ಶನಿವಾರ, ಮೇ 15, 2021
26 °C

ಸಾಂಸ್ಕೃತಿಕ ಮುನ್ನೋಟ: ಸೆಪ್ಟೆಂಬರ್ 24, 25 ಮತ್ತು 26

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಕಥೆ, ಗೀತೋಪನ್ಯಾಸ

ತಿರುಪತಿ ತಿರುಮಲ ದೇವಸ್ಥಾನ: ಶನಿವಾರ ಸೀತಾರಾಮ ಮುನಿಕೋಟಿ ಅವರಿಂದ ಹರಿಕಥೆ. ಸ್ಥಳ: ತಿರುಪತಿ ತಿರುಮಲ ವಾರ್ತಾ ಕೇಂದ್ರ, ಜಯನಗರ. ಭಾನುವಾರ ಕೆ.ಎಸ್.ಮನೋರಮಾ ಅವರಿಂದ ಗೀತೋಪನ್ಯಾಸ. ಸ್ಥಳ: ವೈಯಾಲಿಕಾವಲ್. ನಿತ್ಯ ಸಂಜೆ 6.ಭಗವದ್ಗೀತೆ

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಡಿವಿಜಿ ಸಪಾದ ಶತೋತ್ಸವ ಸರಣಿಯಲ್ಲಿ ಗಣೇಶ ಭಟ್ಟ ಹೋಬಳಿ ಅವರಿಂದ ಭಗವದ್ಗೀತೆ ಪ್ರವಚನ.

ಸ್ಥಳ: ಬಸವನಗುಡಿ ರಸ್ತೆ, ನರಸಿಂಹರಾಜ ಕಾಲೋನಿ. ನಿತ್ಯ ಸಂಜೆ 6.30.ಸರ್ವಸಮ್ಮತೋಪದೇಶ

ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಪ್ರದೀಪ ಶರ್ಮಾ ಅವರಿಂದ `ಸರ್ವಸಮ್ಮತೋಪದೇಶಗಳು~ ಕುರಿತು ಪ್ರವಚನ ಸ್ಥಳ: ನಂ.68, ಎಪಿಕೆ ರಸ್ತೆ, 2ನೇ  ವಿಭಾಗ, ತ್ಯಾಗರಾಜ ನಗರ. ಬೆಳಿಗ್ಗೆ 9.30.ಅಲಂಕಾರ

ಕೋದಂಡರಾಮ ದೇವಸ್ಥಾನ ಸಮಿತಿ: ಶನಿವಾರ ಎಳ್ಳು ಅಲಂಕಾರ, ಭಾನುವಾರ ಕಿರು ಗುಲಾಬಿ ಮತ್ತು ಸೋಮವಾರ ಕ್ಯಾರೆಟ್ ಬೀಟ್‌ರೂಟ್ ಅಲಂಕಾರ. ಸ್ಥಳ: ನಂ.30, ಸಂಪಂಗಿರಾಮ ನಗರ. ಬೆಳಿಗ್ಗೆ 7.ಗರುಡ ಪುರಾಣ

ಶ್ರೀಮದಾನಂದತೀರ್ಥ ಪ್ರವಚನ ಸಮಿತಿ: ಖೇಡಾ ಕೃಷ್ಣಾಚಾರ್ಯ ಅವರಿಂದ `ಗರುಡ ಪುರಾಣ~ ಪ್ರವಚನ. ಸ್ಥಳ: ರಾಘವೇಂದ್ರ ಸ್ವಾಮಿ ಮಠ, 6ನೇ ಅಡ್ಡ ರಸ್ತೆ, ಅಮರ ಜ್ಯೋತಿನಗರ. ನಿತ್ಯ ಸಂಜೆ 7.ಉಪನ್ಯಾಸ

ವೇದಾಂತ ಸತ್ಸಂಗ ಕೇಂದ್ರ: ಬೆಳಿಗ್ಗೆ 7.45ಕ್ಕೆ ಕೆ.ಜಿ. ಸುಬ್ರಾಯ ಶರ್ಮಾ ಅವರಿಂದ `ಅಧ್ಯಾಸ ಭಾಷ್ಯಂ~ ಉಪನ್ಯಾಸ. ಸ್ಥಳ; ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರಂ.

ನಂತರ ಬೆಳಿಗ್ಗೆ 9ಕ್ಕೆ ಇವರಿಂದಲೇ `ಛಾಂದೋಗ್ಯೋಪನಿಷತ್~ ಉಪನ್ಯಾಸ. ಸ್ಥಳ: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್, ಬಸವನಗುಡಿ.ಶ್ರದ್ಧಾ

ದೇವಗಿರಿ ಶ್ರೀ ಗುರುಸೇವಾ ಸಮಿತಿ: ಪ್ರದ್ಯುಮ್ನಾಚಾರ್ಯ ಜೋಶಿ ಅವರಿಂದ `ಶ್ರದ್ಧಾ~ ಪ್ರವಚನ.  ಸ್ಥಳ: ದೇವಗಿರಿ ರಾಯರ ಮಠ, 24ನೇ ಮೇನ್, ಬನಶಂಕರಿ 2ನೇ ಹಂತ. ಸಂಜೆ 7ಕಪಿಲೋಪದೇಶ

ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್: ಶನಿವಾರ ಕೇಶವದಾಸ ಮೂರ್ತಿ ಮತ್ತು ತಂಡದಿಂದ ಭಜನೆ. ಭಾನುವಾರ ಸುರಭಿ ರಾಮಚಂದ್ರ ಅವರಿಂದ ದೇವರ ನಾಮಗಳು. ಸೋಮವಾರ ಸತ್ಯನಾರಾಯಣಾಚಾರ್ಯ ಅವರಿಂದ `ಕಪಿಲೋಪದೇಶ~ ಉಪನ್ಯಾಸ. ಸ್ಥಳ: ರಾಗಿಗುಡ್ಡ, 9ನೇ ಬ್ಲಾಕ್ ಜಯನಗರ. ನಿತ್ಯ ಸಂಜೆ 6.ಆರ್ಟ್ಸ್ ಫೆಸ್ಟಿವಲ್‌ನಲ್ಲಿ...

ಬೆಂಗಳೂರು ಇಂಟರ್‌ನ್ಯಾಷನಲ್ ಆರ್ಟ್ಸ್ ಫೆಸ್ಟಿವಲ್ (ಬಿಐಎಎಫ್): ಶನಿವಾರ  ಸಂಜೆ 6ಕ್ಕೆ ಪದ್ಮಿನಿ ರವಿ ಅವರಿಂದ ಭರತನಾಟ್ಯ. ಅನೂಜ್ ಮಿಶ್ರಾ ಅವರಿಂದ ಕಥಕ್. ಸ್ಥಳ: ಬ್ರಿಗೇಡ್ ಮಿಲೇನಿಯಂ, ಜೆಪಿ ನಗರ 7ನೇ ಹಂತ.ಅರುಣಾ ಮೊಹಂತಿ ಮತ್ತು ತಂಡದಿಂದ ಒಡಿಸ್ಸಿ. ಅದಿತಿ ಮಂಗಳದಾಸ್ ಮತ್ತು ತಂಡದಿಂದ ಕಥಕ್. ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್. ಸಂಜೆ 6

ಭಾನುವಾರ ಒ.ಎಸ್.ಅರುಣ್ ಮತ್ತು ಸಂಜೀವ್ ಅಭಯಂಕರ್ ಅವರಿಂದ ದ್ವಂದ್ವ ಗಾಯನ. ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್. ಸಂಜೆ 6.ರಂಗಶಂಕರದಲ್ಲಿ

ರಂಗಶಂಕರ: ಶನಿವಾರ ಮತ್ತು ಭಾನುವಾರ ದಿವ್ಯಾ ಅರೋರ ತಂಡದಿಂದ `ದಿ ಮೆಲೋಡಿ ಆಫ್ ಲವ್~ (ರಚನೆ, ನಿರ್ದೇಶನ: ದಿವ್ಯಾ ಅರೋರ).

ಸ್ಥಳ: ರಂಗಶಂಕರ, ಜೆ.ಪಿ.ನಗರ, 2ನೇ ಹಂತ. ನಿತ್ಯ ಸಂಜೆ 7.30. (ಭಾನುವಾರ ಮಧ್ಯಾಹ್ನ 3.30ಕ್ಕೆ ಮ್ಯಾಟಿನಿ).ಸಂತೂರ್, ಗಾಯನ

ರಾಗಸಂಗಮ: ಶನಿವಾರ ಕೋಲ್ಕತ್ತದ ಶುದ್ಧಶೀಲ್ ಚಟರ್ಜಿ (ಪಂಡಿತ್ ಶಿವಕುಮಾರ್ ಶರ್ಮಾ ಅವರ ಶಿಷ್ಯ) ಅವರಿಂದ  ಸಂತೂರ್. ಸೌಮೆನ್  ಮುಖರ್ಜಿ ಅವರಿಂದ (ತಬಲಾ). ಭಾನುವಾರ ಸಂತ ಶಿಶುನಾಳ ಶರೀಫ್ ದರ್ಶನ-ತತ್ವ ಪದಗಳ ಪ್ರಾತ್ಯಕ್ಷಿಕೆಯಲ್ಲಿ ಸ್ಮಿತಾ ಬೆಳ್ಳೂರ್ ಅವರಿಂದ ಗಾಯನ. ಪಕ್ಕವಾದ್ಯದಲ್ಲಿ: ಹನುಮಂತಪ್ಪ ಆಲ್ಕೊಡ (ಹಾರ‌್ಮೋನಿಯಂ), ಸಂದೀಪ್ ವಸಿಷ್ಠ (ಕೊಳಲು), ನಿಸಾರ್ ಅಹಮದ್ (ತಬಲಾ), ವಾದಿರಾಜ್ (ರಿದಂಪ್ಯಾಡ್).ಸ್ಥಳ: ಟೆಲಿಕಾಂ ಆಫೀಸರ್ಸ್ ಅಸೋಸಿಯೇಷನ್, ಸಿ ಬ್ಲಾಕ್, ಕೋಡಿಗೆಹಳ್ಳಿ ರೈಲ್ವೆ ಸ್ಟೇಷನ್, ಸಹಕಾರ ನಗರ. ನಿತ್ಯ ಸಂಜೆ 6. ಮಾಹಿತಿಗೆ: 944827 1597.ಹರಿವಂಶ ಪುರಾಣ

ಶನಿವಾರ ಮತ್ತು ಭಾನುವಾರ ಪಾರ್ಥಸಾರಥಿ ದೇವರ 25ನೇ ಪ್ರತಿಷ್ಠಾ ವರ್ಷಾಚರಣೆಯ ಅಂಗವಾಗಿ ಡಾ.ಮಾಳಗಿ ರಾಮಾಚಾರ್ ಅವರಿಂದ `ಶ್ರೀ ಹರಿವಂಶ ಮಹಾಪುರಾಣದ ಉಪನ್ಯಾಸ. ಸ್ಥಳ: ಕಾಶಿ ಮಠ, ನೆಟ್ಟಕಲ್ಲಪ್ಪ ವೃತ್ತ. ಸಂಜೆ 6.30.ಷಟ್ ಪ್ರಶ್ನೆ

ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠ: ಜೆ.ಪಿ.ನಾಗಾರಾಜಾಚಾರ್ಯ ಅವರಿಂದ `ಷಟ್ ಪ್ರಶ್ನೆ~ ಕುರಿತು ಉಪನ್ಯಾಸ.  ಸ್ಥಳ: ಪ್ಲಾಟ್‌ಫಾರಂ ರಸ್ತೆ, ಶೇಷಾದ್ರಿಪುರ. ನಿತ್ಯ ಸಂಜೆ 6.30.ಬಂಡ್ವಾಳ್ವಿಲ್ಲದ ಬಡಾಯಿ

ರಂಗತಂತ್ರ: ಶನಿವಾರ ರಂಗ ತಂತ್ರ ತಂಡದಿಂದ `ಲಾಕ್ ಔಟ್ ಅಲ್ಲ ನಾಕ್ ಔಟ್~ (ರಚನೆ: ಎಂ.ಎಸ್. ನರಸಿಂಹ ಮೂರ್ತಿ) ಮತ್ತು ಭಾನುವಾರ `ಬಂಡ್ವಾಳ್ವಿಲ್ಲದ ಬಡಾಯಿ~ ನಾಟಕ (ರಚನೆ: ಟಿ.ಪಿ.ಕೈಲಾಸಂ).ಕಾರ್ಖಾನೆ ಲಾಕ್ ಔಟ್ ಆಗಿ ಮನೆ ಸೇರುವ ಕಾರ್ಮಿಕನ ಮೇಲೆ ಆತನ ಮಡದಿ ಮಾಡುವ ಶೋಷಣೆಯೇ ಲಾಕ್ ಔಟ್ ಅಲ್ಲ ನಾಕ್ ಔಟ್. ಒಬ್ಬ ವಕೀಲನ ನಿತ್ಯ ಜೀವನದ ಆಗುಹೋಗುಗಳ ಹಾಸ್ಯ ರೂಪ ಬಂಡ್ವಾಳ್ವಿಲ್ಲದ ಬಡಾಯಿ.  ಸ್ಥಳ: ರಾಮಾಂಜನೇಯ ಸ್ವಾಮಿ ದೇವಸ್ಥಾನದ ಆವರಣ, ಹನುಮಂತನಗರ. ನಿತ್ಯ ಸಂಜೆ 7.30.ಉಪನ್ಯಾಸ

ಬಸವ ಸಮಿತಿ: ಭಾನುವಾರ ಡಾ.ಬಿ.ನಂಜುಂಡ ಸ್ವಾಮಿ ಅವರಿಂದ `ಸರ್ಪಭೂಷಣ ಶಿವಯೋಗಿಗಳ ಜೀವನ ಹಾಗೂ ಕೃತಿಗಳು~ ಕುರಿತು ಉಪನ್ಯಾಸ. ನಂತರ ಸರ್ವ ಮಂಗಳ ಶಂಕರ್ ಅವರಿಂದ ಸಂಗೀತ ಕಾರ್ಯಕ್ರಮ. ಅಧ್ಯಕ್ಷತೆ: ಅರವಿಂದ ಜತ್ತಿ. ಸ್ಥಳ: ಅರಿವಿನ ಮನೆ, ಬಸವ ಭವನ, ಬಸವೇಶ್ವರ ವೃತ್ತ.ಬೆಳಿಗ್ಗೆ 10.30.ಸೋಮವಾರ ಅರವಿಂದ ಜತ್ತಿ ಅವರಿಂದ `ವಚನಗಳಲ್ಲಿ ದೇವರ ಕಲ್ಪನೆ~ ಕುರಿತು ಉಪನ್ಯಾಸ. ಸ್ಥಳ: ಅರಿವಿನ ಮನೆ, ಬಸವ ಭವನ, ಬಸವೇಶ್ವರ ವೃತ್ತ. ಸಂಜೆ 6.ಪಿತೃ ಕಲ್ಪ

ಸಂಜೆ ರಮೇಶಾಚಾರ್ಯ ಅವರಿಂದ `ಪಿತೃ ಕಲ್ಪ~ ಕುರಿತು ಉಪನ್ಯಾಸ. ಸ್ಥಳ: ರಾಘವೇಂದ್ರ ತೀರ್ಥ ಸ್ವಾಮಿಗಳ ಮಠ, ಹೊಸಕೆರೆಹಳ್ಳಿ.ಗರುಡ ಪುರಾಣ

ಪುರುಷೋತ್ತಮಾಚಾರ್ಯ ಅವರಿಂದ `ಗರುಡ ಪುರಾಣ~ ಪ್ರವಚನ. ಸ್ಥಳ: ಶಾಕಾಂಬರಿ ನಗರ ರಾಯರ ಮಠ, ನಿತ್ಯ ಸಂಜೆ 7.ಶ್ರೀ ಕೃಷ್ಣ ಚರಿತ್ರೆ

ಜಯತೀರ್ಥಚಾರ್ಯ ಮಳಗಿ ಅವರಿಂದ `ಶ್ರೀ ಕೃಷ್ಣ ಚರಿತ್ರೆ~ ಕುರಿತು ಉಪನ್ಯಾಸ.

ಸ್ಥಳ: ಪುಣ್ಯಧಾಮ, ವಿವಿಎಸ್ ಪ್ರೌಢಶಾಲೆ, ರಾಜಾಜಿನಗರ 1ನೇ ಬ್ಲಾಕ್. ಸಂಜೆ 6.45.ಕಬಾಡಿ ಸಂಗೀತ

ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಶನಿವಾರ ವೆಂಕೂಸಾ ಆರ್. ಕಬಾಡಿ ಅವರಿಂದ ಸಂಗೀತ. ಭಾನುವಾರ ಬೆಳಿಗ್ಗೆ 9.30ಕ್ಕೆ ರಾಮದಾಸ ಕೂಟದಿಂದ ಭಜನೆ

ಸ್ಥಳ: ಮಹಾಲಕ್ಷ್ಮಿಪುರಂ. ಸಂಜೆ 6.30.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.