ಸಾಕ್ಷರತಾ ಸಪ್ತಾಹ: ಸುಂದರ ಮಗು ಸ್ಪರ್ಧೆ

7

ಸಾಕ್ಷರತಾ ಸಪ್ತಾಹ: ಸುಂದರ ಮಗು ಸ್ಪರ್ಧೆ

Published:
Updated:

ಕನಕಗಿರಿ: ಸ್ಥಳೀಯ ಗ್ರಾಮ ಪಂಚಾಯಿತಿ ಮಾದರಿ ಲೋಕ ಶಿಕ್ಷಣ ಕೇಂದ್ರದ ಆಶ್ರಯದಲ್ಲಿ ಅಂತರರಾಷ್ಟ್ರೀಯ ಸಾಕ್ಷರತಾ ಸಪ್ತಾಹ ದಿನಾಚರಣೆ ಅಂಗವಾಗಿ ಶುಕ್ರವಾರ ಸುಂದರ ಆರೋಗ್ಯವಂತ ಮಗು ಸ್ಪರ್ಧೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಕ್ರೀಡಾಕೂಟ ನಡೆಯಿತು.ಸಂಪನ್ಮೂಲ ವ್ಯಕ್ತಿ ಪರಸಪ್ಪ ಹೊರಪೇಟೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜನ ಕಡಿವಾಲ, ಉಪನ್ಯಾಸಕ ಚಿದಾನಂದ ಮೇಟಿ, ಉಪ ಪ್ರಾಂಶುಪಾಲ ಎಚ್‌.ಕೆ. ಚಂದ್ರಪ್ಪ, ನೋಡಲ್‌ ಪ್ರೇರಕ ಶಾಮೀದ ಸಾಬ ಲೈನದಾರ ಮಾತನಾಡಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಗಮ್ಮ ನಾಯಕ, ಉಪಾಧ್ಯಕ್ಷ ಪ್ರಕಾಶ ಹಾದಿಮನಿ, ಸದಸ್ಯರಾದ ಶಾಂತಮ್ಮ ಕಂದಗಲ್‌, ಶಾರದಮ್ಮ ಚುಡಾಮಣಿ, ಸುನೀತಾ ಘನಾಥೆ, ಹೊನ್ನೂರುಸಾಬ ಉಪ್ಪು ಇದ್ದರು. ಶಿಕ್ಷಕರಾದ ಶೈಲಾ ಮೇಟಿ, ಶಂಶಾದಬೇಗಂ ಅವರು ಸ್ಪರ್ಧೆಯ ನಿರ್ಣಾಯಕರಾಗಿದ್ದರು.

ಬಹುಮಾನ: ಸುಂದರ ಆರೋಗ್ಯವಂತ ಮಗು ಸ್ಪರ್ಧೆಯಲ್ಲಿ 15 ಅಂಗನವಾಡಿ ಕೇಂದ್ರಗಳ ಮಕ್ಕಳು ಭಾಗವಹಿಸಿದ್ದರು. ಅನ್ನಪೂರ್ಣ ರಂಗಪ್ಪ ಪ್ರಥಮ, ಮಲ್ಲಿಕಾರ್ಜನ ನಾಗನಗೌಡ ದ್ವಿತೀಯ ಹಾಗೂ ಭವಾನಿ ಕೃಷ್ಣಪ್ಪ (ತೃತೀಯ) ಸ್ಥಾನ ಪಡೆದಿದ್ದಾರೆ.ಪಿಯು ಕಾಲೇಜಿನ ವಿದ್ಯಾರ್ಥಿಗಳಿ ಗಾಗಿ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವೀಣಾ ಜಿ ಪ್ರಥಮ, ಹುಸೇನಬಾಷ ದ್ವಿತೀಯ ಹಾಗೂ ರಾಜಾಹುಸೇನ ತೃತೀಯ ಸ್ಥಾನ ಪಡೆದರು. ಗ್ರಾಮ ಪಂಚಾಯಿತಿ ಸದಸ್ಯರಿಗೆ ಆಯೋಜಿಸಿದ್ದ ಚಮಚ ಮತ್ತು ಲಿಂಬೆಹಣ್ಣಿನ ಸ್ಪರ್ಧೆಯಲ್ಲಿ ಗ್ರಾಮ ಪಂಚಾಯಿತ ಸದಸ್ಯೆ ಶಾರದಮ್ಮ ಚೂಡಾಮಣಿ ಪ್ರಥಮ. ರಂಗಮ್ಮ ನಾಯಕ ದ್ವಿತೀಯ ಹಾಗೂ ಸುನೀತಾ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.ಪ್ರೇರಕರಾದ ಪದ್ಮಾವತಿ ಡಂಕನಕಲ್‌, ತ್ರಿವೇಣಿ ಮಂಗಳೂರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry