ಸಾಗರಿಕಾ ಸೌಂದರ್ಯ

7

ಸಾಗರಿಕಾ ಸೌಂದರ್ಯ

Published:
Updated:
ಸಾಗರಿಕಾ ಸೌಂದರ್ಯ

ಫ್ಯಾಷನ್ ಪರಿಕರಗಳಿಗೆ ಹೆಸರಾದ ಲೈಫ್‌ಸ್ಟೈಲ್‌ನ ಕೋರಮಂಗಲ ಓಯಾಸಿಸ್ ಮಾಲ್ ಮಳಿಗೆಯಲ್ಲಿ ಅಂದು ಮಧ್ಯಾಹ್ನ `ಚಕ್ ದೆ ಇಂಡಿಯಾ~ ಚಿತ್ರದ ನಾಯಕಿ ಸಾಗರಿಕಾ ಘಾಟ್ಗೆ ಬಂದಿದ್ದರು. ಹೆಸರಾಂತ ಮೇಕಪ್ ತಜ್ಞ ರಾಬರ್ಟ್ ಕೈಯಿಂದ ಮೇಕಪ್ ಮಾಡಿಸಿಕೊಂಡರು.

 

`ನೀವೂ ಸುಂದರಿಯಾಗಿ ಕಾಣಬಹುದು~ ಎಂದು ನೆರೆದ ಯುವತಿಯರಿಗೆ ಹುರಿದುಂಬಿಸಿದರು. ಈ ಮೂಲಕ ಲೈಫ್‌ಸ್ಟೈಲ್ ನಡೆಸುತ್ತಿರುವ `ಗೆಟ್ ದ ಲುಕ್~ ಅಭಿಯಾನಕ್ಕೆ ಚಾಲನೆ ಕೊಟ್ಟರು. ಈ ಸಂದರ್ಭದಲ್ಲಿ ಫ್ಯಾಷನ್ ಟಿಪ್‌ಗಳೂ ಇದ್ದವು.ಲೈಫ್ಸ್‌ಸ್ಟೈಲ್‌ನ ಈ ಅಭಿಯಾನಕ್ಕೆ ಆಯ್ಕೆಯಾದ ಸಾಮಾನ್ಯ ಮಹಿಳೆಯರು ಕೂಡ ಅಂತರ‌್ರಾಷ್ಟ್ರೀಯ ಖ್ಯಾತಿಯ ಮೇಕಪ್ ತಜ್ಞರಿಂದ ಮೇಕಪ್ ಮಾಡಿಸಿಕೊಳ್ಳಬಹುದು, ಹೆಸರಾಂತ ಛಾಯಾಗ್ರಾಹಕರಿಂದ ಫೋಟೊ ತೆಗೆಸಿಕೊಳ್ಳಬಹುದು.  ಕಾಸ್ಮೊಪಾಲಿಟನ್ ಮ್ಯಾಗಜಿನ್‌ನ ಮುಖಪುಟದಲ್ಲಿ ಕಾಣಿಸಿಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry