ಶುಕ್ರವಾರ, ನವೆಂಬರ್ 15, 2019
22 °C

`ಸಾಕ್ಷಿಗಳ ಕೊರತೆಯಿಂದ ಆರೋಪ ಪಟ್ಟಿ ಸಲ್ಲಿಸಲಿಲ್ಲ'

Published:
Updated:

ಗಾಜಿಯಾಬಾದ್ (ಪಿಟಿಐ): ಸಿಬಿಐ ಹಿರಿಯ ಅಧಿಕಾರಿಗಳ ನೀಡಿರುವ ಸಲಹೆಯಂತೆ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದ ಕಾರಣ ಆರುಷಿ-ಹೇಮರಾಜ್ ಜೋಡಿ ಕೊಲೆ ಪ್ರಕರಣದ ಆರೋಪಿಗಳಾಗಿರುವ ದಂತ ವೈದ್ಯ ದಂಪತಿ ರಾಜೇಶ್- ನೂಪುರ್ ಹಾಗೂ ಮತ್ತಿಬ್ಬರ ವಿರುದ್ಧ ಆರೋಪ ಪಟ್ಟಿ ದಾಖಲಿಸಲಿಲ್ಲ ಎಂದು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.ಪ್ರತಿವಾದಿ ವಕೀಲರ ಪಾಟಿ ಸವಾಲಿಗೆ ಉತ್ತರಿಸುತ್ತಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಜಿಎಲ್ ಕೌಲ್ ಅವರು, `ರಾಜೇಶ್ ಸಹೋದರ ದಿನೇಶ್ ತಲವಾರ್, ಕುಟುಂಬದ ಸ್ನೇಹಿತ ಸುನಿಲ್ ಚೌಧರಿ ಅವರ ವಿರುದ್ಧ ಸಾಂದರ್ಭಿಕ ಸಾಕ್ಷ್ಯಾಧಾರಗಳು ಸಾಕಷ್ಟಿದ್ದವು. ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸುವ ಉದ್ದೇಶವೂ ಇತ್ತು. ಆದರೆ ಹಿರಿಯ ಅಧಿಕಾರಿಗಳಾದ ನೀಲಭ್ ಕಿಶೋರ್ ಮತ್ತು ಜಾವೇದ್ ಅಹ್ಮದ್ ಅವರು `ಸಾಕಷ್ಟು ಸಾಕ್ಷಾಧಾರಗಳು ಇಲ್ಲದ ಕಾರಣ, ಪ್ರಕರಣ ಮುಕ್ತಾಯಗೊಳಿಸುವ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದರು. ಈ ಕಾರಣದಿಂದ ಅವರ ವಿರುದ್ಧ ಆರೋಪ ಪಟ್ಟಿ ದಾಖಲಿಸಲಿಲ್ಲ' ಎಂದು ಅವರು ನಾಯಾಲಯಕ್ಕೆ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)