ಸಮಿತಿ: ಬನ್ನಂಜೆ ಗೋವಿಂದಾಚಾರ್ಯರಿಂದ `ಭಾಗವತ ಪಂಚಮಸ್ಕಂದ~ ಕುರಿತು ಉಪನ್ಯಾಸ. ಸ್ಥಳ: ದೇವಗಿರಿ ರಾಯರ ಮಠ, 24ನೇ ಮೇನ್, ಬನಶಂಕರಿ 2ನೇ ಹಂತ. ಸಂಜೆ 6.30.ಮಹಾಭಾರತ ಪಾತ್ರ ಪ್ರಪಂಚ

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಜಯತೀರ್ಥಾಚಾರ್ಯ ಮಳಗಿ ಅವರಿಂದ `ಮಹಾಭಾರತ ಪಾತ್ರ ಪ್ರಪಂಚ~. ಸ್ಥಳ: ಬಸವನಗುಡಿ ರಸ್ತೆ, ನರಸಿಂಹರಾಜ ಬಡಾವಣೆ. ನಿತ್ಯ ಸಂಜೆ 6.30.ಸರ್ವಸಮ್ಮತೋಪದೇಶಗಳು

ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಪ್ರದೀಪ ಶರ್ಮಾ ಅವರಿಂದ `ಸದ್ಗುರುಗಳ ಗ್ರಂಥದಿಂದ ಸರ್ವಸಮ್ಮತೋಪದೇಶಗಳು~ ಕುರಿತು ಉಪನ್ಯಾಸ. ಸ್ಥಳ: ನಂ.68, ಎಪಿಕೆ ರಸ್ತೆ, 2ನೇ ವಿಭಾಗ, ತ್ಯಾಗರಾಜನಗರ. ನಿತ್ಯ ಬೆಳಿಗ್ಗೆ 9.30.ಅಧ್ಯಾಸಭಾಷ್ಯಂ

ವೇದಾಂತ ಸತ್ಸಂಗ ಕೇಂದ್ರ: ಬೆಳಿಗ್ಗೆ 7.45ಕ್ಕೆ ಕೆ.ಜಿ. ಸುಬ್ರಾಯ ಶರ್ಮಾ ಅವರಿಂದ `ಅಧ್ಯಾಸ ಭಾಷ್ಯಂ~ ಉಪನ್ಯಾಸ. ಸ್ಥಳ; ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರಂ.

ನಂತರ ಬೆಳಿಗ್ಗೆ 9ಕ್ಕೆ ಇವರಿಂದಲೇ `ಛಾಂದೋಗ್ಯೋಪನಿಷತ್~ ಉಪನ್ಯಾಸ. ಸ್ಥಳ: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್, ಬಸವನಗುಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry