ಸಾಕ್ಷರ ನಾಡು ನಿರ್ಮಾಣಕ್ಕೆ ಸಲಹೆ

7

ಸಾಕ್ಷರ ನಾಡು ನಿರ್ಮಾಣಕ್ಕೆ ಸಲಹೆ

Published:
Updated:

ಚಿಕ್ಕಬಳ್ಳಾಪುರ: ಎನ್‌ಎಸ್‌ಎಸ್ ಸ್ವಯಂ ಸೇವಕರು ಇಡೀ ಸಮುದಾಯವನ್ನು ಸಾಕ್ಷರಗೊಳಿಸುವ ಜೊತೆಗೆ ಸಾಮಾಜಕ್ಕೆ ಕಂಟಕಪ್ರಾಯವಾಗಿರುವ ಕಟ್ಟುಪಾಡುಗಳ ವಿರುದ್ಧ ಕೂಡ ಹೋರಾಟ ಮಾಡಬೇಕು ಎಂದು ಶಿಕ್ಷಣ ತಜ್ಞ ಪ್ರೊ. ಕೋಡಿರಂಗಪ್ಪ ಸಲಹೆ ನೀಡಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕ-2 ಮಂಗಳವಾರ ಏರ್ಪಡಿಸಿದ್ದ ‘ಸ್ವಯಂ ಸೇವಕ ಸಾಕ್ಷರ ಭಾರತ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಶಿಕ್ಷಣ ಭಾರತದ ಸಂವಿಧಾನ ಬದ್ಧ ಹಕ್ಕಾಗಿದ್ದು, ಇದನ್ನು ಎಲರ್ಲಿಗೂ ತಲುಪಿಸುವುದು ಯುವಕರ ಕರ್ತವ್ಯ’ ಎಂದರು.ದೇಶದಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಿದ್ದು, ಸಾಕ್ಷರರ ಸಂಖ್ಯೆ ಕಡಿಮೆಯಿದೆ. ಸಾಕ್ಷರತೆ ಮೂಲಕ ದೇಶದ ಭವಿಷ್ಯ ಬದಲಾಯಿಸಬಹುದು.ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಯುವಕರು ಸ್ವಯಂ-ಪ್ರೇರಣೆಯಿಂದ ತೊಡಗಿಕೊಳ್ಳಬೇಕು.ರಾಷ್ಟ್ರ ನಿರ್ಮಾಣದಲ್ಲಿ ಪ್ರತಿಯೊಬ್ಬರ ಪಾತ್ರ ಪ್ರಮುಖವಾದದ್ದು’ ಎಂದು ಅವರು ಹೇಳಿದರು.ಜಿಲ್ಲಾ ಸಾಕ್ಷರತಾ ಸಮಿತಿಯ ಕಾರ್ಯಕ್ರಮ ಅಧಿಕಾರಿ ದಸ್ತಗಿರಿ ಸಾಬ್ ಮಾತನಾಡಿ, ‘ಮಹಿಳೆಯ ಶೋಷಣೆ ತಪ್ಪಿಸಲು ಸಾಕ್ಷರತೆಯೇ ಬ್ರಹ್ಮಾಸ್ತ್ರವಾಗಿದ್ದು, ವಿದ್ಯಾವಂತ ಮಹಿಳೆಯರು ಸಮುದಾಯದ ಅಶಿಕ್ಷಿತರಿಗೆ ಸಾಕ್ಷರರನ್ನಾಗಿಸಬೇಕು.ಅವರಿಗೆ ಅಕ್ಷರಗಳನ್ನು ಕಲಿಸಬೇಕು’ ಎಂದರು.ಪ್ರೊ. ಕೆ.ಎಸ್.ಕೃಷ್ಣಮೂರ್ತಿ, ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ವಿ. ಕೃಷ್ಣಪ್ಪ, ರಾಷ್ಟ್ರೀಯ ಸೇವಾ ಯೋಜನೆಯ ಘಟಕ-2ರ ಕಾರ್ಯಕ್ರಮ ಅಧಿಕಾರಿ ಪ್ರೊ. ಬಿ ಆರ್. ವೆಂಕಟರಾಮು, ಪ್ರೊ. ರವಿಕುಮಾರ್, ಪ್ರೊ. ಬಾಲಪ್ಪ, ಸ್ವಯಂಸೇವಕರಾದ ಸಿ.ವಿ.ಮುರಳಿ, ಗಿರಿಜಾ, ರವಿಕುಮಾರ್, ನವೀನ್ ಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry