ಶುಕ್ರವಾರ, ಏಪ್ರಿಲ್ 23, 2021
31 °C

ಸಾಂಸ್ಕೃತಿಕ ವೈಭವಕ್ಕೆ ಕಲಾ ಮೆರಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾವಗಲ್: ತುಂತುರು ಮಳೆ, ಕಾರ್ಮೋಡ, ತಂಗಾಳಿ ಚಳಿಯಲ್ಲಿ ಕಲಾವಿದರ ನರ್ತನ, ಮಂಗಳ ವಾದ್ಯಗಳ ಅಬ್ಬರ ಜನತೆಯ ಹರ್ಷೋದ್ಘಾರ. ಇದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚನ್ನರಾಯಪಟ್ಟಣದ ನಾಟ್ಯ ಭೈರವಿ ಟ್ರಸ್ಟ್ ಸಹಯೋಗದಲ್ಲಿ ಪಟ್ಟ ಣದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರಾವಣ ಸಂಜೆ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಮೆರವಣಿಗೆಯ ಚಿತ್ರಣ.  ಪಟ್ಟಣದ ಯುವಕಲಾವಿದರ ಮೈನವಿರೇಳಿಸುವ ಡೊಳ್ಳುಕುಣಿತ, ಕುರಾದರಳ್ಳಿ ಸರ್ಕಾರಿ ಪ್ರೌಢಶಾಲೆ, ಬೆಂಗಳೂರಿನ ಬಸವೇಶ್ವರ ತಂಡ, ಕೋಲಾರದ ವಿಕ್ರಂ ತಂಡ ಹಾಗೂ ಕಡೂರಿನ ಮಹಿಳಾ ತಂಡದ ವೀರ ಗಾಸೆ ಪ್ರದರ್ಶನ, ಜಾವಗಲ್ ಸರ್ಕಾರಿ ಪ್ರೌಢಶಾಲೆಯ ಕೋಲಾಟ ಮುದನೀಡಿದವು.ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಸೋಮೇಗೌಡ, ಎಪಿಎಂಸಿ ಸದಸ್ಯ ನಾಗರಾಜು, ಜಿಲ್ಲಾ ಕಸಾಪ ಕಾರ್ಯ ದರ್ಶಿ ಹರೀಶ್,ಪಿಎಸ್‌ಐ ಆರೋಕಿಯಪ್ಪ, ಹಳೇಬೀಡು ತಾಲ್ಲೂಕು ಕಸಾಪ ಅಧ್ಯಕ್ಷ ಅನಿಲ್‌ಕುಮಾರ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.