ಬುಧವಾರ, ಮೇ 19, 2021
26 °C

ಸಾಂಸ್ಕೃತಿಕ ಹಿರಿಮೆ ರಕ್ಷಿಸಿದ ಕ್ರೈಸ್ತರು: ರಾಡ್ರಿಗಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡುಬಿದಿರೆ: ಪಾಶ್ಚಾತ್ಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಆಧುನಿಕ ಶೈಲಿಯಲ್ಲಿ ಹೊಸತನವನ್ನು ಅನುಭವಿಸುವ ಭರದಲ್ಲಿ ಮೂಲ ಸಂಸ್ಕೃತಿ ಮರೆಯವ ಪರಂಪರೆ ಎಲ್ಲಾ ಪಂಗಡಗಳಲ್ಲಿದೆ. ಕ್ಯಾಥೊಲಿಕ್ ಕ್ರೈಸ್ತರಲ್ಲಿ ಅದು ಇನ್ನಷ್ಟು ಹೆಚ್ಚಿದ್ದರೂ ಸಾಂಸ್ಕೃತಿಯ ಹಿರಿಮೆಯನ್ನು ಜಾಗೃತೆಯಿಂದ ಕಾಯ್ದುಕೊಂಡು ಬರುವವರೂ ಸಾಕಷ್ಟು ಮಂದಿ ಇದ್ದಾರೆ ಎಂದು ರಾಕ್ನೊ ವಾರಪತ್ರಿಕೆ ಸಂಪಾದಕ ಧರ್ಮಗುರು ಮಂಗಳೂರಿನ ಫ್ರಾನ್ಸಿಸ್ ರಾಡ್ರಿಗಸ್ ಹೇಳಿದರು.ಭಾನುವಾರ ಕಾಂತಾವರ ಕನ್ನಡ ಸಂಘದಲ್ಲಿ ನಡೆದ ತಿಂಗಳ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ `ಕರಾವಳಿ ಕೊಂಕಣಿ ಕ್ರೈಸ್ತರ ಸಂಸ್ಕೃತಿ  ಎಂಬ ವಿಷಯದ ಕುರಿತು ಮಾತನಾಡಿದರು.ಹಿಂದೆ  ಗೋವಾದಲ್ಲಿ ಕ್ರೈಸ್ತರಿಗೆ ಧಾರ್ಮಿಕ ಸ್ವಾತಂತ್ರ್ಯವಿರಲಿಲ್ಲ. ಮೂಲ ಭಾರತೀಯ ಸಂಸ್ಕೃತಿಯನ್ನು ಆಚರಿಸದಂತೆ ಒತ್ತಡ ಹೇರಲಾಗುತಿತ್ತು. ಮತಾಂತರಗೊಂಡವರಿಗೆ ಮಾತ್ರ ಸಕಲ ಸವಲತ್ತುಗಳನ್ನು ನೀಡಲಾಗುತ್ತಿತ್ತು. ಭೀತಿ ಮತ್ತು ಅಭದ್ರತೆಯ ಮಧ್ಯೆ ತಮ್ಮ ಮೂಲ ಸಂಸ್ಕತಿಯನ್ನು ಉಳಿಸುವುದಕ್ಕಾಗಿ ದೇಶೀಯ ಕ್ರೈಸ್ತರು ಕರಾವಳಿ ಕಡೆ ವಲಸೆ ಬಂದಿದ್ದರು ಎಂದರು.ಕಾರ್ಯಕ್ರಮದ ನಿರಂತರ ಪ್ರಾಯೋಜಕ ಸಿ.ಕೆ ಪಡಿವಾಳ್, ಅಲಂಗಾರ್ ಚರ್ಚ್‌ನ ಧರ್ಮಗುರು ಬೇಸಿಲ್ ವಾಸ್, ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ.ನಾ ಮೊಗಸಾಲೆ ಇದ್ದರು.ಗುತ್ತಿಗೆದಾರರ ಸಂಘಕ್ಕೆ ಆಯ್ಕೆ

ಪುತ್ತೂರು: ದ.ಕ ಮತ್ತು ಉಡುಪಿ ಜಿಲ್ಲಾ ಬೀಡಿ ಗುತ್ತಿಗೆದಾರರ ಸಂಘದ ನೂತನ ಅಧ್ಯಕ್ಷರಾಗಿ ಕೃಷ್ಣಪ್ಪ ತೊಕ್ಕೊಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ವಿ.ಕೆ.ಶರೀಫ್ ಬಪ್ಪಳಿಗೆ ಆಯ್ಕೆಗೊಂಡಿದ್ದಾರೆ.ಮಂಗಳೂರಿನಲ್ಲಿ ಭಾನುವಾರ ಸಂಘದ ಗೌರವಾಧ್ಯಕ್ಷ ರಾಕೇಶ್ ಮಲ್ಲಿ ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪುತ್ತೂರಿನ ವಿ.ಕೆ. ಶರೀಫ್ ಬಪ್ಪಳಿಗೆ ತಿಳಿಸಿದ್ದಾರೆ. ಗೌರವಾಧ್ಯಕ್ಷರಾಗಿ ರಾಕೇಶ್ ಮಲ್ಲಿ, ಉಪಾಧ್ಯಕ್ಷರಾಗಿ ರವಿ ಉಡುಪಿ, ಸ.ಬಿ.ಯೂಸುಫ್, ಬಿ.ಎಂ.ರಫೀಕ್ ಎಡಪದವು, ಖಜಾಂಜಿಯಾಗಿ ಎಸ್.ಕುಂಞಿ ಬಾವ ಬಿ.ಸಿ.ರೋಡ್, ಜೊತೆ ಕಾರ್ಯದರ್ಶಿ ಗಳಾಗಿ ಅರುಣ್ ಕುಮಾರ್ ಉಚ್ಚಿಲ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.