ಮಂಗಳವಾರ, ನವೆಂಬರ್ 19, 2019
23 °C

ಸಾಕ್ಷ್ಯಚಿತ್ರ ಪ್ರದರ್ಶನ

Published:
Updated:
ಸಾಕ್ಷ್ಯಚಿತ್ರ ಪ್ರದರ್ಶನ

ಹಿರಿಯ ಚಿತ್ರ ಕಲಾವಿದ ಎಸ್.ಜಿ. ವಾಸುದೇವ್ ಅವರ ಕಲೆ ಮತ್ತು ಜೀವನ ಆಧಾರಿತ `ದಿ ಓಪನ್ ಫ್ರೇಮ್' ಸಾಕ್ಷ್ಯಚಿತ್ರ ಪ್ರದರ್ಶನವನ್ನು ಏ.14, ಭಾನುವಾರ ಬೆಳಿಗ್ಗೆ 11ಕ್ಕೆ ರಂಗಶಂಕರದಲ್ಲಿ ಆಯೋಜಿಸಲಾಗಿದೆ.ಜೊತೆಗೆ ಎಸ್.ಜಿ.ವಾಸುದೇವ್ ಕುರಿತು ಸಂವಾದ ನಡೆಯಲಿದೆ. ಇದರಲ್ಲಿ ವಾಸುದೇವ್ ಅವರ ನಿಕಟವರ್ತಿಗಳು, ಬಹುಕಾಲದ ಗೆಳೆಯರು ಅವರ ಕಲಾಕೃತಿ ಮತ್ತು ಜೀವನ ಕುರಿತು ವಿವರಗಳನ್ನು ನೀಡಲಿದ್ದಾರೆ. ಕಲಾವಿಮರ್ಶಕಿ ಲತಾಮಣಿ ಸಂವಾದವನ್ನು ನಿರ್ವಹಿಸಲಿದ್ದಾರೆ.

ಸಾಕ್ಷ್ಯಚಿತ್ರದ ಬಗ್ಗೆ: `ಚೋಳಮಂಡಲಂ ಆರ್ಟಿಸ್ಟ್ಸ್ ವಿಲೇಜ್' ನಿರ್ಮಾಣದಲ್ಲಿ ವಾಸುದೇವ್ ಅವರು ವಹಿಸಿದ ಪಾತ್ರವನ್ನು ಈ ಸಾಕ್ಷ್ಯಚಿತ್ರ ಕಟ್ಟಿಕೊಡುತ್ತದೆ. ಕಲಾಜಗತ್ತನ್ನು ಕಟ್ಟುವಲ್ಲಿ ಅವರು ತೋರಿದ ನಿಷ್ಠೆ ಮತ್ತು ಸತತ ಪರಿಶ್ರಮವನ್ನು ಚಿತ್ರದಲ್ಲಿ ತೋರಿಸಲಾಗಿದೆ.ಸಾಕ್ಷ್ಯಚಿತ್ರದ ನಿರ್ದೇಶನ: ಚೇತನ್ ಶಾ, ಛಾಯಾಗ್ರಹಣ : ನವೋಜ್, ಸಂಗೀತ: ಪ್ರಸನ್ನ, ಸಂಶೋಧನೆ: ಲತಾಮಣಿ.

ಪ್ರತಿಕ್ರಿಯಿಸಿ (+)