ಸಾಕು ನಿಮ್ಮ ಸಹವಾಸ: ಯಡಿಯೂರಪ್ಪ

7

ಸಾಕು ನಿಮ್ಮ ಸಹವಾಸ: ಯಡಿಯೂರಪ್ಪ

Published:
Updated:

ಬೆಂಗಳೂರು: `ಮಾತುಕತೆ ಹಂತ ಮೀರಿದೆ. ಒಂದು ಕಾಲು ಆಚೆ ಇಟ್ಟಿದ್ದೇನೆ~-

ಹೀಗೆ ಹೇಳಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಕಾನೂನು ಸಚಿವ ಸುರೇಶಕುಮಾರ್, ಪಕ್ಷದ ಮುಖಂಡ ಸಂತೋಷ್ ಅವರು ಡಾಲರ್ಸ್‌ ಕಾಲೊನಿಯ ಯಡಿಯೂರಪ್ಪ ಅವರ ನಿವಾಸಕ್ಕೆ  ಮನವೊಲಿಸಲು ಭಾನುವಾರ ತೆರಳಿದಾಗ ಹೀಗೆ ಹೇಳಿ ಅವರನ್ನು ದಂಗು ಬಡಿಸಿದರು ಎನ್ನಲಾಗಿದೆ.`ನಿಮ್ಮಟ್ಟಿಗೆ ಮಾತನಾಡುವುದು ಏನೂ ಉಳಿದಿಲ್ಲ. ನಿಮ್ಮ ಸಹವಾಸ ಸಾಕು. ಬಿಜೆಪಿಯಿಂದ ಈಗಾಗಲೇ ನಾನು ಒಂದು ಕಾಲು ಹೊರಗಿಟ್ಟಿದ್ದೇನೆ. ನಿಮ್ಮ ದಾರಿ ನಿಮಗೆ; ನನ್ನ ದಾರಿ ನನಗೆ~ ಎಂದು ನೇರವಾಗಿಯೇ ಹೇಳಿದರು ಎಂದು ಗೊತ್ತಾಗಿದೆ.ಇದರಿಂದ ತಬ್ಬಿಬ್ಬಾದ ಸಂಧಾನಕಾರರು `ಸರ್, ಆತುರ ಪಡಬೇಡಿ. ನಾಲ್ಕೈದು ತಿಂಗಳ ಬಳಿಕ ಎಲ್ಲವೂ ಸರಿ ಹೋಗುತ್ತದೆ~ ಎಂದು ಮನವೊಲಿಸಲು ಯತ್ನಿಸಿದರೂ ಅವರು ಸಮಾಧಾನಗೊಂಡಿಲ್ಲ ಎನ್ನಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry