ಸಾಕರ್ ಪ್ರತಿಭೆಗಳು...

7

ಸಾಕರ್ ಪ್ರತಿಭೆಗಳು...

Published:
Updated:
ಸಾಕರ್ ಪ್ರತಿಭೆಗಳು...

ಕ್ರಿಕೆಟ್ ಅಂದಾಕ್ಷಣ ಎಲ್ಲರೂ ಟಿ ವಿ ಮುಂದೆ ಹಾಜರ್. ನಮ್ಮಲ್ಲಿ ಕ್ರಿಕೆಟ್‌ಗೆ ಇರುವಷ್ಟು ಪ್ರಾಶಸ್ತ್ಯ ಉಳಿದ ಕ್ರೀಡೆಗೆ ಇಲ್ಲ. ಆದರೆ ಇದು ಸರಿಯಲ್ಲ ಎನ್ನುತ್ತದೆ ಶಾಲಾ ಮಕ್ಕಳಿಗೆ ದೈಹಿಕ ಶಿಕ್ಷಣ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿರುವ ಲೀಪ್ ಸ್ಟಾರ್ಟ್.

ಫುಟ್‌ಬಾಲ್‌ನಲ್ಲಿ (ಸಾಕರ್) ಆಸಕ್ತಿ ಹೊಂದಿರುವ 11ರಿಂದ 14 ವರ್ಷದೊಳಗಿನ ಮಕ್ಕಳಿಗೆ ವಿಶಿಷ್ಟ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದಕ್ಕಾಗಿ ಲೀಪ್‌ಸ್ಟಾರ್ಟ್‌ ನಗರದಲ್ಲಿ ಗುರುವಾರ ಮತ್ತು ಶುಕ್ರವಾರ `ಇಂಗ್ಲಿಷ್ ಸಾಕರ್ ಲೀಗ್~ ಫುಟ್‌ಬಾಲ್ ಪಂದ್ಯಾವಳಿ ನಡೆಸುತ್ತಿದೆ.ದೇಶದ ವಿವಿಧ ನಗರ, ಪಟ್ಟಣಗಳ 19 ಶಾಲಾ ತಂಡಗಳು ಪಾಲ್ಗೊಳ್ಳಲಿವೆ. ಇಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ 6 ಪ್ರತಿಭಾವಂತ ಮಕ್ಕಳನ್ನು ಆಯ್ಕೆ ಮಾಡಿ ಲಂಡನ್‌ನ ಟೊಟನ್‌ಹ್ಯಾಮ್ ಹಾಟ್ಸಪರ್‌ನ `ಇಂಗ್ಲಿಷ್ ಪ್ರಿಮೀಯರ್ ಲೀಗ್ ಕ್ಲಬ್~ನಲ್ಲಿ ಒಂದು ವಾರ ಉಚಿತ ತರಬೇತಿಗೆ ಕಳಿಸಲಾಗುತ್ತದೆ, ಅಲ್ಲಿ ಇವರಿಗೆ ಇಂಗ್ಲೆಂಡ್‌ನ ಅತ್ಯುತ್ತಮ ಫುಟ್‌ಬಾಲ್ ಕೋಚ್‌ಗಳು ಆಟದ ಪಟ್ಟುಗಳನ್ನು ಕಲಿಸಲಿದ್ದಾರೆ.ನಿನ್ನೆ ಕೋಚ್ ಪ್ರದ್ಯಮ್ನ ಅವರು ಆಟಗಾರರಿಗೆ ಯಾವ ರೀತಿಯ ಆಹಾರ ತಗೆದುಕೊಳ್ಳಬೇಕು, ಯಾವ ರೀತಿಯ ವ್ಯಾಯಾಮ ಮಾಡಿದರೆ ಪಂದ್ಯದಲ್ಲಿ ಫಿಟ್‌ನೆಸ್ ಕಾಯ್ದುಕೊಳ್ಳಬಹುದು ಎಂಬ ಮಾಹಿತಿ ನೀಡಿದರು. ಲೀಪ್ ಸ್ಟಾರ್ಟ್ ಅಧ್ಯಕ್ಷ ದೇವ್ ರಾಯ್ ಹಾಜರಿದ್ದರು.ಕ್ರೀಡಾಕೂಟದ ಸ್ಥಳ: ಎಕ್ಸ್‌ಎಲ್‌ಆರ್ 8 ಕ್ರೀಡಾ ಸಂಸ್ಥೆ ಆವರಣ, ಕೊತ್ತನೂರು, ಹೆಣ್ಣೂರು ಮುಖ್ಯರಸ್ತೆ.    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry