ಸಾಕ್ಷರತೆ ಬೆಳೆಸುವ ಹೊಣೆ ಜಾಥಾಕ್ಕೆ

7

ಸಾಕ್ಷರತೆ ಬೆಳೆಸುವ ಹೊಣೆ ಜಾಥಾಕ್ಕೆ

Published:
Updated:

ಚಿಟಗುಪ್ಪಾ: ರಾಜ್ಯದ 18 ಜಿಲ್ಲೆಗಳಲ್ಲಿ ಒಟ್ಟು 20.16ಲಕ್ಷ ಅನಕ್ಷರಸ್ಥರಿದ್ದು. ಅವರಿಗೆ ಸಾಕ್ಷರಸ್ಥರನ್ನಾಗಿ ಮಾಡುವ ಗುರಿ ಸಾಕ್ಷರ ಭಾರತ ಕಲಾ ಜಾಥಾ ಹೊಂದಿದೆ ಎಂದು ಲೋಕ ಶಿಕ್ಷಣ, ಸಾರ್ವಜನಿಕ ಗ್ರಂಥಾಲಯ, ಸಣ್ಣ ಉಳಿತಾಯ, ಲಾಟರಿ, ಪಶುಸಂಗೋಪನಾ ಸಚಿವ ರೇವುನಾಯಕ್ ಬೆಳಮಗಿ ತಿಳಿಸಿದ್ದಾರೆ.ಮಂಗಳವಾರ ಹುಮನಾಬಾದ್ ತಾಲ್ಲೂಕಿನ ಮನ್ನಾ ಏಖ್ಖೇಳಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಲೋಕ ಶಿಕ್ಷಣ ಸಮಿತಿ ಆಶ್ರಯದಲ್ಲಿ ನಡೆದ ಸಾಕ್ಷರ ಭಾರತ ಕಲಾ ಜಾಥಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ, ರಾಜ್ಯದಲ್ಲಿ ಮಹಿಳಾ ಸಾಕ್ಷರತಾ ಪ್ರಮಾಣ ಕಡಿಮೆ ಇರುವ ರಾಜ್ಯದ 18 ಜಿಲ್ಲೆಗಳ 107 ತಾಲ್ಲೂಕುಗಳ, 3508 ಗ್ರಾಮ ಪಂಚಾಯಿತಿಗಳು ಸಾಕ್ಷರ ಭಾರತ ಕಲಾ ಜಾಥಾ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದ್ದು, ಮಹಿಳಾ ಸಾಕ್ಷರತಾ ಪ್ರಮಾಣ ಹೆಚ್ಚಿಸಬೇಕಾದ ಜವಾಬ್ದಾರಿ ಪ್ರತಿ ನಾಗರಿಕರ ಮೇಲೆ ಇದ್ದು, ದೇಶದ ಸಮಗೃ ಅಭಿವೃದ್ಧಿಯೇ ಸಾಕ್ಷರತಾ ಕ್ರಾಂತಿ ಆಗಿದೆ ಎಂದು ನುಡಿದರು.ಶಾಸಕ ಬಂಡೆಪ್ಪಾ ಕಾಶೆಂಪೂರ ಮಾತನಾಡಿ, ಈ ಶತಮಾನದಲ್ಲಿ ನಡೆಯಬೇಕಾದ ಬಹುದೊಡ್ಡ ಕ್ರಾಂತಿ ಅಕ್ಷರ ಕ್ರಾಂತಿ ಆಗಿದೆ, ಸರ್ಕಾರ ಕನಿಷ್ಠ ಒಂದು ವರ್ಷದ ವರೆಗೂ ಅನಕ್ಷರಸ್ಥರಿಗೆ ತಿಂಗಳಿಗೆ 300 ರೂ. ಗೌರವ ಧನ ನೀಡಿ ಸಾಕ್ಷರರಾಗಲು ಕಾಲಾವಕಾಶ ನೀಡಿದಲ್ಲಿ ರಾಜ್ಯ ಸಂಪೂರ್ಣ ಸಾಕ್ಷರ ನಾಡು ಆಗಬಹುದು ಎಂದು ನುಡಿದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಸ್ತಾನ ನೂರೋದ್ದೀನ್, ಶೈಲೇಂದ್ರ ಬೆಲ್ದಾಳೆ ರಾಜ್ಯ ನಿರ್ದೇಶಕಿ ಎನ್.ಪ್ರಭ ಮಾತನಾಡಿದರು. ಲೋಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಬಿ.ಬಿ.ಕಾವೇರಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾಧಿಕಾರಿ ಸಮೀರ್ ಶುಕ್ಲ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್. ಬಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಭಜಂತ್ರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಾಜಿರಾವ ಡೊಣ್ಣೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್. ಜಗನ್ನಾಥ, ಸಿದ್ದಮ್ಮ ಪಾಟೀಲ್, ಚಂದ್ರಪ್ಪ ಹೆಬ್ಬಾಳಕರ್, ಟಿ.ಗಂಗಾಧರ್, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಬುಶೆಟ್ಟಿ ಮೆಂಗಾ, ಬಾಬುವಾಲಿ ಉಪಸ್ಥಿತರಿದ್ದರು.ನವಲಿಂಗ ಪಾಟೀಲ್ ನಿರೂಪಿಸಿದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶಂಕರ ಸಿಂಧೆ ಸ್ವಾಗತಿಸಿದರು. ಶಿವಪುತ್ರ ತಿಪ್ಪಣ್ಣ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry